ವೈರಲ್ ವಿಡಿಯೋ, ಹುಲಿ ಬಂತು ಹುಲಿ, ಅಸಲಿ ಕಥೆ ಏನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

https://chat.whatsapp.com/Doh0PyFFSiTBZY73X533cb

SHIVAMOGGA LIVE NEWS | BHADRAVATHI| 19 ಜುಲೈ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಭದ್ರಾವತಿ ತಾಲೂಕು ಶಂಕರಘಟ್ಟದ ರಸ್ತೆಯಲ್ಲಿ ಹುಲಿ (TIGER) ಪ್ರತ್ಯಕ್ಷ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (VIRAL VIDEO) ಆಗಿದೆ. ಇದರು ಸ್ಥಳೀಯರಲ್ಲಿ ಗೊಂದಲ ಮತ್ತು ಆತಂಕ ಮೂಡಿಸಿದೆ. ಆದರೆ ವೈರಲ್ ವಿಡಿಯೋದ ಹಿಂದಿನ ಅಸಲಿ ಕಥೆ ಬೇರೆ ಇದೆ.

Shimoga Nanjappa Hospital

ವಿಡಿಯೋದಲ್ಲಿ ಏನಿದೆ?

ಆರಣ್ಯ ಪ್ರದೇಶದಿಂದ ಹೊರ ಬರುವ ಹುಲಿಯೊಂದು ರಸ್ತೆ ದಾಟುತ್ತದೆ. ರಸ್ತೆಯ ಬಲ ಭಾಗದಿಂದ ಎಡ ಭಾಗಕ್ಕೆ ನಡೆದು ಹೋಗುತ್ತದೆ. ಹುಲಿ ರಸ್ತೆ ದಾಟುತ್ತಿದ್ದರಿಂದ ಸವಾರರು ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡಿದ್ದರು. ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋ ಚಿತ್ರೀಕರಣ ಮಾಡಿದ್ದರು.

ವೈರಲ್ ಆಯ್ತು ವಿಡಿಯೋ

ಹುಲಿ ರಸ್ತೆ ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಂಕರಘಟ್ಟ ರಸ್ತೆಯಲ್ಲಿ ಹುಲಿ ಎಂದು ಹಬ್ಬಿಸಲಾಗಿದೆ. ವಿಡಿಯೋ ಎಲ್ಲೆಲ್ಲೂ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿತ್ತು.  ಕೆಲವು ಮಾಧ್ಯಮಗಳಲ್ಲಿಯು ವಿಡಿಯೋ ಪ್ರಸಾರ ಮಾಡಿ, ಶಂಕರಘಟ್ಟದಲ್ಲಿ ಹುಲಿ ಎಂದು ಸುದ್ದಿ ಪ್ರಕಟಿಸಲಾಯಿತು.

ಅಸಲಿ ಕಥೆ ಏನು?

ವಿಡಿಯೋದಲ್ಲಿ ಶಂಕರಘಟ್ಟ (SHANKARAGHATTA) ರಸ್ತೆಯನ್ನೆ ಹೋಲುವ ಹೈವೇ ರಸ್ತೆ ಇದೆ. ಆದರೆ ಅಸಲಿಗೆ ಈ ವಿಡಿಯೋ ಶಂಕರಘಟ್ಟದ್ದಲ್ಲ. ಮಹಾರಾಷ್ಟ್ರದ (MAHARASHTRA) ತಡೋಬ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಚಂದ್ರಾಪುರದ್ದು. ಅಲ್ಲಿ ಹುಲಿಯೊಂದು ರಸ್ತೆ ದಾಟುತ್ತಿದ್ದ ವಿಡಿಯೋ ಚಿತ್ರೀಕರಣ ಮಾಡಿದ್ದು, ವೈರಲ್ ಆಗಿದೆ.

ತಡೋಬ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಹುಲಿಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುವುದು, ವಾಹನ ಸವಾರರ ಮೇಲೆ ದಾಳಿ ಮಾಡುವುದು ಸಾಮಾನ್ಯ. ಇನ್ನು, ವೈರಲ್ ವಿಡಿಯೋ ಕುರಿತು 9 ದಿನಗಳ ಹಿಂದೆ ರೈಸಿಂಗ್ ಒಡಿಶಾ ವಾಹಿನಿ ಈ ವಿಡಿಯೋವನ್ನು ಪ್ರಸಾರ ಮಾಡಿದೆ.

https://www.youtube.com/watch?v=T4k_KPzs3PI

ಇದನ್ನೂ ಓದಿ – ಗೂಂಡಾ ಕಾಯ್ದೆ, ಶಿವಮೊಗ್ಗದ ರೌಡಿಯನ್ನು ಒಂದು ವರ್ಷ ಬಳ್ಳಾರಿ ಜೈಲಿನಲ್ಲಿಡುವಂತೆ ಆದೇಶ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment