SHIVAMOGGA LIVE | 26 JULY 2023
SHIMOGA : ಜೆಸಿಬಿ ಬಳಸಿ ಎಟಿಎಂ ಮೆಷಿನ್ (ATM Machine) ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಘಟನೆಯಲ್ಲಿ ಎಟಿಎಂ ಮೆಷಿನ್ ಹಾನಿಗೀಡಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಇದೆ ಮಾದರಿ ಎಟಿಎಂ ದರೋಡೆ ನಡೆದಿತ್ತು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ನೂರಡಿ ರಸ್ತೆಯಲ್ಲೆ ಎಟಿಎಂಗೆ ಜೆಸಿಬಿ
ಶಿವಮೊಗ್ಗದ ನೂರು ಅಡಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂ ದರೋಡೆಗೆ ಪ್ರಯತ್ನಿಸಲಾಗಿದೆ. ಶಿವಾಲಯ ಮುಂಭಾಗ ಇರುವ ಎಟಿಎಂಗೆ ತಡರಾತ್ರಿ ಕಳ್ಳನೊಬ್ಬ ಜೆಸಿಬಿ ನುಗ್ಗಿಸಿದ್ದಾನೆ. ಎಟಿಎಂ ಕೇಂದ್ರದ ರೋಲಿಂಗ್ ಶಟರ್ ಮುರಿದು, ಗಾಜಿನ ಬಾಗಿಲು ಹಾನಿಗೊಳಿಸಿ ಎಟಿಎಂ ಕೇಂದ್ರದ ಒಳಗೆ ಜೆಸಿಬಿ ನುಗ್ಗಿಸಿದ್ದಾನೆ.

ಎಟಿಎಂ ಮೆಷಿನ್‌ಗೆ ಹಾನಿ
ಜೆಸಿಬಿ ನುಗ್ಗಿಸಿದ್ದರಿಂದ ಮೆಷಿನ್‌ಗೆ (ATM Machine) ಹಾನಿಯಾಗಿದೆ. ಜೆಸಿಬಿಯಿಂದ ಎಟಿಎಂ ಮೆಷಿನನ್ನೆ ಕೀಳಲು ಪ್ರಯತ್ನಿಸಲಾಗಿದೆ. ಶಿವಾಲಯ ಮುಂದೆ ನಿಲ್ಲಿಸಿದ್ದ ಜೆಸಿಬಿ ಬಳಸಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ – ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಸರ್ವ ಪಕ್ಷದ ಪಾಲಿಕೆ ಸದಸ್ಯರು ಗರಂ, ಎಲ್ಲೆಲ್ಲಿ ಏನೇನು ಅವಾಂತರ ಅಗಿದೆ?
ಗಸ್ತು ತಿರುಗುತ್ತಿದ್ದ ವಿನೋಬನಗರ ಠಾಣೆ ಪೊಲೀಸರನ್ನು ಕಂಡು ಕಳ್ಳ ಜೆಸಿಬಿ ಬಿಟ್ಟು ಪರಾರಿಯಾಗಿದ್ದಾನೆ.
ಮಹಾರಾಷ್ಟ್ರದಲ್ಲಿ ಇದೆ ಮಾದರಿ ದರೋಡೆ
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯಲ್ಲಿ ಜೆಸಿಬಿ ಬಳಸಿ ಇದೆ ಮಾದರಿ ಎಟಿಎಂ ದರೋಡೆ ಮಾಡಲಾಗಿತ್ತು. 2022ರ ಏಪ್ರಿಲ್‌ನಲ್ಲಿ ಕಳ್ಳನೊಬ್ಬ ಜೆಸಿಬಿ ಬಳಸಿ ಜೆಸಿಬಿ ಎಟಿಎಂ ಮೆಷಿನನ್ನೆ ಹೊತ್ತೊಯ್ದಿದ್ದ.
.jpeg)
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





