ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA, 27 JULY 2024 : ಅಂಗಡಿಯಲ್ಲಿ ಹಣ ಕೊಡದೆ ಮದ್ಯ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಯುವಕನೊಬ್ಬ ರೊಚ್ಚಿಗೆದ್ದು ಏಕಾಂಗಿಯಾಗಿ ‘ಹೆದ್ದಾರಿ ತಡೆ’ (Highway) ನಡೆಸಿದ್ದಾನೆ. ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ಯುವಕನೊಬ್ಬ ಅವಾಂತರ ಸೃಷ್ಟಿಸಿದ್ದಾನೆ.
ಶುಕ್ರವಾರ ಮಧ್ಯಾಹ್ನ ಮದ್ಯದ ಅಂಗಡಿಗೆ ತೆರಳಿದ್ದ ಯುವಕನಿಗೆ ಅಂಗಡಿಯವರು ಮದ್ಯ ಕೊಡಲು ನಿರಾಕರಿಸಿದ್ದಾರೆ. ಹಣ ಕೊಟ್ಟರಷ್ಟೆ ಮದ್ಯ ಕೊಡುವುದಾಗಿ ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕ ಸುರಿವ ಮಳೆಯಲ್ಲಿ ದಿಢೀರನೆ ಎನ್.ಟಿ.ರಸ್ತೆಗೆ ಬಂದು ನಿಂತಿದ್ದ. ಸುಮಾರು 15 ನಿಮಿಷ ಈತನ ಅವಾಂತರ ಮುಂದುವರೆದಿತ್ತು.

ಯುವಕನ ಅವಾಂತರಕ್ಕೆ ವಾಹನ ಸವರಾರು ಪರದಾಡಬೇಕಾಯ್ತು. ಬಸ್ ಕಂಡಕ್ಟರ್‌ಗಳು ಆತನನ್ನು ಬದಿಗೆ ಎಳೆದು ತಮ್ಮ ಬಸ್ಸುಗಳು ಮುಂದಕ್ಕೆ ಸಾಗುವಂತೆ ನೋಡಿಕೊಳ್ಳುತ್ತಿದ್ದರು. ಕೊನೆಗೆ ಸ್ಥಳೀಯರು ಯುವಕನಿಗೆ ಬೆದರಿಸಿ, ತಿಳಿ ಹೇಳಿ ರಸ್ತೆಯಿಂದ ಪಕ್ಕಕ್ಕೆ ಸರಿಸಿದರು. ಯುವಕನ ಅವಾಂತರವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ ⇓
ಶಿವಮೊಗ್ಗದಲ್ಲಿ ರಸ್ತೆ ಬದಿ ಮಹಿಳೆಯ ಮೃತದೇಹ | ಪೊಲೀಸ್ ಸಿಬ್ಬಂದಿಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್
LATEST NEWS
- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 18 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

About The Editor
ನಿತಿನ್ ಆರ್.ಕೈದೊಟ್ಲು















