DASARA NEWS, 4 OCTOBER 2024 : ಶಿವಮೊಗ್ಗ ದಸರಾದ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನದ ಸಮಯದ ಕುರಿತು ನಟಿ, ಮಾಜಿ ಸಚಿವ ಉಮಾಶ್ರೀ ಅಸಮಾಧಾನ (Angry) ವ್ಯಕ್ತಪಡಿಸಿದ್ದಾರೆ. ಚಲಚಿತ್ರೋತ್ಸವದ ಉದ್ಘಾಟನಾ ಭಾಷಣದ ವೇಳೆ ಅವರು ಅಸಮಾಧಾನ ಹೊರ ಹಾಕಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ದಸರಾ ಚಲನಚಿತ್ರೋತ್ಸವದಲ್ಲಿ ಬೆಳಗ್ಗೆ 9 ಗಂಟೆಗೆ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿರುವುದಕ್ಕೆ ನಟಿ ಉಮಾಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಉತ್ತಮ ಸಿನಿಮಾ ತೋರಿಸಬೇಕು. ಆದರೆ ಬೆಳಗಿನ ಜಾವವೆ ಪ್ರದರ್ಶನ ಮಾಡುವುದು ಸರಿಯಲ್ಲ. ಸಿನಿಮಾ ಪ್ರದರ್ಶನ ಮಾಡಬೇಕು ಅನ್ನುವ ಕಾರಣಕ್ಕೆ ಹಾಕಬಾರದು. ರಾತ್ರಿ ವೇಳೆ ಪ್ರದರ್ಶನ ಮಾಡಿದರೆ ಅನುಕೂಲ ಆಗಬಹುದು. ಇದರಿಂದ ಹೆಚ್ಚಿನ ಜನರಿಗೆ ಸಿನಿಮಾ ತಲುಪಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಿನಿಮಾ ತೋರಿಸಿದಂತೆ ಅಗಲಿದೆ ಎಂದು ಉಮಾಶ್ರೀ ಸಲಹೆ ನೀಡಿದರು. ಭಾಷಣದ ಬಳಿಕ ಉಮಾಶ್ರೀ ಅವರಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಸಮಜಾಯಿಷಿ ನೀಡಿದರು.» ಉಮಾಶ್ರೀ ಹೇಳಿದ್ದೇನು?

ಬೆಳಗ್ಗೆ 9 ಗಂಟೆಗೆ ಸಿನಿಮಾ ಪ್ರದರ್ಶನ
ದಸರಾ ಚಲನಚಿತ್ರೋತ್ಸವದಲ್ಲಿ ಇವತ್ತಿನಿಂದ ನಾಲ್ಕು ದಿನ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಇವತ್ತು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಶಾಖಾಹಾರಿ ಸಿನಿಮಾ ಪ್ರದರ್ಶನವಾಯಿತು. ಅ.5ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಟಗರು ಪಲ್ಯ, ಅ.6ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಕಂಬ್ಳಿಹುಳ, ಅ.7ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕಾಲಾಪತ್ಥರ್ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಎಲ್ಲ ಸಿನಿಮಾಗಳು ಬೆಳಗ್ಗೆ 9 ಗಂಟೆಗೆ ಪ್ರದರ್ಶಿಸಲಾಗುತ್ತಿದೆ.
ಉಚಿತ ಪ್ರದರ್ಶನವಿದ್ದರು ವಾರದ ದಿನಗಳಲ್ಲಿ ಬೆಳಗ್ಗೆ 9 ಗಂಟೆಗೆ ಸಿನಿಮಾ ನೋಡಲು ಜನರು ಹೋಗುವುದಿಲ್ಲ ಎಂಬ ಅಭಿಪ್ರಾಯವಿತ್ತು. ಶಾಖಾಹಾರಿ ಸಿನಿಮಾಗೆ ಇವತ್ತು ನಿರೀಕ್ಷಿತ ಪ್ರೇಕ್ಷಕರು ಇರಲಿಲ್ಲ.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದಂಡ, ಸಂಸದ ರಾಘವೇಂದ್ರ ಹೇಳಿದ್ದೇನು?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





