ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಅಕ್ಟೋಬರ್ 2020
ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಮೈತ್ರಿಕೂಟ ಸದಸ್ಯರ ಮುನಿಸು ಇನ್ನೂ ತಣ್ಣಗಾಗಲಿಲ್ಲ. ಹಾಗಾಗಿ ಇವತ್ತು ಕೂಡ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಕೋರಂ ಕೊರತೆ ಉಂಟಾಗಿದೆ. ಹಾಗಾಗಿ ಸಭೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಂಸದ, ಶಾಸಕರೆಲ್ಲ ಬಂದಿದ್ದರು
ಇವತ್ತಿನ ಜಿಲ್ಲಾ ಪಂಚಾಯಿತಿ ಸಭೆ ಬಿಜೆಪಿ ಪಾಲಿಗೆ ಅತ್ಯಂತ ನಿರ್ಣಾಯಕವಾಗಿತ್ತು. ಹಾಗಾಗಿ ಸಂಸದ ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಸಭೆಗೆ ಆಗಮಿಸಿದ್ದರು. ಕೋರಂ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಬಿಜೆಪಿ ಉದ್ದೇಶವಾಗಿತ್ತು. ಹಾಗಿದ್ದೂ ಕೋರಂ ಇರದೆ ಸಭೆಯನ್ನು ಮುಂದೂಡುವ ಅನಿವಾರ್ಯತೆ ಸೃಷ್ಟಿಯಾಯಿತು.
ಒಂದೇ ಒಂದು ಸ್ಥಾನದಿಂದ ಕೋರಂ ಕೊರತೆ
ಸಂಸದ, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಅಧ್ಯಕ್ಷರು ಸೇರಿ ಒಟ್ಟು ಸದಸ್ಯರ ಸಂಖ್ಯೆ 51 ಇದು. ಸಭೆ ನಡೆಸಲು 26 ಸದಸ್ಯರ ಅಗತ್ಯವಿದೆ. ಆದರೆ ಇವತ್ತು 25 ಸದಸ್ಯರಷ್ಟೇ ಇದ್ದರು. ಒಬ್ಬ ಸದಸ್ಯರಿಂದಾಗಿ ಕೋರಂ ಕೊರತೆ ಉಂಟಾಯಿತು.
ಇವತ್ತಿನದ್ದು ಮಹತ್ವದ ಸಭೆ
ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಮತ್ತು ಬಿಜೆಪಿ ಪಾಲಿಗೆ ಇವತ್ತಿನದ್ದು ಅತ್ಯಂತ ಮಹತ್ವದ ಸಭೆಯಾಗಿತ್ತು. ಕಾಂಗ್ರೆಸ್, ಜೆಡಿಎಸ್ ಪಕ್ಷದ ಮೈತ್ರಿಕೂಟದಿಂದ ಅಧ್ಯಕ್ಷರಾದರೂ ಈ ಬಾರಿ ಮೂರು ಸ್ಥಾಯಿ ಸಮಿತಿಗೆ ಬಿಜೆಪಿಯವರನ್ನೇ ಅಧ್ಯಕ್ಷರಾನ್ನಾಗಿ ನೇಮಿಸಿದ್ದರು. ಇದೆ ಕಾರಣಕ್ಕೆ ಅಧ್ಯಕ್ಷರ ವಿರುದ್ಧ ಮೈತ್ರಿ ಪಕ್ಷದ ಸದಸ್ಯರು ಮುನಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಪಕ್ಷ ಅಧ್ಯಕ್ಷರಿಗೆ ಬೆಂಬಲವಾಗಿ ನಿಂತಿದೆ. ಹಾಗಾಗಿ ಒಂದು ವೇಳೆ ಅವಿಶ್ವಾಸ ಮಂಡಿಸಿದರೆ, ಸಂಖ್ಯಾಬಲ ತೋರಿಸಲು ಇವತ್ತು ಸಂಸದರು, ಶಾಸಕರು ಸಭೆಗೆ ಬಂದಿದ್ದರು.
ಸಭೆಯಿಂದ ದೂರವೆ ಉಳಿದ ಮೈತ್ರಿ ಪಕ್ಷ
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷಗಳು ಸಾಮಾನ್ಯ ಸಭೆಯಿಂದ ದೂರ ಉಳಿಯುತ್ತಿರುವುದು ಇದೆ ಮೊದಲಲ್ಲ. ಅಕ್ಟೋಬರ್ 13ರಂದು ನಡೆದ ಸಭೆಗೂ ಮೈತ್ರಿ ಸದಸ್ಯರು ಗೈರಾಗಿದ್ದರು. ಹಾಗಾಗಿ ಅ.21ಕ್ಕೆ ಸಭೆ ಮುಂದೂಡಲಾಗಿತ್ತು. ಈಗ ಸಭೆಯನ್ನು 27ಕ್ಕೆ ಮುಂದೂಡಲಾಗಿದೆ.
ಬಿಜೆಪಿ ಮುಖಂಡರ ಜೊತೆಗೆ ಕುಮಾರ್
ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅವರಿಗೆ ಬಿಜೆಪಿ ಬೆಂಬಲವಾಗಿ ನಿಂತಿದೆ. ಹಾಗಾಗಿ ಅಧ್ಯಕ್ಷೆ ಜ್ಯೋತಿ ಅವರ ಪತಿ ಕುಮಾರ್ ಅವರು ಬಿಜೆಪಿ ಮುಖಂಡರ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಂಡರು. ಸಭೆಗೆ ಬಂದಿದ್ದ ಸಂಸದರು, ಶಾಸಕರನ್ನು ಮಾತನಾಡಿಸಿ, ಸಭೆಯ ಕುರಿತು ಬಿಜೆಪಿ ಶಾಸಕರ ಜೊತೆಗೆ ಚರ್ಚಿಸುತ್ತಿದ್ದದ್ದು ಗಮನಾರ್ಹವಾಗಿತ್ತು.
ಶಾಸಕ ಸಂಗಮೇಶ್ ಸಭೆಗೆ ಹಾಜರ್
ಸಾಮಾನ್ಯವಾಗಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಭದ್ರಾವತಿ ಶಾಸಕ ಸಂಗಮೇಶ್ವರ್ ಹಾಜರಾತಿ ಇರುತ್ತಿರಲಿಲ್ಲ. ಇವತ್ತಿನ ಸಭೆ ಮಹತ್ವದಾಗಿದ್ದ ಹಿನ್ನೆಲೆ, ಸಂಗಮೇಶ್ವರ್ ಅವರು ಸಭೆಗೆ ಹಾಜರಾದರು. ಆದರೆ ಸಭೆ ನಡೆಯುದ ಹಿನ್ನೆಲೆ, ಅವರು ಹಿಂತಿರುಗಿದರು. ಈ ವೇಳೆ ಅವರು ಸಂಸದ ರಾಘವೇಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]