ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | TRAFFIC | 13 ಮೇ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಒನ್ ವೇ ರಸ್ತೆಯಲ್ಲಿ ಟೂ ವೇ ಸಂಚಾರ. ವಾಹನ ಸವಾರರಿಗೆ ತಪ್ಪದ ಕಿರಿಕಿರಿ. ಸಂಚಾರಿ ಪೊಲೀಸರ ನಿರ್ಲಕ್ಷ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬೇಸರ.
ಶಿವಮೊಗ್ಗದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ವಾಹನಗಳಿಗೆ ಒನ್ ವೇ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಸಂಬಂಧ ಪೊಲೀಸ್ ಇಲಾಖೆ ನಿಯಮವನ್ನು ಹೊರಡಿಸಿದ್ದು, ಬ್ಯಾನರ್ ಕೂಡ ಅಳವಡಿಸಲಾಗಿದೆ. ಆದರೆ ಒನ್ ವೇ ನಿಯಮ ಪಾಲನೆ ಆಗುತ್ತಿಲ್ಲ. ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದೆ.
ಕಿರು ರಸ್ತೆಯಲ್ಲಿ ಕಿರಿಕಿರಿ
ದುರ್ಗಿಗುಡಿ ಮುಖ್ಯ ರಸ್ತೆ ಅತ್ಯಂತ ಕಿರಿದಾಗಿದೆ. ಆದರೆ ವಾಹನ ದಟ್ಟಣೆ ಹೆಚ್ಚಿದೆ. ಅಂಗಡಿಗಳು, ಕಚೇರಿಗಳು ಹೆಚ್ಚಿರುವುದು ಮತ್ತು ಪ್ರಮುಖ ರಸ್ತೆಗೆ ಸಂಪರ್ಕ ರಸ್ತೆ ಆಗಿರುವುದರಿಂದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು. ಈ ಕಿರು ರಸ್ತೆಯಲ್ಲಿ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಒನ್ ವೇ ಬದಲು ಟೂ ವೇ
ವಾಹನ ದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ದುರ್ಗಿಗುಡಿ ರಸ್ತೆಯಲ್ಲಿ ಒನ್ ವೇ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನೆಹರೂ ರಸ್ತೆಯಿಂದ ದುರ್ಗಿಗುಡಿ ಮೂಲಕ ಜೈಲ್ ಸರ್ಕಲ್’ಗೆ ಬರಲು ಅವಕಾಶವಿದೆ. ಆದರೆ ಜೈಲ್ ಸರ್ಕಲ್ ಕಡೆಯಿಂದ ನೆಹರೂ ರಸ್ತೆ ಕಡೆಗೆ ಹೋಗುವ ವಾಹನಗಳು ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ತೆರಳುವಂತಿಲ್ಲ. ಇದೆ ಕಾರಣಕ್ಕೆ ದುರ್ಗಿಗುಡಿ ಮುಖ್ಯರಸ್ತೆ ಮುಂಭಾಗ ಬ್ಯಾರಿಕೇಡ್ ಅಳವಡಿಸಲಾಗಿದೆ. ಒನ್ ವೇ ಎಂದು ಬ್ಯಾನರ್ ಕೂಡ ಹಾಕಲಾಗಿದೆ. ಆದರೆ ಇದಕ್ಕೆ ಕ್ಯಾರೆ ಅನ್ನದ ವಾಹನ ಸವಾರರು ಒನ್ ವೇ ಬದಲು ಟು ವೇ ಸಂಚಾರ ನಡೆಸುತ್ತಿದ್ದಾರೆ.
ಸ್ಮಾರ್ಟ್ ಸಿಟಿಯಿಂದ ಸ್ವಲ್ಪ ರಿಲ್ಯಾಕ್ಸ್
ಜೈಲ್ ರಸ್ತೆಯಿಂದ ಬರುವ ವಾಹನಗಳು ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ತೆರಳುವಂತಿಲ್ಲ. ಬದಲಾಗಿ ಪಕ್ಕದ LLR ರಸ್ತೆ ಮೂಲಕ ಗೋಪಿ ಸರ್ಕಲ್ ಮತ್ತು ನೆಹರೂ ರಸ್ತೆ ತಲುಪಬೇಕು. ಆದರೆ LLR ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿತ್ತು. ಇದೆ ಕಾರಣಕ್ಕೆ ಪೊಲೀಸರು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಒನ್ ವೇ ಸಂಚಾರಕ್ಕೆ ಸ್ವಲ್ಪ ರಿಲ್ಯಾಕ್ಸ್ ನೀಡಲಾಯಿತು. ಈಗ LLR ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಆದರೆ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ನೀಡಲಾಗಿದ್ದ ರಿಲ್ಯಾಕ್ಸ್ ಹಾಗೆ ಮುಂದುವರೆದಿದೆ. ಹಾಗಾಗಿ ಎರಡೂ ಕಡೆ ವಾಹನಗಳು ಸಂಚರಿಸುತ್ತಿವೆ. ಅತ್ಯಂತ ಕಿರು ರಸ್ತೆಯಲ್ಲಿ ಎರಡು ಕಡೆ ವಾಹಗಳು ಓಡಾಡುತ್ತಿರುವುದರಿಂದ ದುರ್ಗಿಗುಡಿ ರಸ್ತೆಯಲ್ಲಿ ಪುನಃ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.
ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ
ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಒನ್ ವೇ ನಿಯಮ ಪಾಲನೆ ಆಗದಿರುವುದ್ದಕ್ಕೆ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಅದರ ವಿಡಿಯೋ ಇಲ್ಲಿದೆ ⇒ CLICK HERE
ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಒನ್ ವೇ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹವಿದೆ. ಇದರಿಂದ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಪರಿಹಾರವಾಗಲಿದೆ.
ಇದನ್ನೂ ಓದಿ ⇒ ರಾತ್ರಿ ಬಾಗಿಲು ಹಾಕುವಾಗ ಅಂಗಡಿ ಕ್ಯಾಶ್ ಡ್ರಾದಲ್ಲಿಟ್ಟ ಲಕ್ಷ ಲಕ್ಷ ಹಣ ಬೆಳಗಾಗುವುದರಲ್ಲಿ ಮಾಯ
♦ ನಿಮ್ಮೂರು, ನಿಮ್ಮಾ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.