‘ತೀರ್ಥಹಳ್ಳಿಯ 15 ಸಾವಿರ ಯುವಕರಿಗೆ ಕೆಲಸ ಕೊಡಿಸಲು ಇವರಿಗೆ ಆಗಿಲ್ಲ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS |6 FEBRUARY 2023

SHIMOGA | ರಾಹುಲ್ ಗಾಂಧಿ ಭಾರತ್ ಜೋಡೋ (Bharat Jodo) ಯಾತ್ರೆ ಬಳಿಕ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರಜಾ ಧ್ವನಿ ಯಾತ್ರೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯು ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣವಿದೆ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

RM-Manjunatha-Gowda-Press-Meet

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಎಂ.ಮಂಜುನಾಥ ಗೌಡ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಅವರು ಯಾತ್ರೆ ಮಾಡಿದರು. ಬಿಸಿಲು, ಚಳಿ, ಮಳೆ, ಹಿಮವನ್ನು ಲೆಕ್ಕಿಸದೆ, ರಜೆ ಪಡೆಯದೆ ಯಾತ್ರೆಯಲ್ಲಿ (Bharat Jodo) ನಡೆದರು. ಇದರ ಪರಿಣಾಮ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದರು.

ಬದಲಾವಣೆ ಬಯಸುತ್ತಿದ್ದಾರೆ

ಬೆಲೆ ಏರಿಕೆ, ಧರ್ಮ ಸಂಘರ್ಷದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಈಗ ಜನರು ಬದಲಾವಣೆ ಬಯಸುತ್ತಿದ್ದಾರೆ. ಈ ಹಿಂದೆ ತಾವು ಕೂಡ ಎರಡು ಭಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ವಾತಾವರಣ ಬೇರೆ ಇತ್ತು. ಈಗ ಬೇರೆ ಇದೆ. ಈ ಬದಲಾವಣೆ ಶಿವಮೊಗ್ಗ ಜಲ್ಲೆಯಿಂದಲೆ ಆರಂಭವಾಗಲಿದೆ ಎಂದು ಮಂಜುನಾಥ ಗೌಡ ತಿಳಿಸಿದರು.

ಇದನ್ನೂ ಓದಿ – ವಾಹನ ಡಿಕ್ಕಿಯಾಗಿ ಬಿದ್ದು ನರಳಾಡುತ್ತಿದ್ದ ಜಿಂಕೆಗೆ ನೆರವಾದ ಜನ, ಫೋಟೊಗಳು VIRAL

ಸಾವಿರಾರು ಮಂದಿ ಕೆಲಸ ಕಳೆದುಕೊಂಡರು

ತೀರ್ಥಹಳ್ಳಿ ತಾಲೂಕಿನ ಸಾವಿರಾರು ಯುವಕರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಲಾಕ್ ಡೌನ್ ಹಿನ್ನೆಲೆ ಅವರೆಲ್ಲ ಊರಿಗೆ ಬಂದರು. ಮತ್ತೆ ಕೆಲಸಕ್ಕೆ ಹೋಗಲು ಆಗಲಿಲ್ಲ. ಕೆಲಸ ಕೊಟ್ಟವರು ಇವರನ್ನ ಪುನಃ ಕರೆಯಲಿಲ್ಲ. ಹಾಗಾಗಿ ಸುಮಾರು 15 ಸಾವಿರ ಮಂದಿ ತೀರ್ಥಹಳ್ಳಿಯಲ್ಲಿ ಗದ್ದೆ ಕೆಲಸ ಮಾಡಿಕೊಂಡಿದ್ದಾರೆ. ಅವರಿಗೆ ಕೆಲಸ ಕೊಡಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಮಂಜುನಾಥಗೌಡ ಆರೋಪಿಸಿದರು.

ಇದನ್ನೂ ಓದಿ – ‘ವಿಐಎಸ್ಎಲ್ ಬಂದ್ ಆಗಲು ಬಿಜೆಪಿ ಸರ್ಕಾರವೇ ಕಾರಣ’, ಶಿವಮೊಗ್ಗದಲ್ಲಿ ಆಕ್ರೋಶ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment