SHIVAMOGGA LIVE SPECIAL | ಶಿವಮೊಗ್ಗ ಜಿಲ್ಲೆಯ ಸುದ್ದಿಯನ್ನು ಜಗತ್ತಿಗೆ ವಿಸ್ತರಿಸಿದ ಹೆಮ್ಮೆ ನಮ್ಮದು. ಲಕ್ಷ ಲಕ್ಷ ಓದುಗರ ಬೆಂಬಲದಿಂದ ಜಿಲ್ಲೆಯ ನಂಬರ್ ಒನ್ ವೆಬ್‌ಸೈಟ್ ಆಗಿ ಬೆಳೆಯಲು ಸಾಧ್ಯವಾಯಿತು. ಶಿವಮೊಗ್ಗದ ಯಾವುದೇ ಪ್ರಮುಖ ಘಟನೆ, ಸಂಗತಿ ಇದ್ದರು ಜನ ಶಿವಮೊಗ್ಗ ಲೈವ್.ಕಾಂ ವೆಬ್‌ಸೈಟ್‌ನತ್ತ ಕಣ್ಣು ಹಾಯಿಸುತ್ತಾರೆ. ಇದು ನಮಗೆ ಹೆಮ್ಮೆಯ ಸಂಗತಿ.
ಇಷ್ಟು ಕಾಲ ಸುದ್ದಿಯನ್ನಷ್ಟೆ ನಿಮ್ಮ ಮುಂದಿಡುತ್ತಿದ್ದ ನಾವು, ಇನ್ಮುಂದೆ ಸುದ್ದಿಯಷ್ಟೇ ಅಲ್ಲ ಎಂಬ ಟ್ಯಾಗ್‌ಲೈನ್ ಜೊತೆಗೆ ಒಂದಷ್ಟು ವಿಶೇಷತೆಗಳನ್ನು ಒದಗಿಸಲು ಯೋಜಿಸಿದ್ದೇವೆ. ನಮ್ಮೂರು, ನಮ್ಮವರ ಕುರಿತು ಮಾಹಿತಿ ನೀಡುವುದೇ ಇದರ ಉದ್ದೇಶ. ಸ್ವಾತಂತ್ರ್ಯ ದಿನಾಚರಣೆಯಂದೇ ಈ ವಿಶೇಷ ಕಾಲಂಗಳ ಸರಣಿ ಆರಂಭವಾಗಲಿದೆ.
![]() |
ಯಾವೆಲ್ಲ ಕಾಲಂ ಶುರುವಾಗುತ್ತಿದೆ?
» ಸೋಮವಾರ
ಸೋಷಿಯಲ್ ಮೀಡಿಯ
ಜಗತ್ತಿನ ಅತ್ಯಂತ ಪವರ್‌ಫುಲ್ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳು ಬೆಳೆದು ನಿಂತಿವೆ. ಸಾಮಾಜಿಕ ಜಾಲತಾಣ ಶಿವಮೊಗ್ಗದಲ್ಲಿ ಪರಿವರ್ತನೆ ತಂದ ಬಗೆಯನ್ನು ಈ ಅಂಕಣದ ಮೂಲಕ ವಿವರಿಸುತ್ತೇವೆ. ಪ್ರತಿ ಸೋಮವಾರ ಸಂಜೆ 7 ಗಂಟೆಗೆ ಸಾಮಾಜಿಕ ಜಾಲತಾಣ ಕಾಲಂ ನಿಮ್ಮ ಮೊಬೈಲ್‌ಗೆ ತಲುಪಲಿದೆ.
» ಮಂಗಳವಾರ
ಶಾಪಿಂಗ್ ಸೆಂಟರ್
ಮಾಲ್, ದೊಡ್ಡ ಶೋ ರೂಂಗಳ ಪ್ರಭಾವದಿಂದ ಶಿವಮೊಗ್ಗದಲ್ಲಿಯು ಶಾಪಿಂಗ್ ಕಲ್ಚರ್ ಶುರುವಾಗಿದೆ. ನಿತ್ಯ ಶಾಪಿಂಗ್ ಮಾಡುವವರು ನಮ್ಮಲ್ಲಿದ್ದಾರೆ..! ಆದರೆ ವಿಭಿನ್ನ ವಸ್ತುಗಳು, ವಿಶೇಷ ಅನಿಸುವ ಅಂಗಡಿಗಳನ್ನು ಪರಿಚಯಿಸುವ ಉದ್ದೇಶದಿಂದ ಆರಂಭವಾದ ಕಾಲಂ ಶಾಪಿಂಗ್ ಸೆಂಟರ್. ಪ್ರತಿ ಮಂಗಳವಾರ ಸಂಜೆ 7 ಗಂಟೆಗೆ ಶಾಪಿಂಗ್ ಸೆಂಟರ್ ಅಂಕಣ ನಿಮ್ಮ ಕೈ ಸೇರಲಿದೆ.
