ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 JUNE 2021
ಲಾಕ್ ಡೌನ್ ನಿಯಮ ಉಲ್ಲಂಘಿಸಿ ವಾಕಿಂಗ್ ಮಾಡುತ್ತಿದ್ದವರಿಗೆ ಶಿವಮೊಗ್ಗ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ಪೊಲೀಸ್ ಠಾಣೆಯ ಮುಂದೆಯೇ ವ್ಯಾಯಾಮ ಮಾಡಿಸಿ, ಕಳುಹಿಸಿದ್ದಾರೆ.
ನೆಹರೂ ಸ್ಟೇಡಿಯಂ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದವರನ್ನು ಪೊಲೀಸ್ ಠಾಣೆಗೆ ಕರೆತಂದು, ಕ್ಲಾಸ್ ತೆಗೆದುಕೊಳ್ಳಲಾಗಿದೆ. ಶಿವಮೊಗ್ಗ ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ, ಇನ್ಸ್ ಪೆಕ್ಟರ್ ರವಿ ಮತ್ತು ಜಯನಗರ ಠಾಣೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.
‘ಕೋವಿಡ್ ಟೆಸ್ಟ್ ಮಾಡಿಸುತ್ತೇವೆ’
ಜಯನಗರ ಠಾಣೆ ಮುಂದೆ ಎಲ್ಲರನ್ನು ನಿಲ್ಲಸಿ, ಲಾಕ್ ಡೌನ್ ರೂಲ್ಸ್ ಕುರಿತು ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ ಮತ್ತು ಇನ್ಸ್ ಪೆಕ್ಟರ್ ರವಿ ಅವರು ಪಾಠ ಮಾಡಿದರು. ಅಲ್ಲದೆ ಈ ಅವಧಿಯಲ್ಲಿ ಪೊಲೀಸರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ತಿಳಿಸಿದರು. ಈಗ ವಶಕ್ಕೆ ಪಡದಿರುವವರ ಕೋವಿಡ್ ಟೆಸ್ಟ್ ಮಾಡಿಸಿ, ನೆಗೆಟಿವ್ ಬಂದವರನ್ನಷ್ಟೆ ಮನೆಗೆ ಕಳುಹಿಸಲಾಗುತ್ತದೆ ಎಂದರು. ಆಗ ಎಲ್ಲರೂ ತಮ್ಮನ್ನು ಬಿಡುವಂತೆ ಮನವಿ ಮಾಡಿದರು.
ವ್ಯಾಯಾಮ ಹೇಳಿಕೊಟ್ಟರು ಡಿವೈಎಸ್‍ಪಿ
ಇದೆ ವೇಳೆ ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ ಅವರು ಮನೆಯಲ್ಲೇ ಇದ್ದು ವ್ಯಾಯಾಮ ಮಾಡುವಂತೆ ಮನವಿ ಮಾಡಿದರು. ಅಲ್ಲದೆ ಕೆಲವು ವ್ಯಾಯಾಮಗಳನ್ನು ಹೇಳಿಕೊಟ್ಟು, ಎಲ್ಲರಿಗೂ ವ್ಯಾಯಾಮ ಮಾಡಿಸಿದರು.
ಇಲ್ಲಿದೆ ವಿಡಿಯೋ ರಿಪೋರ್ಟ್
ವಾಕಿಂಗ್‍ಗೆ ಬಂದವರ ವಾಹನಗಳು ಸೀಜ್
ನೆಹರೂ ಸ್ಟೇಡಿಯಂಗೆ ಪ್ರತಿ ದಿನ ನೂರಾರು ಮಂದಿ ವಾಕಿಂಗ್, ಜಾಗಿಂಗ್‍ಗೆ ಬರುತ್ತಾರೆ. ಆದರೆ ಲಾಕ್ ಡೌನ್ ಹಿನ್ನೆಲೆ ಸ್ಟೇಡಿಯಂ ಬಂದ್ ಮಾಡಲಾಗಿದೆ. ಇಲ್ಲಿಗೆ ಬರುವ ಹಲವರು ವಾಹನಗಳನ್ನು ತರುತ್ತಾರೆ. ಇವತ್ತು ವಾಕಿಂಗ್, ಜಾಗಿಂಗ್‍ಗೆ ಬಂದಿದ್ದವರು ತಂದಿದ್ದ ವಾಹನಗಳನ್ನು ಸೀಜ್ ಮಾಡಲಾಗಿದೆ. ಲಾಕ್ ಡೌನ್ ಅವಧಿ ಮುಗಿಯುವವರೆಗೆ ವಾಹನಗಳು ಸಿಗುವುದಿಲ್ಲ ಎಂದು ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ ತಿಳಿಸಿದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422