ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 2 DECEMBER 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಾಜ್ಯದ ವಿಶೇಷಚೇತನರ ಶಾಲೆಗಳಲ್ಲಿ ಸೇವಾನಿರತರಾಗಿರುವ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಗೌರವಧನ ದ್ವಿಗುಣಗೊಳಿಸಬೇಕು ಎಂದು ಒತ್ತಾಯಿಸಿ ಇಂದು ಜಿಲ್ಲಾ ವಿಶೇಷ ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘದ ವತಿಯಿಂದ ಡಿಸಿ ಕಚೇರಿ ಎದುರು ಸಾಂಕೇತಿಕ ಮುಷ್ಕರ ನಡೆಸಲಾಯಿತು.
ಅನುದಾನ ನೀತಿ ಸಂಹಿತೆ ಪ್ರಕಾರ ರಾಜ್ಯದ ಕೇವಲ 32 ಸಂಸ್ಥೆಗಳಿಗೆ ಅನುದಾನ ಸಿಗುತ್ತಿದೆ. ಅನುದಾನಿತ ಶಾಲಾ ಶಿಕ್ಷಕರಿಗೆ ದೊರಕುವ ರೀತಿಯಲ್ಲೇ, ಸಂಬಳ ನೀಡುವ ವ್ಯವಸ್ಥೆ ಆಗಬೇಕಿದೆ. ವಿಶೇಷ ಶಿಕ್ಷಕರಿಗೆ 6,500 ರೂ, ಇತರೆ ಸಿಬ್ಬಂದಿಗಳಿಗೆ 4000 ರೂ. ಗೌರವ ಧನ ಸಿಗುತ್ತಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಂದರ್ಭ 13,500 ರೂ, ಹಾಗೂ 9,000 ರೂ.ಗೆ ಗೌರವಧನ ಏರಿಕೆಯಾಗಿತ್ತು. 2014ರಿಂದ ಇದುವರೆಗೂ ವೇತನ ಹೆಚ್ಚಳ ಮಾಡಿಲ್ಲ ಎಂದು ದೂರಿದರು.
ಶಿಶುಕೇಂದ್ರೀಕೃತ ಸಹಾಯಧನ ಯೊಜನೆಯಡಿ ಸುಮಾರು 141 ವಿಶೇಷ ಶಾಲೆಗಳು ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅನುದಾನ ಪಡೆಯುತ್ತಿವೆ. ಇದರಲ್ಲಿ ಸೇವಾ ನಿರತರಾದ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿದ್ದ ಕನಿಷ್ಟ ವೇತನ ಕೊಡಬೇಕೆಂದು ಆಗ್ರಹಿಸಿದರು.
ಸಂಘದ ಪ್ರಮುಖರಾದ ರಾಮಪ್ಪ ಜಿ.ಬಿ., ಪ್ರಿವೇಶ ಸಬಾಸ್ಟಿನ್, ರವೀಂದ್ರ, ಪುಟ್ಟರಾಜು ಕೆ.ಬಿ., ಗಾಯತ್ರಿ ನಾಯಕ್, ತೇಜಪ್ಪ, ಈರಪ್ಪ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]