» ಬುಧವಾರ
ದೇಗುಲ ದರ್ಶನ
ಕರಾವಳಿಯಂತೆ ಶಿವಮೊಗ್ಗ ಜಿಲ್ಲೆಯು ದೇಗುಲಗಳ ತವರು. ಇಲ್ಲಿ ಅನೇಕ ಪ್ರಮುಖ ದೇಗುಲಗಳಿವೆ. ವಿವಿಧ ಜಿಲ್ಲೆ, ಹೊರ ರಾಜ್ಯ, ವಿದೇಶದಿಂದೆಲ್ಲ ನಮ್ಮೂರ ದೇಗುಲಗಳಿಗೆ ಭಕ್ತರು ಬರುತ್ತಾರೆ. ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ. ಪ್ರಮುಖ ಚರ್ಚು, ಮಸೀದಿ ಸೇರಿದಂತೆ ವಿವಿಧ ಧರ್ಮಗಳ ಶ್ರದ್ಧಾ ಕೇಂದ್ರಗಳು ನಮ್ಮ ಜಿಲ್ಲೆಯಲ್ಲಿವೆ. ಅವುಗಳ ಐತಿಹ್ಯ, ವಿಶೇಷತೆ ತಿಳಿಸುವ ಪ್ರಯತ್ನವೆ ದೇಗುಲ ದರ್ಶನ ಅಂಕಣ. ಪ್ರತಿ ಬುಧಾವಾರ ಸಂಜೆ 7 ಗಂಟೆಗೆ ಮೊಬೈಲ್‌ನಲ್ಲೇ ದೇಗುಲ ದರ್ಶನ ಮಾಡಬಹುದು.
» ಗುರುವಾರ
ಶಿವಮೊಗ್ಗ ಟೂರಿಸಂ
ಮಲೆನಾಡಿನ ಹೆಬ್ಬಾಗಿಲು ನಮ್ಮೂರು. ಅನೇಕ ಪ್ರವಾಸಿ ತಾಣಗಳ ತವರು. ಪ್ರತಿ ಪ್ರವಾಸಿ ತಾಣವು ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಅದನ್ನು ತಿಳಿಸುವ ಪ್ರಯತ್ನ ಶಿವಮೊಗ್ಗ ಟೂರಿಸಂ. ಪ್ರತಿ ಗುರುವಾರ ಸಂಜೆ 7 ಗಂಟೆಗೆ ಶಿವಮೊಗ್ಗ ಟೂರಿಸಂ ಕಾಲಂ ನಿಮ್ಮ ಮೊಬೈಲ್‌ಗೆ ತಲುಪಲಿದೆ.
» ಶುಕ್ರವಾರ
ನೋಡಿ ಸ್ವಾಮಿ ನಾವಿರೋದು ಹೀಗೆ
ನಮ್ಮ ನಡುವಿನ ಕೆಲವರು ತುಂಬಾ ಸ್ಪೆಷಲ್ ಅನಿಸುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಹೆಸರು ಸಂಪಾದಿಸುವ, ಹಣ ಗಳಿಸುವ ಇರಾದೆ ಇರುವುದಿಲ್ಲ. ಆತ್ಮತೃಪ್ತಿಗಾಗಿ ತಮ್ಮದೇ ಹಣ, ಸಮಯ ಖರ್ಚು ಮಾಡಿ ಸಮಾಜಕ್ಕೆ ಉಪಕಾರಿಯಾಗುತ್ತಿರುತ್ತಾರೆ. ಎಲೆಮರೆ ಕಾಯಿಯಂತೆ ಇರುವ ಸ್ಪೆಷಲ್ ವ್ಯಕ್ತಿಗಳನ್ನು ಹುಡುಕಿ, ಪರಿಚಯಿಸುವುದು ಈ ಅಂಕಣದ ಉದ್ದೇಶ. ಪ್ರತಿ ಶುಕ್ರವಾರ ಸಂಜೆ 7 ಗಂಟೆಗೆ ನೋಡಿ ಸ್ವಾಮಿ ನಾವಿರೋದು ಹೀಗೆ ಕಾಲಂ ನಿಮ್ಮ ಮೊಬೈಲ್‌ಗೆ ತಲುಪಲಿದೆ.
» ಶನಿವಾರ
ಜೊತೆಗಿದ್ದವರು
ಅಂಕಣದ ಹೆಸರೆ ಹೇಳುವಂತೆ ಇದು ಜೊತೆಗಿದ್ದವರ ಕಥೆ. ನಮ್ಮೂರಿನ ಹಲವರು ಅನೇಕ ಪ್ರಮುಖರ ಜೊತೆಗೆ ಇದ್ದು ಅವರನ್ನು ಹತ್ತಿರದಿಂದ ಕಂಡಿದ್ದಾರೆ. ದೊಡ್ಡವರ ದೊಡ್ಡತನ ಮತ್ತು ಅವರಿಂದ ನಮ್ಮಂತಹ ಸಾಮಾನ್ಯರು ಕಲಿಯಬೇಕಾದ ಗುಣಗಳು, ಪ್ರಮುಖ ಘಟನೆಗಳ ಕುರಿತು ತಿಳಿಯುವ ಪ್ರಯತ್ನ ಇದು. ಪ್ರತಿ ಶನಿವಾರ ಸಂಜೆ 7 ಗಂಟೆಗೆ ಜೊತೆಗಿದ್ದವರು ಕಾಲಂ ನಿಮ್ಮ ಮೊಬೈಲ್‌ಗೆ ತಲುಪಲಿದೆ.
» ಭಾನುವಾರ
ನಮ್ಮೂರು ಶಿವಮೊಗ್ಗ
ನಮ್ಮ ಶಿವಮೊಗ್ಗದ ಪ್ರತಿ ಸ್ಥಳವು ಒಂದೊಂದು ಕಥೆ ಹೇಳುತ್ತದೆ. ಈ ಕಥೆಗಳನ್ನು ತಿಳಿಯಬೇಕಾದ್ದು ನಮ್ಮ ಕರ್ತವ್ಯ. ಹಾಗಾಗಿ ನಮ್ಮೂರು ಶಿವಮೊಗ್ಗವನ್ನು ತಿಳಿಯುವ ಪ್ರಯತ್ನ ಈ ಅಂಕಣ. ಪ್ರತಿ ಭಾನುವಾರ ಸಂಜೆ 7 ಗಂಟೆಗೆ ನಮ್ಮೂರು ಶಿವಮೊಗ್ಗ ಕಾಲಂ ನಿಮ್ಮ ಮೊಬೈಲ್‌ಗೆ ತಲುಪಲಿದೆ.
ಗುಡ್ ಮಾರ್ನಿಂಗ್ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಎಲ್ಲ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ಓದಿಸುವ ಪ್ರಯತ್ನ ಗುಡ್ ಮಾರ್ನಿಂಗ್ ಶಿವಮೊಗ್ಗ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ನಿಮ್ಮ ಮೊಬೈಲ್ ತಲುಪಲಿದೆ. ಶುಭೋದಯ ಶಿವಮೊಗ್ಗ, ನಮ್ಮೂರ ಹವಾಮಾನ, ಜಿಲ್ಲೆಯ ಏಳೂ ತಾಲೂಕಿನ ಸುದ್ದಿಗಳು ಇರಲಿದೆ. ಎರಡ್ಮೂರು ನಿಮಿಷದಲ್ಲಿ ಶಿವಮೊಗ್ಗ ಜಿಲ್ಲೆಯ ಕಂಪ್ಲೀಟ್ ಅಪ್‌ಡೇಟ್ ನೀಡುವ ಪ್ರಯತ್ನ ಇದು.
ಫಟಾಫಟ್ ಸುದ್ದಿಗಳು, ಅಡಿಕೆ ಧಾರಣೆ
ವೇಗದ ಪ್ರಪಂಚಕ್ಕೆ ವೇಗವಾಗಿ, ಸಂಕ್ಷಿಪ್ತವಾಗಿ ಸುದ್ದಿ ತಲುಪಿಸುವ ಪ್ರಯತ್ನ ಫಟಾಫಟ್ ನ್ಯೂಸ್. ಪ್ರಮುಖ ಮೂರು ಸುದ್ದಿಗಳ ಫಟಾಫಟ್ ನ್ಯೂಸ್ ದಿನವಿಡಿ ಆಗಾಗ ನಿಮ್ಮ ಮುಂದೆ ಕಾಣಸಿಗಲಿದೆ. ಒಮ್ಮೆ ಕ್ಲಿಕ್ ಮಾಡಿದರೆ ಮೂರು ಸುದ್ದಿಗಳನ್ನು ಫಟಾಫಟ್ ಎಂದು ಓದಬಹುದಾಗಿದೆ. ಇನ್ನು, ಪ್ರತಿ ದಿನ ಸಂಜೆ 6 ಗಂಟೆಗೆ ಅಡಿಕೆ ಧಾರಣೆ ತಿಳಿಸಲಾಗುತ್ತದೆ.
ಇದನ್ನೂ ಓದಿ ⇒ ಶಿವಮೊಗ್ಗದ ಸರ್ಕಾರಿ ಕಚೇರಿಗಳು ಜಗಮಗ, ಸಿಟಿ ಸೆಂಟರ್‌ನಲ್ಲಿ ತ್ರಿವರ್ಣ ಅಲಂಕಾರ, ಎಲ್ಲೆಲ್ಲು ಸ್ವಾತಂತ್ರ್ಯ ಸಂಭ್ರಮ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200