SHIMOGA NEWS, 16 OCTOBER 2024 : ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಅತ್ಯಾಧುನಿಕ ಹೃದಯ ಕ್ಯಾಥೆಟರೈಸೇಶನ್ ಪ್ರಯೋಗಾಲಯದಲ್ಲಿ ಬೆಳಗಾವಿಯ 86 ವರ್ಷದ ಮಹಿಳೆಯೊಬ್ಬರಿಗೆ ಹೃದಯ ಸಂಬಂಧಿ ಟ್ರಾನ್ಸ್ ಕೆಥೆಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ (TAVI) ಯಶಸ್ವಿಯಾಗಿ ನಡೆಸಲಾಗಿದೆ.
ತಜ್ಞ ವೈದ್ಯರ ತಂಡ
ಬೆಂಗಳೂರಿನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಮೆರಿಲ್ ಲೈಫ್ ಸೈನ್ಸಸ್ನ ಟಿಎವಿಐ ಕಾರ್ಯಕ್ರಮದ ಡಾ. ಬಿ.ಸಿ.ಶ್ರೀನಿವಾಸ್, ನಂಜಪ್ಪ ಲೈಫ್ ಕೇರ್ನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಜೆ. ನರೇಂದ್ರ ಮತ್ತು ಹಿರಿಯ ಹೃದಯ ಅರಿವಳಿಕೆ ತಜ್ಞ ಡಾ. ಟಿ.ಎಸ್.ಹರೀಶ್ ನೇತೃತ್ವದಲ್ಲಿ ಯಶಸ್ವಿಯಾಗಿ ಟಿಎವಿಐ ನೆರವೇರಿಸಲಾಗಿದೆ.
![]() |
ರೋಗಿ ವಯೋಸಹಜ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ತಪಾಸಣೆಗೆ ಒಳಪಡಿಸಿದಾಗ ತೀವ್ರ (ಅಯೋರ್ಟಿಕ್ ಸ್ಟೆನೋಸಿಸ್) ಮಹಾಪಧಮನಿಯ ಕವಾಟ ಕಿರಿದಾಗುವಿಕೆ ಸಮಸ್ಯೆ ಹೊಂದಿರುವುದು ಪತ್ತೆಯಾಯಿತು. ರೋಗಿ ಮತ್ತು ಅವರ ಕುಟುಂಬಕ್ಕೆ ಶಸ್ತ್ರಚಿಕಿತ್ಸೆ ರಹಿತ ಟಿಎವಿಐ ಕಾರ್ಯವಿಧಾನ ಶಿಫಾರಸ್ಸು ಮಾಡಲಾಯಿತು.
» ಏನಿದು ಟಿಎವಿಐ?
ಈ ಕುರಿತು ಮಾಹಿತಿ ನೀಡಿರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಜೆ.ನರೇಂದ್ರ, ಟಿಎವಿಐ ಚಿಕಿತ್ಸೆಯು ರೋಗಿಯ ಮಹಾಪಧಮನಿಯ ಕವಾಟ ಬದಲಿಸುವ ಕಾರ್ಯವಿಧಾನವಾಗಿದೆ. ಹಾನಿಗೊಳಗಾದ ವ್ಯಕ್ತಿಯ ಮಹಾಪಧಮನಿಯ ಕವಾಟ ತೆಗೆದು ಜೈವಿಕ ಅಥವಾ ಯಾಂತ್ರಿಕ ಕವಾಟದಿಂದ ಬದಲಿಸಲಾಗುತ್ತದೆ. ಇದನ್ನು ಬದಲಿಸುವುದರಿಂದ ಹೃದಯದ ಮೂಲಕ ರಕ್ತದ ಹರಿವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ನಂಜಪ್ಪ ಕ್ಯಾನ್ಸರ್ ಕೇರ್ ಆಸ್ಪತ್ರೆ ಶುರು, ಒಂದೇ ಸೂರಿನಡಿ ಎಲ್ಲ ಸೌಲಭ್ಯ, ಅತ್ಯಾಧುನಿಕ ತಂತ್ರಜ್ಞಾನ
ಟಿಎವಿಐ ಲಕ್ಷಣಗಳೇನು?
ಎದೆ ನೋವು, ತಲೆ ತಿರುಗುವಿಕೆ, ಹೃದಯ ಬಡಿತದ ಏರಿಳಿತ, ಆಯಾಸ, ಉಸಿರಾಟದ ತೊಂದರೆ ಮತ್ತು ಮೂರ್ಛೆ ಇದರ ಸಾಮಾನ್ಯ ಲಕ್ಷಣಗಳಾಗಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಜೀವಹಾನಿ ತಪ್ಪಿಸಬಹುದಾಗಿದೆ. ಚಿಕಿತ್ಸೆ ಸಂದರ್ಭ ಕಿರಿದಾದ ಟ್ಯೂಬ್ ಅನ್ನು (ಕ್ಯಾತಟರ್) ಕಾಲಿನ ಅಥವಾ ಎದೆಯ ರಕ್ತನಾಳಗಳ ಮೂಲಕ ಹೃದಯದ ಮಹಾಪಧಮನಿಯ ಕಡೆಗೆ ಕಳುಹಿಸಿ ಕವಾಟ ಬದಲಿಸಲಾಗುತ್ತದೆ.
ಇದನ್ನೂ ಓದಿ » ಯಶಸ್ಸಿಗೆ ಬೇಕು ಈ 3 ತತ್ವ, ವಿದ್ಯಾರ್ಥಿಗಳಿಗೆ ಸಕ್ಸಸ್ ಸೀಕ್ರೆಟ್ ತಿಳಿಸಿದ ನಂಜಪ್ಪ ಟ್ರಸ್ಟ್ ಅಧ್ಯಕ್ಷ
ಟಿಎವಿಐ ಚಿಕಿತ್ಸೆಯ ಮೂರು ದಿನಗಳ ನಂತರ ರೋಗಿಯನ್ನು ಮನೆಗೆ ಕಳುಹಿಸಲಾಯಿತು. ಬೆಳಗಾವಿಯ ಮಹಿಳೆ ಚಿಕಿತ್ಸೆ ಪಡೆದು ತಮ್ಮ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200