ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |6 JANUARY 2023
SHIMOGA : ಸಂಚಾರ ನಿಯಮ (traffic) ಉಲ್ಲಂಘನೆಯನ್ನು ಸಿಸಿಟಿವಿಯಲ್ಲಿ ಗಮನಿಸಿ ನೊಟೀಸ್ ಕಳುಹಿಸುವ ಪ್ರಕ್ರಿಯೆ ಸದ್ಯದಲ್ಲೆ ಪ್ರಾರಂಭವಾಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಅವರು, ಶಿವಮೊಗ್ಗ ನಗರದಲ್ಲಿ ಸಂಚಾರ (traffic) ನಿಯಮ ಉಲ್ಲಂಘಿಸುವವರಿಗೆ ಸಿಸಿಟಿವಿ ಮೂಲಕ ಗಮನಿಸಿ, ನೊಟೀಸ್ ಕಳುಹಿಸುವ ಪ್ರಕ್ರಿಯೆ ಸದ್ಯದಲ್ಲೆ ಆರಂಭವಾಗಲಿದೆ. ಈ ಕುರಿತು ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು.
ನಗರದಲ್ಲಿ ಸೆನ್ಸಾರ್ ಸಿಗ್ನಲ್
ನಗರದಲ್ಲಿ ಸೆನ್ಸಾರ್ ಸಿಗ್ನಲ್ ಗಳನ್ನು ಅಳವಡಿಸಲಾಗಿದೆ. ಸಂಚಾರ (traffic) ದಟ್ಟಣೆ ಕಡಿಮೆ ಇದ್ದಾಗ ತನ್ನಿಂತಾನೆ ಸೆಕೆಂಡ್ ಗಳನ್ನು ಕಡಿಮೆ ಮಾಡಿಕೊಳ್ಳುತ್ತದೆ. ಇದರಿಂದ ವಾಹನ ಸವಾರರಿಗೆ ಗೊಂದಲವಾಲಿದೆ ಎಂಬ ಕಾರಣಕ್ಕೆ ಮ್ಯಾನುಯಲ್ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯವಾಗಿ ಆರೆಂಜ್ ಸಿಗ್ನಲ್ 4 ಸಕೆಂಡ್ ಇರಲಿದೆ. ಇಲ್ಲಿ 6 ಸಕೆಂಡ್ ಮಾಡಿದ್ದೇವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಸೈಲೆನ್ಸರ್ ಮೇಲೆ ದಾಳಿ ನಿಂತರ
ಇನ್ನು ಜೋರು ಶಬ್ದ ಮಾಡುವ ಬೈಕ್ ಸೈಲೆನ್ಸರ್ ಗಳಿಗೆ ಕಡಿವಾಣ ಹಾಕುವ ಕಾರ್ಯಾಚರಣೆ ನಿರಂತರವಾಗಿರಲಿದೆ. ಈಗಾಗಲೆ ಒಂದು ಬಾರಿ ಜಿಲ್ಲೆಯಲ್ಲಿ ಸೈಲೆನ್ಸರ್ ಗಳನ್ನು ನಾಶಪಡಿಸಲಾಗಿದೆ. ಸಾರ್ವಜನಿಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೋರು ಶಬ್ದ ಮಾಡುವ ಸೈಲೆನ್ಸರ್ ಗಳಿರುವ ವಾಹನಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ, ಕ್ಯಾಲಿಬರೇಷನ್ ಗಾಗಿ 15 ದಿನ ಹೆಚ್ಚುವರಿ ಟೈಮ್, ಏನಿದು ಕ್ಯಾಲಿಬರೇಷನ್?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422