ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
[su_highlight background=”#d70000″ color=”#ffffff”]SHIVAMOGGA LIVE NEWS[/su_highlight]
ಶಿವಮೊಗ್ಗ| ಸಾವರ್ಕರ್ ಫೋಟೊ (SAVARKAR FLEX CONTROVERSY) ವಿವಾದ ಶಿವಮೊಗ್ಗ ನಗರದಲ್ಲಿ ಎರಡು ದಿನದ ವ್ಯಾಪಾರ ವಹಿವಾಟನ್ನು (BUSINESS) ಕಸಿದುಕೊಂಡಿದೆ. ಕೋಟ್ಯಂತರ ರೂ. ನಷ್ಟವನ್ನು ಉಂಟ ಮಾಡಿದೆ. ಹಲವರ ತುತ್ತು ಚೀಲಕ್ಕೆ ಕುತ್ತು ತಂದಿದೆ.
.png)
ಆ.15ರಂದು ಮಧ್ಯಾಹ್ನ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ತಕ್ಷಣದಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಇದರಿಂದ ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
[su_note note_color=”#ffee9a” text_color=”#000000″ radius=”1″]ಗಾಂಧಿ ಬಜಾರ್ ನಲ್ಲಿ ಭಾರಿ ಲಾಸ್
ಶಿವಮೊಗ್ಗ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್. ಸುಮಾರು 500 ಮಳಿಗೆಗಳು ಇಲ್ಲಿದ್ದು, ನಗರದ ಒಟ್ಟು ವಹಿವಾಟಿನ ಶೇ.40ರಷ್ಟು ಪಾಲು ವ್ಯಾಪಾರ ಗಾಂಧಿ ಬಜಾರ್ ನಲ್ಲಿ ನಡೆಯುತ್ತದೆ. ದಿನಸಿ, ಜವಳಿ, ಆಭರಣ, ಹೂವು, ಹಣ್ಣು, ತರಕಾರಿ ಸೇರಿದಂತೆ ಎಲ್ಲಾ ಬಗೆಯ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು ಇಲ್ಲಿದ್ದಾರೆ.
ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧ ರಿಟೇಲ್ ವ್ಯಾಪಾರಿಗಳಿಗೆ ಗಾಂಧಿ ಬಜಾರ್ ಹೋಲ್ ಸೇಲ್ ಅಂಗಡಿಗಳೆ ಆಧಾರ. ಗಾಂಧಿ ಬಜಾರ್ ಬಂದ್ ಆದರೆ ನಗರದಾದ್ಯಂತ ವಹಿವಾಟಿನ ಮೇಲೆ ಪರಿಣಾಮ ಉಂಟಾಗಲಿದೆ. ಕಳೆದ ಫೆಬ್ರವರಿಯಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ ಒಂದು ವಾರಕ್ಕೂ ಹೆಚ್ಚು ಕಾಲ ಗಾಂಧಿ ಬಜಾರ್ ಬಂದ್ ಆಗಿತ್ತು. ಈಗ ಫ್ಲೆಕ್ಸ್ ವಿವಾದದಿಂದ ಪುನಃ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಗಾಂಧಿ ಬಜಾರ್ ನಲ್ಲಿ ಕೋಟ್ಯಂತರ ರೂ. ನಷ್ಟವಾಗಿದೆ.[/su_note]
ನಗರದ ವ್ಯಾಪಾರಿಗಳು ಹೈರಾಣು
ಶಿವಮೊಗ್ಗದ ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ ಕೂಡ ಪ್ರಮುಖ ವಾಣಿಜ್ಯ (BUSINESS) ಕೇಂದ್ರಗಳಾಗಿವೆ. ಇಲ್ಲಿಯು ವ್ಯಾಪಾರ, ವಹಿವಾಟು ಬಿರುಸಾಗಿ ನಡೆಯುತ್ತಿತ್ತು. ಅಮೀರ್ ಅಹಮದ್ ಸರ್ಕಲ್ ಗೆ ಹೊಂದಿಕೊಂಡ ಹಾಗೆ ಬಿ.ಹೆಚ್.ರಸ್ತೆ, ನೆಹರೂ ರಸ್ತೆಗಳಿವೆ. ಸಂಜೆ ವೇಳೆಗೆ ಇಲ್ಲಿ ವ್ಯಾಪಾರ ಬಿರುಸು ಪಡೆಯುತ್ತದೆ. ಆದರೆ ಫ್ಲೆಕ್ಸ್ ವಿವಾದದಿಂದಾಗಿ ಇವೆರಡೂ ರಸ್ತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಇತ್ತ ದುರ್ಗಿಗುಡಿಯಲ್ಲಿಯು ವ್ಯಾಪಾರ ಕುಂಟಿತವಾಗಿದೆ.

ಗ್ರಾಹಕರು ಮರಳಿ ಬಾರದ ಆತಂಕ
ಸುತ್ತಮುತ್ತಲ ಹಲವು ತಾಲೂಕುಗಳಿಗೆ ಶಿವಮೊಗ್ಗ ನಗರವೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ, ಶಿಕಾರಿಪುರ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಎನ್.ಆರ್.ಪುರ, ಶೃಂಗೇರಿ, ಹಾವೇರಿ, ಹೊನ್ನಾಳಿ, ಚನ್ನಗಿರಿ ಸೇರಿದಂತೆ ಹಲವು ತಾಲೂಕಿನ ಜನರು ಶಿವಮೊಗ್ಗ ನಗರದೊಂದಿಗೆ ವ್ಯಾವಹಾರಿಕ ನಂಟು ಹೊಂದಿದ್ದಾರೆ. ಕೋವಿಡ್ ಲಾಕ್ ಡೌನ್ ನಂತರ ದೊಡ್ಡ ಪ್ರಮಾಣದ ಗ್ರಾಹಕರು ಬೇರೆ ದೊಡ್ಡ ಮಾರುಕಟ್ಟೆಗಳತ್ತ ಮುಖ ಮಾಡಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಶಿವಮೊಗ್ಗದತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು, ಪದೇ ಪದೆ ಗಲಭೆಗಳು ಆಗುತ್ತಿರುವುದರಿಂದ ಮತ್ತಷ್ಟು ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ವರ್ತಕರಿಗೆ ಎದುರಾಗಿದೆ.
ಇದನ್ನೂ ಓದಿ – ಟಿವಿ ಚಾನಲ್’ಗಳಲ್ಲಷ್ಟೆ ‘ಶಿವಮೊಗ್ಗ ಪ್ರಕ್ಷುಬ್ದ’, ಈಗ ಹೇಗಿದೆ ನಗರದ ಪರಿಸ್ಥಿತಿ?
[su_quote cite=”ಗಿರೀಶ್, ಉಪಾಧ್ಯಕ್ಷರು, ಚಿನ್ನಾಭರಣ ವರ್ತಕರ ಸಂಘ“]ಸಣ್ಣ ಪುಟ್ಟ ವ್ಯವಹಾರಕ್ಕೂ ಬೇರೆ ಜಿಲ್ಲೆಗಳ ಜನರು ಪ್ರತಿ ದಿನ ಶಿವಮೊಗ್ಗಕ್ಕೆ ಬರುತ್ತಿದ್ದರು. ಈಗ ಅವರೆಲ್ಲ ಇಲ್ಲಿಗೆ ಬರಲು ಆತಂಕ ಪಡುತ್ತಿದ್ದಾರೆ. ಹಾಗಾಗಿ ಸ್ಥಳೀಯವಾಗಿ ವ್ಯಾವಹಾರ ನಡೆಸುತ್ತಾರೆ ಅಥವಾ ಬೇರ ಜಿಲ್ಲೆಯ ಮಾರುಕಟ್ಟೆಗಳತ್ತ ಹೋಗುತ್ತಾರೆ. ನಾವು ಕೋಟ್ಯಂತರ ರೂ. ಬಂಡವಾಳ ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದೇವೆ. ಇದು ನಮಗೆ ಬಹಳ ಆತಂಕ ಮೂಡಿಸುತ್ತಿದೆ.[/su_quote]
ಸುಧಾರಿಸಿಕೊಳ್ಳಲು ವಾರ ಬೇಕು
ಫ್ಲೆಕ್ಸ್ ವಿವಾದದಿಂದ ಶಿವಮೊಗ್ಗದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾತ್ರಿ 9 ಗಂಟೆವರೆಗೆ ವ್ಯಾಪಾರ ನಡೆಸಲು ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ. ಆದರೆ ಪೊಲೀಸರು ಕೆಲವು ಕಡೆ ಮಧ್ಯಾಹ್ನದ ವೇಳೆಗೆ ಅಂಗಡಿ ಬಂದ್ ಮಾಡಿಸುತ್ತಿದ್ದಾರೆ. ಹಾಗಾಗಿ ನಿಷೇಧಾಜ್ಞೆ ತೆರವಾಗುವವರೆಗೆ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳುವುದಿಲ್ಲ. ಒಂದು ವಾರದ ವಾರದ ವರೆಗೆ ಪರಿಣಾಮ ಉಂಟಾಗಲಿದೆ.
[su_quote cite=”ಗೋಪಿನಾಥ್, ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ“]ಪದೇ ಪದೆ ಈ ರೀತಿ ಗಲಭೆಗಳಾದರೆ ಬ್ರಾಂಡ್ ಶಿವಮೊಗ್ಗಕ್ಕೆ ಬಹಳ ದೊಡ್ಡ ಪೆಟ್ಟು ಬೀಳಲಿದೆ. ವ್ಯಾಪಾರ – ವಹಿವಾಟಿಗೆ ತೊಂದರೆಯಾಗುತ್ತಿದೆ, ಪ್ರವಾಸೋದ್ಯಮ ಕ್ಷೇತ್ರಕ್ಕೂ ನಷ್ಟವಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು, ಸರ್ವ ಧರ್ಮದ ಮುಖಂಡರು, ಪೊಲೀಸರು ಸಭೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಶಿವಮೊಗ್ಗದ ಬ್ರಾಂಡ್ ಉಳಿಸುವ ಕೆಲಸ ಮಾಡಬೇಕು.[/su_quote]
ನಿತ್ಯ ಕೋಟಿ ಕೋಟಿ ವ್ಯವಹಾರ
ಶಿವಮೊಗ್ಗ ನಗರದಲ್ಲಿ ನಿತ್ಯ ಕೋಟ್ಯಂತರ ರೂ. ವಹಿವಾಟು (BUSINESS) ನಡೆಯುತ್ತದೆ. ಅಂದಾಜು ಪ್ರಕಾರ ಪ್ರತಿ ತಿಂಗಳು 300 ಕೋಟಿ ರೂ.ಗು ಹೆಚ್ಚು ವ್ಯಾಪಾರವಾಗುತ್ತದೆ. ಕೋವಿಡ್ ಸಂದರ್ಭ ಎರಡು ವರ್ಷ ವರ್ತಕರು ಸಂಕಷ್ಟಕ್ಕೀಡಾಗಿದ್ದರು. ಆ ಬಳಿಕ ಗಲಭೆಗಳು ವರ್ತಕರನ್ನು ಹೈರಾಣಾಗಿಸಿದೆ. ನಗರದ ವರ್ತಕರು ನಷ್ಟ ಅನುಭವಿಸುತ್ತಿದ್ದು, ಹಲವು ಮಳಿಗೆಗಳನ್ನು ಬಂದ್ ಮಾಡುವ ಹಂತಕ್ಕೆ ತಲುಪಿದೆ. ಇದು ಶಿವಮೊಗ್ಗ ನಗರದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುವ ಸಾದ್ಯತೆ ಇದೆ.
ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ ವಿಸ್ತರಣೆ ಆಗುತ್ತಾ ನಿಷೇಧಾಜ್ಞೆ, ಎಡಿಜಿಪಿ ಹೇಳಿದ್ದೇನು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು

















