ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 14 AUGUST 2023
SHIMOGA : ಲೋಕಾಯುಕ್ತ (Lokayukta) ಸಂಸ್ಥೆ ಹೆಸರು ಬಳಸಿ ಸರ್ಕಾರಿ ಅಧಿಕಾರಿಗೆ ಕರೆ ಮಾಡಿ ಬೆದರಿಕೆಯೊಡ್ಡಿ, ಹಣಕ್ಕೆ ಬೇಡಿಕೆ ಇಡಲಾಗಿದೆ. ಈ ಸಂಬಂಧ ಶಿವಮೊಗ್ಗದ (Shimoga) ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶಿವಮೊಗ್ಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎ.ಜಿ.ಸಿದ್ದಣ್ಣ ಅವರಿಗೆ ವ್ಯಕ್ತಿಯೊಬ್ಬ ಲೋಕಾಯುಕ್ತ ಸಂಸ್ಥೆಯ ಹೆಸರು ಬಳಕೆ ಮಾಡಿ ಕರೆ ಮಾಡಿದ್ದಾನೆ. ಜು.19ರಂದು ಕೃಷ್ಣಮೂರ್ತಿ ಎಂಬಾತ ಸಿದ್ದಣ್ಣ ಅವರಿಗೆ ಕರೆ ಮಾಡಿ ‘ತಾನು ಬೆಂಗಳೂರಿನ ಲೋಕಾಯುಕ್ತ ಕಚೇರಿಯವನು. ನಿಮ್ಮ ಫೈಲ್ ಒಂದು ನಮ್ಮ ಬಳಿ ಬಂದಿದೆ. ಬೆಂಗಳೂರಿಗೆ ಬಂದು ಮುಕ್ತಾಯ ಮಾಡಿʼ ಎಂದು ತಿಳಿಸಿದ್ದ.
ಇದನ್ನೂ ಓದಿ- ಶಿವಮೊಗ್ಗದ ಇನ್ಸ್‌ಪೆಕ್ಟರ್‌ಗೆ ಕೇಂದ್ರ ಗೃಹ ಸಚಿವರ ಪದಕ
ಒಂದು ಲಕ್ಷಕ್ಕೆ ಡಿಮಾಂಡ್
ಎರಡು ದಿನದ ಬಳಿಕ ಸಿದ್ದಣ್ಣ ಅವರಿಗೆ ಪುನಃ ಕರೆ ಮಾಡಿದ ಕೃಷ್ಣಮೂರ್ತಿ, ಒಂದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದನ್ನು ಸಿದ್ದಣ್ಣ ಅವರು ಗಂಭೀರವಾಗಿ ಪರಿಗಣಿಸದೆ ಇದ್ದಾಗ, ಕೃಷ್ಣಮೂರ್ತಿ ಪುನಃ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ. ‘ಬೆಂಗಳೂರಿಗೆ ಬಂದು ಒಂದು ಲಕ್ಷ ರೂ. ಹಣ ತಲುಪಿಸುವಂತೆ ಸೂಚಿಸಿದರೂ ಮಾಡಿಲ್ಲ. ಅದ್ದರಿಂದ ಫೈಲ್ ಅನ್ನು ಸಾಹೇಬರಿಗೆ ಕಳುಹಿಸಲಾಗುತ್ತದೆ. ಬಳಿಕ ನಿಮ್ಮ ಮೇಲೆ ರೇಡ್ ಆಗಲಿದೆʼ ಎಂದು ಎಚ್ಚರಿಕೆ ನೀಡಿದ್ದ.
ಘಟನೆ ಸಂಬಂಧ ಸಿದ್ದಣ್ಣ ಅವರು ತಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ದೂರು ನೀಡಿದ್ದಾರೆ. ಬೆದರಿಕೆ ಒಡ್ಡಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಜಯನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
.jpeg)
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















