ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022
ಹಿಜಾಬ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆ, ಶಿವಮೊಗ್ಗದಲ್ಲಿ ಇವತ್ತೂ ಕೂಡ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದಾರೆ.
ಶಿವಮೊಗ್ಗದ ಬಿ.ಹೆಚ್.ರಸ್ತೆಯ ಪ್ರೌಢಶಾಲೆಯಲ್ಲಿ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ. ಆದ್ದರಿಂದ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದಿಂದ ಹೊರಗೆ ಬಂದರು. ಸೋಮವಾರ ಇದೆ ಶಾಲೆಯ 13 ವಿದ್ಯಾರ್ಥಿನಿಯರು ಪರೀಕ್ಷೆ ತ್ಯಜಿಸಿ ಹೊರ ನಡೆದಿದ್ದರು.
ವಿದ್ಯಾರ್ಥಿನಿಯರು ಹೇಳಿದ್ದೇನು?
ಪರೀಕ್ಷಾ ಕೇಂದ್ರದಿಂದ ಹೊರ ಬಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಹೀನಾ ಕೌಸರ್, ನಾವು ಹಿಜಾಬ್ ಧರಿಸಲು ಕಲಿತ ಮೇಲೆ ಶಾಲೆಗೆ ಸೇರಿದ್ದು. ಆದರೆ ಹಿಜಾಬ್ ಹಾಕದಂತೆ ಈಗ ಶಿಕ್ಷಕರು ತಿಳಿಸಿದ್ದಾರೆ. ನನಗೆ ಪರೀಕ್ಷೆಗಿಂತಲೂ ಹಿಜಾಬ್ ಮುಖ್ಯ. ನಮ್ಮ ಪೋಷಕರು ಕೂಡ ಹಿಜಾಬ್ ಧರಿಸಬೇಕು ಎಂದು ತಿಳಿಸಿದ್ದಾರೆ’ ಎಂದು ಹೇಳಿದರು.
36 ಮಕ್ಕಳಷ್ಟೆ ಹಾಜರು
ಬಿ.ಹೆಚ್.ರಸ್ತೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 83 ಮಕ್ಕಳಿದ್ದಾರೆ. ಈ ಪೈಕಿ 36 ಮಕ್ಕಳಷ್ಟೆ ಇವತ್ತು ಪರೀಕ್ಷೆ ಬರೆಯಲು ಆಗಮಿಸಿದ್ದರು. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ ಡಿಡಿಪಿಐ ರಮೇಶ್ ಅವರು, ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 36 ಮಕ್ಕಳಷ್ಟೆ ಪರೀಕ್ಷೆಗೆ ಬಂದಿದ್ದಾರೆ. ಯಾವುದೆ ಸಮಸ್ಯೆ ಇಲ್ಲದೆ ಪರೀಕ್ಷೆ ನಡೆಯುತ್ತಿದೆ. ಜಿಲ್ಲೆಯಾದ್ಯಂತ ಮಕ್ಕಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ’ ಎಂದು ತಿಳಿಸಿದರು.
ಪ್ರೌಢಶಾಲೆ ಸುತ್ತಲು ಬಂದೋಬಸ್ತ್
ಇತ್ತ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಹಾಗಾಗಿ ಬಿ.ಹೆಚ್.ರಸ್ತೆಯಲ್ಲಿರುವ ಪ್ರೌಢಶಾಲೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮೀಸಲು ಪೊಲೀಸ್ ಪಡೆಯ ಮೂರು ಬಸ್ಸುಗಳಲ್ಲಿ ಪೊಲೀಸರು ನಿಯೋಜಿಸಲಾಗಿದೆ.
ಯಾರನ್ನೂ ಒಳಗೆ ಬಿಡುತ್ತಿಲ್ಲ
ಸೋಮವಾರ ಬಿ.ಹೆಚ್.ರಸ್ತೆಯ ಪ್ರೌಢಶಾಲೆ ಆವರಣದೊಳಗೆ ಪೋಷಕರು ಆಗಮಿಸಿದ್ದರು. ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಕರೆದೊಯ್ದಿದ್ದರು. ಪರೀಕ್ಷೆ ಸಂದರ್ಭ ಗೊಂದಲಕ್ಕೆ ಕಾರಣವಾಗಿತ್ತು. ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಯಾವುದೆ ರೀತಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಇವತ್ತು ಪ್ರೌಢಶಾಲೆ ಗೇಟ್ ಬಂದ್ ಮಾಡಲಾಗಿತ್ತು. ಶಿಕ್ಷಕರು, ಮಕ್ಕಳು ಹೊರತು ಉಳಿದ್ಯಾರಿಗೂ ಗೇಟ್ ದಾಟಲು ಅವಕಾಶವಿರಲಿಲ್ಲ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಹಿಜಾಬ್’ಗಾಗಿ ಪರೀಕ್ಷೆಯನ್ನೇ ತ್ಯಜಿಸಿದ 13 ವಿದ್ಯಾರ್ಥಿನಿಯರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422