ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 27 FEBRUARY 2024
SHIMOGA : ಮಹಿಳೆಯರಿಗೆ ಅಗೌರವ ತೋರುವಂತೆ ಮಾತನಾಡಿದ ನಟ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಸೂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಆರ್. ಮೋಹನ್ ಅವರ ನೇತೃತ್ವದಲ್ಲಿ ಮಹಿಳೆಯರು ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿದರು.
ಈಚೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ದರ್ಶನ್, ಮಹಿಳೆಯರ ಕುರಿತು ಅವಹೇಳನ ಮಾಡಿದ್ದಾರೆ. ಸಿನಿಮಾಗಳಲ್ಲಿ ಹೆಣ್ಣನ್ನು ಗೌರವಿಸುವಂತೆ ಮಾತನಾಡುತ್ತಾರೆ. ಆದರೆ ಸಾರ್ವಜನಿಕ ಕಾರ್ಯಕ್ರಮ ಮತ್ತು ಮಾಧ್ಯಮಗಳ ಸಂದರ್ಶನದ ವೇಳೆ ಅಶ್ಲೀಲ ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ. ಯುವ ಜನರಿಗೆ ಮಾದರಿಯಾಗಬೇಕಿದ್ದ ನಟ ಮಹಿಳೆಯರ ಕುರಿತು ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶೃತಿ, ಆಶಾ, ಯಶೋದಮ್ಮ, ನೇತ್ರಾ, ಸುನಿತಾ, ಸೌಮ್ಯಾ, ಮಾಲಾ ಬಾಯಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಯುವನಿಧಿ ಯೋಜನೆ, ಫಲಾನುಭವಿಗಳಿಗೆ ಮಹತ್ವದ ಸೂಚನೆ, ಇದೊಂದು ಅಪ್‌ಡೇಟ್ ಮಾಡಿದ್ದರೆ ಹಣ ಬರಲ್ಲ
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















