ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಯುವಕನ ಪುಂಡಾಟ, ಪೊಲೀಸ್‌ ಠಾಣೆಗೆ ಬಸ್‌ ತಿರುಗಿಸಿದ ಚಾಲಕ, ಮುಂದೇನಾಯ್ತು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 4 OCTOBER 2023

HOLEHONNURU : ಕೆಎಸ್‌ಆರ್‌ಟಿಸಿ (KSRTC) ಬಸ್ಸಿನಲ್ಲಿ ಟಿಕೆಟ್‌ ಖರೀದಿಸುವಂತೆ ತಿಳಿಸಿದ ಕಂಡಕ್ಟರ್‌, ನೆರವಿಗೆ ಧಾವಿಸಿದ ಸಹ ಪ್ರಯಾಣಿಕರ ಮೇಲೆ ಯುವಕರ ಗುಂಪು ಹಲ್ಲೆಗೆ ಮುಂದಾಗಿದೆ. ತಕ್ಷಣ ಚಾಲಕ ಬಸ್ಸನ್ನು ಹೊಳೆಹೊನ್ನೂರು ಠಾಣೆ ಎದುರಿಗೆ ತಂದು ನಿಲ್ಲಿಸಿದ್ದು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಏನಿದು ಪ್ರಕರಣ?

ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸಿಗೆ ಚನ್ನಗಿರಿ ತಾಲೂಕು ಮಾವಿನಕಟ್ಟೆ ಬಳಿ ಯುವಕನೊಬ್ಬ ಹತ್ತಿದ್ದ. ಆದರೆ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸಿ ಕಂಡಕ್ಟರ್‌ ಜೊತೆಗೆ ವಾಗ್ವಾದ ನಡೆಸಿದ್ದ. ಅಲ್ಲದೆ ಹಲ್ಲೆಗು ಮುಂದಾಗಿದ್ದಾನೆ. ಸಹ ಪ್ರಯಾಣಿಕರೊಬ್ಬರು ಇದರ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದು ಅವರ ಮೊಬೈಲ್‌ ಕಸಿದುಕೊಳ್ಳಲು ಯತ್ನಿಸಿದ್ದಾನೆ.

ಇದನ್ನೂ ಓದಿ- ಶಿವಮೊಗ್ಗ ವಿಮಾನ ನಿಲ್ದಾಣದ ರನ್‌ ವೇ ಕಾಣದೆ ಬೆಂಗಳೂರಿಗೆ ವಾಪಸ್‌ ತೆರಳಿದ ವಿಮಾನ

ಮತ್ತಿಬ್ಬರನ್ನು ಕರೆಯಿಸಿಕೊಂಡ

ಯುವಕ ಫೋನ್‌ ಮಾಡಿ ತಿಳಿಸಿದ್ದರಿಂದ ಮತ್ತಿಬ್ಬರು ಯುವಕರು ಅರಹತೊಳಲು ಬಳಿ ಬಸ್‌ ಹತ್ತಿಕೊಂಡಿದ್ದಾರೆ. ಅವರು ಕೂಡ ಕಂಡಕ್ಟರ್‌ ಮತ್ತು ಸಹ ಪ್ರಯಾಣಿಕರ ಜೊತೆಗೆ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಯಾಣಿಕರು, ಕಂಡಕ್ಟರ್‌ ಬಳಿ ಇದ್ದ ಮೊಬೈಲ್‌, ಹಣ ಕಸಿದುಕೊಂಡಿದ್ದರು ಎಂದು ಆಪಾದಿಸಲಾಗಿದೆ.

ಇದನ್ನೂ ಓದಿ- ರಾಗಿಗುಡ್ಡದಲ್ಲಿ ಕಲ್ಲು ತೂರಿ ಅಡಗಿ ಕುಳಿತಿದ್ದವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು

ಠಾಣೆ ಎದುರು ಬಸ್‌ ನಿಲ್ಲಿಸಿದ ಚಾಲಕ

ಎಲ್ಲಿಯು ಬಸ್‌ ನಿಲ್ಲಿಸದಂತೆ ಯುವಕರು ಡ್ರೈವರ್‌ಗೆ ತಾಕೀತು ಮಾಡಿದ್ದರು. ಆದರೆ ಸಮಯ ಪ್ರಜ್ಞೆ ಮೆರೆದ ಚಾಲಕ ಹೊಳೆಹೊನ್ನೂರು ಪೊಲೀಸ್‌ ಠಾಣೆ ಎದುರಿಗೆ ತಂದು ನಿಲ್ಲಿಸಿದ್ದಾರೆ. ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದರು. ಸಹ ಪ್ರಯಾಣಿಕರಿಂದ ಕಸಿದುಕೊಂಡಿದ್ದ ಮೊಬೈಲ್‌, ಹಣವನ್ನು ಪೊಲೀಸರು ಮರಳಿ ಕೊಡಿಸಿದ್ದಾರೆ ಎನ್ನಲಾಗುತ್ತಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment