ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020
ಕೋರಂ ಕೊರತೆಯಿಂದಾಗಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಮುಂದಕ್ಕೆ ಹೋಗಿದೆ. ಅಕ್ಟೋಬರ್ 16ಕ್ಕೆ ಸಾಮಾನ್ಯ ಸಭೆ ನಿಗದಿಗೊಳಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಒಂದು ಗಂಟೆ ಕಾದರೂ ಕೋರಂ ಇಲ್ಲ
ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆದರೆ ಕೋರಂ ಕೊರತೆ ಹಿನ್ನೆಲೆ ಸದಸ್ಯರು ಬರಲಿ ಎಂದು ಒಂದು ಗಂಟೆ ಎಲ್ಲರು ಕಾದರು. ಆದರೆ ನಿಗದಿತ ಸಂಖ್ಯೆಯ ಸದಸ್ಯರು ಬಾರದ ಹಿನ್ನೆಲೆ, ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅವರು ಸಭೆಯನ್ನು ಅರ್ಧ ಗಂಟೆ ಮುಂದೂಡಿದರು. ಎರಡನೇ ಬಾರಿ ಸಭೆ ಸೇರಿದಾಗಲೂ ಕೋರಂ ಕೊರತೆ ಉಂಟಾಯಿತು. ಹಾಗಾಗಿ ಸಭೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಲಾಯಿತು.
ಕರೋಂ ಎಷ್ಟು? ಸಭೆಯಲ್ಲಿದ್ದವರೆಷ್ಟು?
ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಅಧ್ಯಕ್ಷರು ಸೇರಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ 51 ಮಂದಿ ಭಾಗವಹಿಸಬೇಕು. 26 ಮಂದಿ ಭಾಗವಹಿಸಿದರೆ ಕೋರಂ ರಚನೆ ಆಗುತ್ತಿತ್ತು. ಆದರೆ ಇವತ್ತು ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಅವರು ಸೇರಿ 15 ಸದಸ್ಯರಷ್ಟೆ ಭಾಗವಹಿಸಿದ್ದರು. ಹಾಗಾಗಿ ಇವತ್ತಿನ ಸಭೆ ಟೀ, ಕಾಫಿಗಷ್ಟೇ ಸೀಮಿತವಾಯಿತು.
ಜೆಡಿಎಸ್, ಕಾಂಗ್ರೆಸ್ ಸದಸ್ಯರು ಗೈರು
ಭೀಮನೇರಿ ಶಿವಪ್ಪ ಅವರ ಹೊರತು ಜಿಲ್ಲಾ ಪಂಚಾಯಿತಿಯ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರೆಲ್ಲ ಗೈರಾಗಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಮೈತ್ರಿ ಪಕ್ಷಗಳ ನಡುವೆ ವೈಮನಸು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮೈತ್ರಿ ಧರ್ಮ ಮರೆತು, ಬಿಜೆಪಿಯ ಸದಸ್ಯರನಷ್ಟೆ ನೇಮಕ ಮಾಡಿದ್ದರು. ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ಅಧ್ಯಕ್ಷರಾಗಿ ಬಿಜೆಪಿ ಪರವಾದ ನಿಲುವು, ನಿರ್ಧಾರ ಕೈಗೊಂಡಿದ್ದಾರೆ ಎಂಬ ಕಾರಣಕ್ಕೆ ಜೆಡಿಎಸ್, ಕಾಂಗ್ರೆಸ್ ಸದಸ್ಯರು ಮುನಿಸಿಕೊಂಡಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]