ಶಿವಮೊಗ್ಗದಲ್ಲಿ ಮಲ್ನಾಡ್‌ ಸ್ಟಾರ್ಟ್‌ಅಪ್‌ ಸಮ್ಮೇಳನಕ್ಕೆ ಚಾಲನೆ, ಕೇಂದ್ರ ಸಚಿವರು ಏನೆಲ್ಲ ಹೇಳಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

SHIVAMOGGA LIVE NEWS, 18 JANUARY 2025

ಶಿವಮೊಗ್ಗ : ಪಿಇಎಸ್ ಶಿಕ್ಷಣ ಸಂಸ್ಥೆಯ ಅನ್ವೇಷಣಾ ಇನ್ನೋವೇಶನ್ ಹಾಗೂ ಎಂಟರ್‌ಪ್ರಿನ್ಯೊರಿಯಲ್ ಫೋರಂನಿಂದ ಪ್ರೇರಣಾ ಕನ್ವೆಷನ್ ಹಾಲ್‌ನಲ್ಲಿ ಮಲ್ನಾಡ್‌ ಸ್ಟಾರ್ಟ್‌ಅಪ್‌ (Start Up) ಸಮ್ಮೇಳನ ನಡೆಯಿತು. ಕೇಂದ್ರ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಕಾರ್ಯಕ್ರಮ ಉದ್ಘಾಟಿಸದರು.

ಕೇಂದ್ರ ಸಚಿವರು ಏನೆಲ್ಲ ಹೇಳಿದರು?

#f1f1f1 - POINT 1ಗ್ರಾಮೀಣ ಭಾಗದಲ್ಲಿ ರೈತರ ಉತ್ಪನ್ನಗಳಿಗೆ ಕಡಿಮೆ ಬೆಲೆ ಇರುತ್ತದೆ. ಆದರೆ ಅದೇ ಉತ್ಪನ್ನಗಳ ಬೆಲೆ ಮಹಾನಗರಗಳಲ್ಲಿ ದುಬಾರಿ ಇರಲಿದೆ. ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಈ ಲಾಭವನ್ನು ರೈತರಿಗೆ ಕೊಡಿಸಲು ಕೇಂದ್ರ ಸರ್ಕಾರ ಕೆಲಸ ಮಾಡಲಿದೆ. ವಿವಿಧೆಡೆಗೆ ಕಳುಹಿಸುವ ಕೃಷಿ ಉತ್ಪನ್ನಗಳ ಸಾಗಣೆ ವೆಚ್ಚವನ್ನು ಕೇಂದ್ರ ಸರ್ಕಾರವೆ ಭರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಶಿವರಾಜ್ ಸಿಂಗ್ ಚೌಹಾಣ್‌ ತಿಳಿಸಿದರು.

Start up-Summit-at-Shimoga-PES-College

#f1f1f1 - POINT 2ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ಬ್ರಾಂಡಿಂಗ್‌, ಮೌಲ್ಯವರ್ಧನೆ ಮುಖ್ಯ. ಈ ಎಲ್ಲವುಗಳಿಗೆ ಸ್ಟಾರ್ಟ್ಅಪ್‌ಗಳು ಸಹಾಯ ಮಾಡಲಿವೆ. ರಾಜ್ಯದಲ್ಲಿ ಆಹಾರೋತ್ಪನ್ನಗಳ ಉದ್ಯಮ ಉತ್ತಮ ಕೆಲಸ ಮಾಡುತ್ತಿವೆ. ಕೃಷಿ ಸಂಬಂಧಿತ ವಲಯದಲ್ಲಿ ಸೃಜನಶೀಲ ಸಂಶೋಧನೆಗಳಿದ್ದರೆ, ಆ ಬಗ್ಗೆ ಮಾಹಿತಿ ನೀಡಿ. ನಾವು ಅದಕ್ಕೆ ಎಲ್ಲ ರೀತಿಯ ಸಹಾಯ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ನಮ್ಮ ಆರ್ಥಿಕತೆ ವಿಶ್ವದ ಮೂರನೆ ಅತಿದೊಡ್ಡ ಆರ್ಥಿಕತೆ ಆಗಲಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್‌ ಹೇಳಿದರು.

Start up-Summit-at-Shimoga-PES-College

#f1f1f1 - POINT 3ಭಾರತೀಯ ಆರ್ಥಿಕತೆಗೆ ರೈತರೆ ಆಧಾರ. ದೇಶದ ಜನಸಂಖ್ಯೆಯ ಶೇ.55 ರಷ್ಟು ಜನ ಕೃಷಿ ಹಾಗೂ ಸಂಬಂಧಿತ ವಲಯದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ರೈತರಿಲ್ಲದಿದ್ದರೆ ದೇಶ ನಡೆಯಲು ಸಾಧ್ಯವಿಲ್ಲ. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ. ಈ ವರ್ಷ ಕೃಷಿ ಹಾಗೂ ಸಂಬಂಧಿತ ವಲಯದ ಬೆಳವಣಿಗೆ ಹೆಚ್ಚಲಿದೆ. ಕೃಷಿಯನ್ನು ಲಾಭದಾಯಕ ಮಾಡಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇಶ ಎಂದರು.

Start up-Summit-at-Shimoga-PES-College

#f1f1f1 - POINT 4ರೈತರ ಬೆಳೆಗಳ ಇಳುವರಿ ಹೇಗೆ ಹೆಚ್ವಿಸಬೇಕು ಎಂಬ ಬಗ್ಗೆ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿವೆ. ನೂರಕ್ಕು ಹೆಚ್ಚು ಉತ್ಕೃಷ್ಟ ತಳಿಯ ಆಹಾರ ಬೆಳೆಯ ಬೀಜಗಳನ್ನು ಸಂಶೋಧನೆ ನಡೆಸಿ, ರೈತರಿಗೆ ನೀಡಲಾಗಿದೆ. ಸ್ಟಾರ್ಟ್ಅಪ್‌ಗಳು ಉತ್ಪಾದನಾ ವೆಚ್ಚ ಹೇಗೆ ಕಡಿಮೆ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ರೈತರ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ರಸಗೊಬ್ಬರಕ್ಕೆ 2 ಲಕ್ಷ ಕೋಟಿ ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್‌ ತಿಳಿಸಿದರು.

Start up-Summit-at-Shimoga-PES-College

100 ಕೋಟಿಯ ಆದಾಯದ ಗುರಿ

ಕೇಂದ್ರ ಕೃಷಿ ಸಚಿವರು ಜಿಲ್ಲೆಗೆ ಮೆಕ್ಕೆಜೋಳ ಸಂಶೋಧನಾ ಕೇಂದ್ರವನ್ನು ನೀಡಿ, ಜಿಲ್ಲೆಗೆ ಆಗಮಿಸಿದ್ದಾರೆ. ನವೋದ್ಯಮಕ್ಕೆ ಸಹಾಯ ಸಿಗಬೇಕು. ರೈತರು ಸ್ವಯಂ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂಬ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ಆಹಾರ ಉದ್ಯಮದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ 100 ಕೋಟಿ ರೂ. ಆದಾಯದ ಗುರಿ ಇದೆ. ಹಾಗಾಗಿಆಹಾರ ಬೆಳೆಗಳಿಗೂ ಹವಾಮಾನ ಆಧಾರಿತ ವಿಮೆ ಪದ್ಧತಿಯನ್ನು ಕೃಷಿ ಸಚಿವರು ಜಾರಿಗೆ ತರಬೇಕು.

ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

RED-LINE-

Start up-Summit-at-Shimoga-PES-College

ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯನಾಯ್ಕ, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ, ಅನ್ವೇಷಣಾ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪಾಟೀಲ್, ಪಿಇಎಸ್ ಟ್ರಸ್ಟ್‌ ಸಿಇಒ ಬಿ.ಆರ್. ಸುಭಾಷ್, ಪ್ರಮುಖರಾದ ಟಿ.ಡಿ.ಮೇಘರಾಜ್, ದಿಶಾ, ಮಾಜಿ ಶಾಸಕರಾದ ಕೆ.ಜಿ.ಕುಮಾರ ಸ್ವಾಮಿ, ಎಸ್.ರುದ್ರೇಗೌಡ, ಎಫ್‌ಬಿಒ ಪದಾಧಿಕಾರಿಗಳಿದ್ದರು.

Start up-Summit-at-Shimoga-PES-College

ಇದನ್ನೂ ಓದಿ » ಶಿವಮೊಗ್ಗ ಸಿಟಿ ಬಸ್ಸುಗಳ ಚಾಲಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್‌ ಪೊಲೀಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 18, 2025

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ಕಾರಿನಲ್ಲಿ ದಿಢೀರ್‌ ಬೆಂಕಿ, ಕೆಲವೇ ಕ್ಷಣದಲ್ಲಿ ಮುಂಭಾಗ ಆಹುತಿ

ಕಾರಿನಲ್ಲಿ ದಿಢೀರ್‌ ಬೆಂಕಿ, ಕೆಲವೇ ಕ್ಷಣದಲ್ಲಿ ಮುಂಭಾಗ ಆಹುತಿ

ಜಯನಗರ ಪೊಲೀಸ್‌ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

ಜಯನಗರ ಪೊಲೀಸ್‌ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

ಶಿವಮೊಗ್ಗದಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 31 ಮಾರ್ಚ್‌ 2026

ಶಿವಮೊಗ್ಗದಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 31 ಮಾರ್ಚ್‌ 2026

ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಬೇಸಿಗೆ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ

ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಬೇಸಿಗೆ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

Leave a Comment