ಶಿವಮೊಗ್ಗ ಲೈವ್.ಕಾಂ | SHIMOGA | 3 ಮೇ 2020
ಲಾಕ್‍ಡೌನ್‍ನಿಂದಾಗಿ ರಾಜ್ಯ ಸರ್ಕಾರ ಬಸ್ ಸಂಚಾರವನ್ನು ಬಂದ್ ಮಾಡಿ ಆದೇಶ ಹೊರಡಿಸಿತ್ತು. ಆದರೆ ನಾಳೆಯಿಂದ ಗ್ರೀನ್ ಝೂನ್‍ಗಳಿರುವ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭ ಗೊಳ್ಳಲಿದೆ ಈ ಹಿನ್ನೆಲೆಯಲ್ಲಿ ನಗರದ KSRTC ಬಸ್ ನಿಲ್ದಾಣದಿಂದ ಸಿದ್ಧತೆ ಆರಂಭವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಾಳೆಯಿಂದ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಸರ್ಕಾರಿ ಬಸ್‍ಗಳು ಸಂಚರಿಸಲಿವೆ. ಹಾಗಾಗಿ ಶಿವಮೊಗ್ಗ ಬಸ್ ಸ್ಟಾಂಡ್‍ನಲ್ಲಿ ಸಾವರ್ಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬಾಕ್ಸ್‍ಗಳನ್ನು ಹಾಕಿ ತಯಾರಿ ಮಾಡಲಾಗುತ್ತಿದೆ.
ಮಾಹಿತಿ ಕೌಂಟರ್ ಕಡೆಗೆ ಬರ್ತಿದ್ದಾರೆ
ಬಸ್ ಸಂಚಾರದ ಕುರಿತ ಮಾಹಿತಿಗಾಗಿ ವಿಚಾರಣೆ ಕೌಂಟರ್’ಗಳಿಗೆ ಆಗಮಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಯಾವ್ಯಾವ ಬಸ್ಸುಗಳು ಎಷ್ಟು ಹೊತ್ತಿಗೆ ಹೊರಡುತ್ತವೆ ಎಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಇನ್ನು, ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ KSRTC ಶಿವಮೊಗ್ಗ ವಿಭಾಗದ ಡಿಸಿ ನವೀನ್, ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 7 ಗಂಟೆಯ ವರೆಗೆ ಬಸ್ ಸಂಚಾರಕ್ಕೆ ಸಮಯ ನಿಗದಿ ಮಾಡಲಾಗಿದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಇಲ್ಲವಾದಲ್ಲಿ ಬಸ್ ಹತ್ತಲು ಅವಕಾಶವಿಲ್ಲ. ಪ್ರತಿ ಬಸ್‍ನಲ್ಲಿ 30 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]