ರಾತ್ರಿ ಶಿವಮೊಗ್ಗದ ವಿದ್ಯಾನಗರ ಸೇರಿ ವಿವಿಧೆಡೆ ಎಚ್ಚರಿಕೆ ಸಂದೇಶ, ಕೂಡ್ಲಿಯಲ್ಲಿ ಸ್ನಾನ ಘಟ್ಟ ಜಲಾವೃತ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIMOGA, 31 JULY 2024 : ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ಭಾರಿ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ತಗ್ಗು ಪ್ರದೇಶದ ಜನರಲ್ಲಿ ಆತಂಕ ಮೂಡಿದೆ. ಈಗಾಗಲೇ ಮಹಾನಗರ ಪಾಲಿಕೆಯಿಂದ ಮೈಕ್‌ ಮೂಲಕ ಎಚ್ಚರಿಕೆ (Warning) ಸಂದೇಶ ನೀಡಲಾಗುತ್ತಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ವಿದ್ಯಾನಗರ, ಶಾಂತಮ್ಮ ಲೇಔಟ್‌ಗೆ ಭೀತಿ

ತುಂಗಾ ಜಲಾಶಯದಿಂದ ಪ್ರಸ್ತುತ 83 ಸಾವಿರ ಕ್ಯೂಸೆಕ್‌ ನೀರು ಹೊಳೆಗೆ ಹರಿಸಲಾಗುತ್ತಿದೆ. ನದಿ ಪಾತ್ರದಲ್ಲಿರುವ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಆತಂಕ ಮೂಡಿದೆ. ಸೀಗೆಹಟ್ಟಿ ಭಾಗದಲ್ಲಿ ಹಲವು ಮನೆಗಳಿಗೆ ಈಗಾಗಲೇ ನೀರು ನುಗ್ಗಿದೆ. ಮತ್ತೊಂದೆಡೆ ಪ್ರತಿಷ್ಠಿತ ಬಡಾವಣೆಗಳಿಗೆ ನೆರೆ ಭೀತಿ ಉಂಟಾಗಿದೆ.

kudli-drowned-in-Tunga-Bhadra-water.

ಶಾಂತಮ್ಮ ಲೇಔಟ್‌, ರಾಜೀವ್‌ ಗಾಂಧಿ ಬಡಾವಣೆ, ವಿದ್ಯಾನಗರದ 13 ಮತ್ತು 14ನೇ ಕ್ರಾಸ್‌, ಕಂಟ್ರಿ ಕ್ಲಬ್‌ ರಸ್ತೆ, ಜ್ಞಾನ ವಿಹಾರ ಬಡಾವಣೆ, ಆರ್‌.ಟಿ.ನಗರ, ನಿಸರ್ಗ ಬಡಾವಣೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಹಾನಗರ ಪಾಲಿಕೆ ವತಿಯಿಂದ ಕಸದ ವಾಹನಗಳಲ್ಲಿ ಮೈಕ್‌ ಮೂಲಕ ಕಳೆದ ರಾತ್ರಿಯಿಂದಲೇ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ. ‘ಗಾಜನೂರಿನ ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಆದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ನದಿ ಪಾತ್ರದ ಬಡಾವಣೆಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕುʼ ಎಂದು ಸೂಚಿಸಲಾಗುತ್ತಿದೆ.

ಕೂಡ್ಲಿಯ ಸ್ನಾನ ಘಟ್ಟ ಮುಳುಗಡೆ

ತುಂಗಾ ಮತ್ತು ಭದ್ರಾ ಸಂಗಮ ಸ್ಥಳ ಕೂಡ್ಲಿಯಲ್ಲಿ ಸ್ನಾನ ಘಟ್ಟ ಸಂಪೂರ್ಣ ಮುಳುಗಿದೆ. ತುಂಗಾ ಜಲಾಶಯದಿಂದ 83 ಸಾವಿರ ಕ್ಯೂಸೆಕ್‌, ಭದ್ರಾ ಜಲಾಶಯದಿಂದ 41 ಸಾವಿರ ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಎರಡು ದಿಕ್ಕಿನಿಂದ ಒಂದು ಕಾಲು ಲಕ್ಷ ಕ್ಯೂಸೆಕ್‌ಗು ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ಸ್ನಾನ ಘಟ್ಟ ಮುಳುಗಿದ್ದು, ಅರಳಿ ಮರದವರೆಗೆ ನೀರು ಬಂದಿದೆ. ಭಕ್ತರು ದೇಗುಲದ ಸಮೀಪದಲ್ಲಿಯೇ ನಿಂತು ತುಂಗಾಭದ್ರೆಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ ⇓

ತುಂಗಾ, ಭದ್ರಾ ಜಲಾಶಯಗಳ ಒಳ ಹರಿವು ಹೆಚ್ಚಳ, ಭಾರಿ ಪ್ರಮಾಣದ ನೀರು ಹೊರಕ್ಕೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment