ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 DECEMBER 2022
ಶಿವಮೊಗ್ಗ : ಯಶವಂತಪುರ ಶಿವಮೊಗ್ಗ ನಡುವೆ ಸಂಚರಿಸುವ ರೈಲಿಗೆ ತಾತ್ಕಾಲಿಕವಾಗಿ ವಿಸ್ಟಾಡೋಮ್ (vistadome) ಬೋಗಿ ಅಳವಡಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 16579 ಯಶವಂತಪುರ – ಶಿವಮೊಗ್ಗ, ರೈಲು ಸಂಖ್ಯೆ 16580 ಶಿವಮೊಗ್ಗ – ಯಶವಂತಪುರ ರೈಲಿಗೆ ತಾತ್ಕಾಲಿಕವಾಗಿ ಒಂದು ವಿಸ್ಟಾಡೋಮ್ ಬೋಗಿಯನ್ನು ಅಳವಡಿಸಲಾಗುತ್ತದೆ. ಡಿ.30 ರಿಂದ 2023ರ ಮಾರ್ಚ್ 31ರವರೆಗೆ ವಿಸ್ಟಾಡೋಮ್ (vistadome) ಬೋಗಿ ಇರಲಿದೆ.
ಇದನ್ನೂ ಓದಿ – ಮೈಸೂರು -ತಾಳಗುಪ್ಪ ಎಕ್ಸ್ ಪ್ರೆಸ್ ಸೇರಿ ಶಿವಮೊಗ್ಗದ 6 ರೈಲುಗಳ ಸಮಯದಲ್ಲಿ ಬದಲಾವಣೆ, ಯಾವೆಲ್ಲ ರೈಲುಗಳು?
ಏನಿದು ವಿಸ್ಟಾಡೋಮ್ ಬೋಗಿ?
ವಿಸ್ಟಾಡೋಮ್ ಬೋಗಿಗಳು ಸಾಮಾನ್ಯ ಬೋಗಿಗಳಂತೆ ಇರುವುದಿಲ್ಲ. ಎಸಿ ಸೀಟರ್ ಕೋಚ್ ಬೋಗಿಯಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಸಂಪೂರ್ಣವಾಗಿ ವ್ಯವಸ್ಥೆ ಮಾಡಲಾಗಿರುತ್ತದೆ. ದೊಡ್ಡ ಗಾಜಿನ ಕಿಟಕಿ ಇರಲಿದೆ. ಬೋಗಿಗೆ ಗಾಜಿನ ಛಾವಣಿ ಇರಲಿದೆ. ಸೀಟುಗಳು ಕೂಡ ಯಾವುದೆ ದಿಕ್ಕಿಗೆ ತಿರುಗಿಸಲು ಅವಕಾಶವಿರಲಿದೆ.
ಶಿವಮೊಗ್ಗಕ್ಕೆ ಇದೆ ಮೊದಲಲ್ಲ
ಶಿವಮೊಗ್ಗಕ್ಕೆ ವಿಸ್ಟಾಡೋಮ್ (vistadome) ಬೋಗಿ ಹೊಸತೇನಲ್ಲ. ಯಶವಂತಪುರ ಶಿವಮೊಗ್ಗ ರೈಲಿನಲ್ಲಿ ಈ ಹಿಂದೆ ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಕಳೆದ ವರ್ಷ ಡಿ.25ರಂದು ಮೊದಲ ಬಾರಿಗೆ ವಿಸ್ಟಾಡೋಮ್ ಬೋಗಿ ಶಿವಮೊಗ್ಗಕ್ಕೆ ಬಂದಿತ್ತು. 2023ರ ಮಾರ್ಚ್ 31ರವರೆಗೆ ವಿಸ್ಟಾಡೋಮ್ ಬೋಗಿ ಇತ್ತು. ಈಗ ಪುನಃ ಮೂರು ತಿಂಗಳು ವಿಸ್ಟಾಡೋಮ್ ಬೋಗಿಯಲ್ಲಿ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ.
ಈ ಬೋಗಿಯಲ್ಲಿ ಏನೆಲ್ಲ ವಿಶೇಷತೆಗಳಿವೆ?
ವಿಸ್ಟೋಡಾಮ್ ಬೋಗಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. 44 ಸೀಟರ್ ಬೋಗಿಯಲ್ಲಿ ಎಲ್ಲವೂ ಆಟೋಮೆಟಿಕ್ ವ್ಯವಸ್ಥೆ. ಬೋಗಿಯೊಳಗೆ ಹೋಗುತ್ತಿದ್ದಂತೆ ಗಾಜಿನ ಬಾಗಿಲು ತನ್ನಿಂತಾನೆ ತೆರೆದುಕೊಳ್ಳುತ್ತದೆ. ಲಗೇಜ್ ಇಡಲು ಪ್ರತ್ಯೇಕ ಕಂಪಾರ್ಟ್’ಮೆಂಟ್ ವ್ಯವಸ್ಥೆ ಇದೆ. ಇನ್ನು, ಎರಡು ಬದಿಯಲ್ಲೂ ಎರಡು ಸೀಟರ್’ನ ಸುಖಾಸನಗಳಿವೆ. ಈ ಆಸನಗಳು ರೈಲಿನ ಕಿಟಕಿಯ ಕಡೆಗೆ ತಿರುಗುತ್ತವೆ.
ಸೀಟುಗಳಿಗೆ ಪುಷ್ ಬ್ಯಾಕ್ ವ್ಯವಸ್ಥೆ ಇದೆ. ತಿಂಡಿ, ತಿನಿಸಿಗಳನ್ನು ಇಡಲು ಟ್ರೇ ಇದೆ. ಅದರಲ್ಲಿಯೇ ಕಪ್ ಹೋಲ್ಡರ್ ಕೂಡ ಇದೆ. ವಿಸ್ಟಾಡೋಮ್ ಬೋಗಿಯಲ್ಲಿ ದೊಡ್ಡ ಗಾಜಿನ ಕಿಟಕಿಗಳಿವೆ. ಮೇಲ್ಭಾಗದಲ್ಲಿಯೂ ಗಾಜುಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಸೀಟಿನಲ್ಲಿ ಕುಳಿತು ಆಕಾಶದೆಡೆಗೆ ಗಮನ ನೆಡಬಹುದಾಗಿದೆ.
ಪುಟ್ಟ ಕಿಚನ್, ಡಿಫರೆಂಟ್ ವಿನ್ಯಾಸದ ಟಾಯ್ಲೆಟ್
ವಿಸ್ಟೋಡಾಮ್ ಬೋಗಿಯ ಒಂದು ಕೊನೆಯಲ್ಲಿ ಸಂಪೂರ್ಣ ದೊಡ್ಡ ಗಾಜು ಅಳವಡಿಸಲಾಗಿದೆ. ಹಾಗಾಗಿ ರೈಲು ಚಲಿಸುತ್ತಿದ್ದಾಗ ಬೋಗಿಯ ಕೊನೆಯಲ್ಲಿ ನಿಂತು ಸುತ್ತಮುತ್ತಲ ಪರಿಸರವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರಿಗೆ ಈ ಜಾಗ ಅತ್ಯಂತ ಪ್ರಿಯವಾಗಲಿದೆ.
ಇನ್ನು, ರೈಲಿನಲ್ಲಿ ಪುಟ್ಟದೊಂದು ಕಿಚನ್ ವ್ಯವಸ್ಥೆ ಮಾಡಲಾಗಿದೆ. ರೆಫ್ರಿಜರೇಟರ್, ಮೈಕ್ರೋ ವೇವ್ ವೋವನ್ ಇಡಲಾಗಿದೆ. ಇನ್ನು, ಈ ಬೋಗಿಯ ಟಾಯ್ಲೆಟ್‘ಗಳು ವಿನ್ಯಾಸವೂ ವಿಭಿನ್ನವಾಗಿದೆ. ಸ್ಲೈಡಿಂಗ್ ಬಾಗಿಲುಗಳು, ಆಟೊಮೆಟೆಡ್ ಲೈಟುಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಗಳು ಪ್ರಯಾಣಿಕರಿಗೆ ಹಿತವಾದ ಅನುಭವ ನೀಡಲಿದೆ.
WATCH VIDEO
ಕಳೆದ ವರ್ಷ ಶಿವಮೊಗಕ್ಕೆ ವಿಸ್ಟಾಡೋಮ್ ಬೋಗಿ ಆಗಮಿಸಿದ್ದಾಗ ಶಿವಮೊಗ್ಗ ಲೈವ್.ಕಾಂ ವಿಡಿಯೋ ವರದಿ ಪ್ರಕಟಿಸಿತ್ತು. ಆ ವಿಡಿಯೋ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422