ಜೈಲಿಗೆ ಹೋದರೂ ಪಾಠ ಕಲಿಯಲಿಲ್ಲ, ಬಿಡುಗಡೆಯಾಗಿ ಬಂದ ಮೇಲೆ ಮತ್ತೆ ಜೀವ ಬೆದರಿಕೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS |  THREAT | 06 ಮೇ 2022

ಕೊಲೆ ಬೆದರಿಕೆ ಆರೋಪ ಸಂಬಂಧ ಕಂಬಿ ಎಣಿಸಿ ಬಂದ ಆರೋಪಿಗಳು ಮತ್ತೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಇವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಉಸ್ಮಾನ್ ಮತ್ತು ಅಬ್ಬಾಸ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಭರತ್ ಮತ್ತು ಸುಮಂತ ಎಂಬುವವರನ್ನು ಸಾಯಿಸುತ್ತೇವೆ ಎಂದು ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಏನಿದು ಪ್ರಕರಣ?

ಏಪ್ರಿಲ್ 23ರಂದು ಭರತ್ ಎಂಬಾತನಿಗೆ ಉಸ್ಮಾನ್, ಅಬ್ಬಾಸ್ ಮತ್ತು ಸಲ್ಮಾನ್ ಎಂಬುವವರು ಜೀವ ಬೆದರಿಕೆ ಒಡ್ಡಿದ್ದರು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು.

ಜೈಲಿನಿಂದ ಬಿಡುಗಡೆಯಾಗಿ ಬಂದ ಉಸ್ಮಾನ್ ಮತ್ತು ಅಬ್ಬಾಸ್ ಮತ್ತೆ ಜೀವ ಬೆದರಿಕೆ ಒಡ್ಡಿದ್ದಾರೆ. ಭರತನ ಸಂಬಂಧಿಯೊಬ್ಬರ ಮನೆ ಬಳಿಗೆ ಬಂದು ಕೊಲೆ ಬೆದರಿಕೆ ಒಡ್ಡಿದ್ದಾರೆ. ‘ಭರತ ಮತ್ತು ಸುಮಂತ ಎಲ್ಲಿದ್ದಾರೆ. ನಮ್ಮ ವಿರುದ್ಧ ಎಷ್ಟು ಕಂಪ್ಲೇಂಟ್ ಕೊಟ್ಟರೂ ಅವರನ್ನು ಬಿಡುವುದಿಲ್ಲ. ಅವರನ್ನು ಸಾಯಿಸುತ್ತೇವೆ’ ಎಂದು ಇಬ್ಬರು ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Shimoga Nanjappa Hospital

ಇದನ್ನೂ ಓದಿ – ಶಿವಮೊಗ್ಗದಲ್ಲಿ ಗಾಂಜಾ ಅಮಲಿನಲ್ಲಿದ್ದರ ವಿಚಾರಣೆ ವೇಳೆ ದೊಡ್ಡ ಸಂಚು ಬಯಲು, ಏನದು ಪ್ಲಾನ್?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment