ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 29 MAY 2023
SHIMOGA : ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಚಾರಣೆಗೆ ಹಾಜರಾಗಬೇಕಿದ್ದ ಯುವಕನೊಬ್ಬ ಶಿವಮೊಗ್ಗದಲ್ಲಿ ನಾಪತ್ತೆಯಾಗಿದ್ದಾನೆ. ಮೊಬೈಲ್, ಬೈಕನ್ನು ಮನೆಯಲಿಯೇ ಬಿಟ್ಟು ಕಾಣೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಮೇ 24ರಂದು ಮನೆಯಿಂದ ಯುವಕ ನಾಪತ್ತೆಯಾಗಿದ್ದಾನೆ ಎಂದು ಆತನ ಕುಟುಂಬದವರು ದೂರು ನೀಡಿದ್ದಾರೆ.
ಎನ್ಐಎ ವಿಚಾರಣೆ ಮುಗಿಸಿ ಮನೆಗೆ
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಯುವಕನ ಮೊಬೈಲ್ಗೆ ನೊಟೀಸ್ ಜಾರಿ ಮಾಡಲಾಗಿತ್ತು. ಮೇ 23ರಂದು ಎನ್ಐಎ ಕಚೇರಿಗೆ ಹಾಜರಾಗಿದ್ದ ಆತನಿಗೆ ಮರುದಿನ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾಗಿ ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಆದರೆ ಮರುದಿನ ಬೆಳಗ್ಗೆ ಯುವಕ ಶಿವಮೊಗ್ಗಕ್ಕೆ ಬಂದಿದ್ದು, ಮನೆಗೆ ಮರಳಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ – ಅಮೀರ್ ಅಹಮದ್ ಸರ್ಕಲ್’ನಲ್ಲಿ NIA ವಿರುದ್ಧ ಆಕ್ರೋಶ, ಸರ್ಕಾರದ ವಿರುದ್ಧ ಘೋಷಣೆ
ಮೊಬೈಲ್, ಬೈಕ್ ಮನೆಯಲ್ಲೇ ಇದೆ
ವಿಚಾರಣೆ ಬಳಿಕ ಮನೆಗೆ ಹಿಂತಿರುಗಿದ್ದ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಆತನ ಸಹೋದರಿಯ ಮನೆಯಲ್ಲಿದ್ದ ತಾಯಿ ಯುವಕನನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾರೆ. ಆತನ ಬೈಕ್ ಮನೆ ಮುಂದೆಯೇ ನಿಂತಿತ್ತು. ಮೊಬೈಲ್ ಫೋನ್ ಮನೆಯಲ್ಲಿಯೆ ಇತ್ತು. ಆದರೆ ಯುವಕ ಎಲ್ಲಿಯೂ ಕಾಣಿಸಲಿಲ್ಲ. ಎಲ್ಲೆಡೆ ಹುಡುಕಾಡಿದ ಆತನ ಕುಟುಂಬದವರು ಕೊನೆಗೆ ದೊಡ್ಡಪೇಟೆ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಕೇಸ್ NIAಗೆ, ಏನಿದು NIA? ಇನ್ಮುಂದೆ ತನಿಖೆ ಹೇಗಾಗುತ್ತೆ?
ಇತ್ತ ಎನ್ಐಎ ಅಧಿಕಾರಿಗಳು ಕೂಡ ಯುವಕನ ಮೊಬೈಲ್ಗೆ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422