ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ನವೆಂಬರ್ 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಪ್ರತಿ ದಿನ ತಮಗೆ ಮಾಮೂಲಿ ಕೊಡಬೇಕು. ಇಲ್ಲವಾದಲ್ಲಿ ಪೆಟ್ರೋಲ್ ಸುರಿದು ಹೆಂಡತಿ, ಮಕ್ಕಳ ಸಹಿತ ಅಂಗಡಿಯನ್ನು ದಹಿಸಿ ಬಿಡುತ್ತೇವೆ ಎಂದು ವ್ಯಾಪಾರಿಯೊಬ್ಬರಿಗೆ ಯುವಕರು ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ವ್ಯಾಪಾರಿಯ ತಲೆಗೆ ಚಾಕುವಿನಿಂದ ಗಾಯಗೊಳಿಸಿದ್ದಾರೆ.
ಶಿವಮೊಗ್ಗದ ಮಿಳಘಟ್ಟ ಮುಖ್ಯರಸ್ತೆಯಲ್ಲಿನ ದಿನಸಿ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಬೀಮಾನಂದ ಶೆಟ್ಟಿ ಎಂಬುವವರಿಗೆ ಬೆದರಿಕೆಯೊಡ್ಡಿ ಹಲ್ಲೆ ಮಾಡಲಾಗಿದೆ.
ಏನಿದು ಪ್ರಕರಣ?
ಷಹಬಾಜ್, ಸುಹಾನ್, ಮುನ್ನಾ ಮತ್ತಿತರರು ಬೀಮಾನಂದ ಶೆಟ್ಟಿ ಅವರ ದಿನಸಿ ಅಂಗಡಿಗೆ ರಾತ್ರಿ ಬಂದು ಬಾಳೆಹಣ್ಣು ಸೇರಿದಂತೆ ತಿಂಡಿ, ತಿನಿಸು ತಿಂದಿದ್ದಾರೆ. ಹಣ ಕೊಡುವಂತೆ ಬೀಮಾನಂದ ಶೆಟ್ಟಿ ಅವರು ಕೇಳಿದಾಗ ಆರೋಪಿಗಳು ನಿರಾಕರಿಸಿದ್ದಾರೆ. ಅಲ್ಲದೆ ತಾವು ಈ ಏರಿಯಾದ ರೌಡಿಗಳು ತಮಗೆ ಮಾಮೂಲಿ ಕೊಡಬೇಕು ಎಂದು ಬೆದರಿಸಿದ್ದಾರೆ.
ಇದನ್ನು ವಿರೋಧಿಸಿದ್ದಕ್ಕೆ ಬೀಮಾನಂದ ಶೆಟ್ಟಿ ಅವರತ್ತ ಚಾಕು ತೋರಿಸಿ, ತಲೆ ಭಾಗಕ್ಕೆ ಚಾಕುವಿನಿಂದ ಗಾಯಗೊಳಿಸಿದ್ದಾರೆ. ಅಲ್ಲದೆ ತಮಗೆ ಮಾಮೂಲಿ ಕೊಡದಿದ್ದರೆ ಪೆಟ್ರೋಲ್ ಸುರಿದು ಹೆಂಡತಿ, ಮಕ್ಕಳು ಸಹಿತ ಅಂಗಡಿಗೆ ಬೆಂಕಿ ಹೆಚ್ಚುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ.
ಬೀಮಾನಂದ ಶೆಟ್ಟಿ ಅವರು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






