ಶಿವಮೊಗ್ಗ ಲಾಡ್ಜ್‌ ರೂಂ ನಂ.304ರ ಕೇಸ್‌, ನಾಪತ್ತೆಯಾಗಿದ್ದ ಮಹಿಳೆ ಅರೆಸ್ಟ್‌, KSRTC ನಿಲ್ದಾಣದ ಕಳ್ಳತನಕ್ಕೆ ಇತ್ತು ಲಿಂಕ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 7 JANUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಕುಳಿತ ವ್ಯಕ್ತಿಯನ್ನು ಪರಿಚಿಯಿಸಿಕೊಂಡು ಶಿವಮೊಗ್ಗದ ಲಾಡ್ಜ್‌ಗೆ ಕರೆದೊಯ್ದು ಚಿನ್ನಾಭರಣ ದೋಚಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈಕೆ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಇನ್ನೂ ಮೂರು ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೂಂ ನಂಬರ್‌ 304

ಶಿವಮೊಗ್ಗ ತಾಲೂಕು ಆಯನೂರಿನ ರೂಪಶ್ರೀ (33) ಬಂಧಿತಳು. ಡಿ.15ರಂದು ಹೊನ್ನಾವರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ವ್ಯಕ್ತಿಯೊಬ್ಬರನ್ನು ಈಕೆ ಪರಿಚಯಿಸಿಕೊಂಡಿದ್ದಳು. ಆತನನ್ನು ಎನ್‌.ಟಿ.ರಸ್ತೆಯ ಲಾಡ್ಜ್‌ ಒಂದಕ್ಕೆ ಕರೆದೊಯ್ದು 304ನೇ ನಂಬರ್‌ ರೂಮ್‌ ಪಡೆದಿದ್ದಳು. ತನ್ನೊಂದಿಗೆ ಮಲಗಬೇಕಿದ್ದರೆ ಚಿನ್ನಾಭರಣ ಹಾಕಿಕೊಂಡಿರಬಾರದು. ನಮ್ಮ ಸ್ವಾಮೀಜಿ ಹೇಳಿದ್ದಾರೆ ಎಂದು ತಿಳಿಸಿದ್ದಳು. ಇದನ್ನು ನಂಬಿದ ವ್ಯಕ್ತಿ ತನ್ನ ಮೈಮೇಲಿದ್ದ ಚಿನ್ನಾಭರಣವನ್ನು ತೆಗೆದು ತನ್ನ ಬ್ಯಾಗಿನಲ್ಲಿ ಇರಿಸಿದ್ದರು. ಬಳಿಕ ಊಟ ತರಲು ಲಾಡ್ಜ್‌ನಿಂದ ಹೊರ ಹೋಗಿದ್ದರು. ಆಗ ಚಿನ್ನಾಭರಣವನ್ನು ಕದ್ದುಕೊಂಡು ಮಹಿಳೆ ಪರಾರಿಯಾಗಿದ್ದಳು.

ತನಿಖೆ ನಡೆಸಿದ ಪೊಲೀಸರು

ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ರೂಪಶ್ರೀಯನ್ನು ಬಂಧಿಸಿದ್ದಾರೆ. ಲಾಡ್ಜ್‌ ಪ್ರಕರಣ ಸಂಬಂಧ 10 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಈಕೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮತ್ತಷ್ಟು ಕಳವು ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯದ ಬಳಿ ಒಂದು, ಪ್ಲಾಟ್‌ಫಾರಂ 9ರಲ್ಲಿ ಎರಡು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈಕೆಯಿಂದ 2.25 ಲಕ್ಷ ರೂ. ಮೌಲ್ಯದ 41.6 ಗ್ರಾಂ ಬಂಗಾರ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಲು ಇಲ್ಲಿ ಕ್ಲಿಕ್‌ ಮಾಡಿ – 18 ವರ್ಷದ ಯುವತಿಗೆ ಕೆಎಫ್‌ಡಿ ಪಾಸಿಟಿವ್‌, ಸ್ಥಿತಿ ಗಂಭೀರ

ವಿಶೇಷ ತಂಡ ರಚನೆಯಾಗಿತ್ತು

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಳ್ಳತನ ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಮಹಿಳೆಯನ್ನು ಬಂಧಿಸಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ರವಿ ಪಾಟೀಲ್‌, ಸಬ್‌ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌, ಸಿಬ್ಬಂದಿ ಪಾಲಾಕ್ಷ ನಾಯ್ಕ, ಲಚ್ಚಾ ನಾಯ್ಕ, ಚಂದ್ರ ನಾಯ್ಕ, ನಿತಿನ್‌, ಪುನಿತ್‌ ರಾವ್‌, ಮಹಿಳಾ ಸಿಬ್ಬಂದಿ ಸುಮಿತಾ ಬಾಯಿ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment