SHIVAMOGGA LIVE NEWS | 3 JANUARY 2023
ಶಿವರಾಜ್ ಕುಮಾರ್ ಸಿನಿಮಾ ಗೀತೆಗಳು
SHIMOGA : ರಾಗ ರಂಜನಿ ಟ್ರಸ್ಟ್ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜ.7ರಂದು ಸಂಜೆ 5.30ಕ್ಕೆ ಶಿವರಾಜ್ ಕುಮಾರ್ ಅಭಿನಯಿಸಿರುವ ಚಲನಚಿತ್ರಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ರಾಗ ರಂಜನಿ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ್ ದೀಕ್ಷಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದುರ್ಗಿಗುಡಿ ಕನ್ನಡ ಸಂಘ ಆಕ್ರೋಶ
SHIMOGA : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬಂಧನವನ್ನು ದುರ್ಗಿಗುಡಿ ಕನ್ನಡ ಸಂಘ ಖಂಡಿಸಿದೆ. ಕರ್ನಾಟಕದಲ್ಲಿ ಕನ್ನಡವೆ ಸಾರ್ವಭೌಮ. ಕನ್ನಡ ಪ್ರಾಧ್ಯಾನ್ಯತೆ ನಾಮಫಲಕಗಳು ಇರಬೇಕೆಂದು ಹೋರಾಟ ಮಾಡಿದ ಟಿ.ಎ.ನಾರಾಯಣಗೌಡರನ್ನೂ ಬಂದಿಸಿರುವುದು ಖಂಡನೀಯ. ಎಲ್ಲಾ ರಾಜ್ಯಗಳಲ್ಲಿ ಅವರ ಭಾಷೆಗೆ ಪ್ರಾಧ್ಯಾನತೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮಲತಾಯಿ ಧೋರಣೆ ಏಕೆ, ಸರ್ಕಾರ ಈ ಕೂಡಲೇ ಟಿ,ಎ.ನಾರಾಯಣಗೌಡ ಅವರನ್ನು ಬಿಡುಗಡೆ ಮಾಬೇಕು ಎಂದು ದುರ್ಗಿಗುಡಿ ಕನ್ನಡ ಸಂಘ ಆಗ್ರಹಿಸಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದೇ ಬೈಕ್‌ಗೆ ಒಂದೂವರೆ ಮೀಟರ್‌ಗಿಂತಲೂ ಹೆಚ್ಚು ಉದ್ದದ ದಂಡದ ಬಿಲ್, ಫೈನ್ ಮೊತ್ತ ಎಷ್ಟು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200