ಅಮಿತ್‌ ಷಾಗೆ ಶಿವಮೊಗ್ಗದಿಂದ ಬಳೆ ಪೋಸ್ಟ್‌ ಮಾಡಿದ ಮಹಿಳೆಯರು, ಆಕ್ರೋಶ ವ್ಯಕ್ತಪಡಿಸಿದ ಯುವಕರು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ದೇಶದಲ್ಲಿ ಪದೇ ಪದೆ ದಾಳಿಯಾಗುತ್ತಿದ್ದರು ಉಗ್ರರ ಅಟ್ಟಹಾಸ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಷಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿ ಮುಂಭಾಗ ನಗರ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. (Bangle)

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

2019ರಲ್ಲಿ 800 ಕೆ.ಜಿ ಸ್ಪೋಟಕ ಹೊತ್ತು ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಪುಲ್ವಾಮಾದಲ್ಲಿ ದಾಳಿಯಾಗಿತ್ತು. 2025ರಲ್ಲಿ ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ನಾಗರಿಕರ ಹತ್ಯೆ ಮಾಡಲಾಗಿತ್ತು. ಈಗ ದಹೆಲಿಯ ಅತ್ಯಂತ ಬಿಗಿ ಭದ್ರತಾ ಪ್ರದೇಶವಾದ ಕೆಂಪು ಕೋಟೆ ಸಮೀಪ ಬಾಂಬ್‌ ಸ್ಪೋಟ ಸಂಭವಿಸಿದೆ. ಉಗ್ರರ ಅಟ್ಟಹಾಸ ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಆದ್ದರಿಂದ ಗೃಹ ಸಚಿವ ಅಮಿತ್‌ ಷಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಅಮಿತ್‌ ಷಾಗೆ ಬಳೆ ಪೋಸ್ಟ್‌

ಗೃಹ ಸಚಿವರ ವೈಫಲ್ಯ ಖಂಡಿಸಿ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರಿಗೆ ಬಳೆಗಳನ್ನು ಪೋಸ್ಟ್‌ ಮಾಡಿದರು. ಗೃಹ ಸಚಿವರು ಬಳೆ ತೊಟ್ಟುಕೊಳ್ಳಬೇಕು ಲೇವಡಿ ಮಾಡಿದರು.

Youth-Congress-workers-post-bangles-to-Home-Minister-Amith-Shah

ರಾಷ್ಟ್ರ ರಕ್ಷಣೆಗೆ ಚಾಣಾಕ್ಷತನ ತೋರಿಸಿʼ

ಬಾಂಬ್ ಸ್ಪೋಟಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರೆ ಕಾರಣ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಮಣಿಪುರ, ಪೆಹಲ್ಗಾಮ್ ಸೇರಿದಂತೆ ವಿವಿಧೆಡೆ ದಾಳಿಗಳಾಗಿವೆ. ದೆಹಲಿಯ ಕೆಂಪು ಕೋಟೆಯ ಬಳಿಯೆ ಸ್ಪೋಟ ಸಂಭವಿಸಿದೆ. ಅಮಿತ್‌ ಷಾ ಚುನಾವಣೆಗಷ್ಟೆ ಚಾಣಾಕ್ಷತನ ತೋರಿಸುತ್ತಿದ್ದಾರೆ. ದೇಶದ ರಕ್ಷಣೆಗೆ ಚಾಣಾಕ್ಷತನ ತೋರಿಸಲಿ.

  • ಚೇತನ್‌, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ

RED-LINE-

ಪ್ರಮುಖರಾದ ಮಧು ಸೂದನ್‌, ಎನ್.ರಮೇಶ್‌, ಯುವ ಕಾಂಗ್ರೆಸ್‌ ಶಿವಮೊಗ್ಗ ವಿಧಾನಸಭಾ ಅಧ್ಯಕ್ಷ ಚರಣ್‌ ಜೆ.ಶೆಟ್ಟಿ, ನಗರ ಬ್ಲಾಕ್‌ ಅಧ್ಯಕ್ಷರಾದ ಗಿರೀಶ್‌, ಮೊಹಮ್ಮದ್‌ ಗೌಸ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್‌, ರೇಷ್ಮಾ ಸೇರಿ ಹಲವರು ಇದ್ದರು.

Youth-Congress-workers-post-bangles-to-Home-Minister-Amith-Shah

Youth-Congress-workers-post-bangles-to-Home-Minister-Amith-Shah

Youth-Congress-workers-post-bangles-to-Home-Minister-Amith-Shah

Youth-Congress-workers-post-bangles-to-Home-Minister-Amith-Shah

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ವಿವಿಧೆಡೆ ವಾಹನಗಳ ಪಾರ್ಕಿಂಗ್‌ ನಿಷೇಧ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

Bangle

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment