ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
ಶಿವಮೊಗ್ಗ | ಫ್ಲೆಕ್ಸ್ (flex) ವಿವಾದದಿಂದಾಗಿ ನಗರದಲ್ಲಿ ಶಾಂತಿ ಭಂಗ ಉಂಟಾಗಿದೆ. ಕಳೆದ ಒಂದು ವಾರದಿಂದ ಶಿವಮೊಗ್ಗ ನಗರದಲ್ಲಿ (shimoga city) ನಿಷೇಧಾಜ್ಞೆ (prohibitory order) ಜಾರಿಯಲ್ಲಿದೆ. ಇದಕ್ಕೆಲ್ಲ ಕಾರಣ ಮಹಾನಗರ ಪಾಲಿಕೆಯ (mahanagara palike) ನೀತಿ. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಸರಿಯಾದ ನಿಯಮ ರೂಪಿಸದೆ ಇರುವುದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.
ಯಾವುದೇ ಹುಟ್ಟುಹಬ್ಬ, ಹಬ್ಬಹರಿದಿನ, ಜಾತ್ರೆ, ಪುಣ್ಯಸ್ಮರಣೆ ಇದ್ದರೂ ಶಿವಮೊಗ್ಗದ ಗಲ್ಲಿಗಲ್ಲಿಗಳೂ, ಪ್ರಮುಖ ಸರ್ಕಲ್ಗಳು ಫ್ಲೆಕ್ಸ್ ಮಯವಾಗುತ್ತವೆ. ಇದರಲ್ಲೂ ರಾಜಕಾರಣಿಗಳ ಅಬ್ಬರ ಜೋರು.
ಈ ಫ್ಲೆಕ್ಸ್ ಗಳು ಪಾಲಿಕೆಗೆ ಆದಾಯ ತರುವುದಿಲ್ಲ. ಸಾರ್ವಜನಿಕರಿಗೂ ತೊಂದರೆ ಮಾಡುತ್ತಿವೆ. ಬಂಟಿಂಗ್ ಗಳು ಪ್ರಾಣಿಗಳಿಗೆ, ಪರಿಸರಕ್ಕೆ ಹಾನಿ ಮಾಡುತ್ತಿವೆ. ಸರ್ಕಲ್ಗಳಲ್ಲಿ ಫ್ಲೆಕ್ಸ್ ಗಳನ್ನು ಹಾಕಬಾರದು. ಅದಕ್ಕೆ ಪೂರ್ವಾನುಮತಿ ಪಡೆಯಬೇಕು. ಶುಲ್ಕ ಪಾವತಿಸಬೇಕು ಎಂಬ ನಿಯಮ ಇದ್ದಿದ್ದರೆ ಆ.15ರಂದು ಶಿವಮೊಗ್ಗ ನಗರದಲ್ಲಿ ಶಾಂತಿಯುತ ವಾತಾವರಣ ಇರುತ್ತಿತ್ತು. ಫ್ಲೆಕ್ಸ್ ಅಳವಡಿಕೆಗೆ ಸ್ಪಷ್ಟವಾದ ನೀತಿ ಇಲ್ಲದಿರುವುದು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ.
ಕೋಟಿ ಕೋಟಿ ನಷ್ಟ
ಶಿವಮೊಗ್ಗ ನಗರದ ಪ್ರಮುಖ ಸರ್ಕಲ್ಗಳಲ್ಲಿ ಪ್ರತಿ ದಿನ ನೂರಾರು ಫ್ಲೆಕ್ಸ್ ಗಳು ಕಾಣಸಿಗುತ್ತವೆ. ಒಂದು ಫ್ಲೆಕ್ಸ್ ಗೆ ಕನಿಷ್ಠ 100 ರೂ. ಎಂದು ಅನುಮತಿ ಫಿಕ್ಸ್ ಮಾಡಿದ್ದರೂ ಪಾಲಿಕೆಗೆ ಕೋಟಿ ಕೋಟಿ ರೂ. ಶುಲ್ಕ ಸಂಗ್ರಹ ಮಾಡಬಹುದಿತ್ತು. ಪಾಲಿಕೆಗೂ ಉತ್ತಮ ಆದಾಯದ ಮೂಲ ಆಗುತಿತ್ತು. ಆದರೆ ಇದ್ಯಾವುದು ಇಲ್ಲಿ ನಡೆಯುತ್ತಿಲ್ಲ.
ನೀತಿ ರೂಪಿಸಲು ಚಿಂತನೆ
ಫ್ಲೆಕ್ಸ್ (flex) ಅಳವಡಿಕೆ ಸಂಬಂಧ ಸೂಕ್ತ ನಿಯಮ ರೂಪಿಸಲು ಪಾಲಿಕೆ ಚಿಂತನೆ ನಡೆಸಿದೆ. ಫ್ಲೆಕ್ಸ್ ಹಾಕುವ ಸ್ಥಳ, ನಿರ್ಬಂಧಿತ, ಅನಿರ್ಬಂಧಿತ ಪ್ರದೇಶ, ಫ್ಲೆಕ್ಸ್ ಉದ್ದ, ಅಗಲ, ಪೂರ್ವಾನುಮತಿ ಪಡೆಯುವುದು ಹೇಗೆ? ಶುಲ್ಕ ಎಷ್ಟು, ಎಷ್ಟು ದಿನ ಅಳವಡಿಸಬಹುದು, ಲೈಸೆನ್ಸ್ ಹೇಗೆ ಪ್ರದರ್ಶನ ಮಾಡಬೇಕು. ಅನುಮತಿಗೆ ಎಷ್ಟು ದಿನ ಮುಂಚೆ ಅರ್ಜಿ ಸಲ್ಲಿಸಬೇಕು ಹೀಗೆ ಹಲವು ವಿಚಾರಗಳನ್ನು ಒಳಗೊಂಡು ಕರಡು ರೂಪಿಸಲು ಸಿದ್ಧತೆ ನಡೆಸಲಾಗಿದೆ. ಇದನ್ನು ಸಭೆಯಲ್ಲಿ ಮಂಡಿಸಿ ಕಾನೂನು ರೂಪಿಸಲು ಮುಂದಾಗಿದೆ.
FLEX ನೀತಿ ಎಲ್ಲರಿಗೂ ಅನ್ವಯವಾ?
ಗೋಪಿ ಸರ್ಕಲ್’ನಲ್ಲಿ ಫ್ಲೆಕ್ಸ್ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಅಲ್ಲಿ ನೊಟೀಸ್ ಕೂಡ ಪ್ರಕಟಿಸಲಾಗಿದೆ. ಆದರೆ ರಾಜಕಾರಣಿಗಳು, ಪ್ರಮುಖರು ಫ್ಲೆಕ್ಸ್ ಅಳವಡಿಸಲಾಗುತ್ತಿದೆ. ಹೀಗಿದ್ದರೂ ದಂಡ ಹಾಕಿದ ಉದಹಾರಣೆ ಇಲ್ಲ. ಪಾಲಿಕೆಯ ಫ್ಲೆಕ್ಸ್ ನೀತಿ ಕೂಡ ಇದೆ ರೀತಿಯ ಹಲ್ಲು ಕಿತ್ತ ಹಾವಿನಂತಾದರೆ ಸಾಮಾನ್ಯರಿಗಷ್ಟೆ ಸಮಸ್ಯೆ ಉಂಟಾಗಲಿದೆ. ಈ ಬಗ್ಗೆ ಪಾಲಿಕೆ ಕಠಿಣ ಕಾನೂನು ರೂಪಿಸಬೇಕಿದೆ.
ಇದನ್ನೂ ಓದಿ – ಗೋಪಿ ಸರ್ಕಲ್’ನಲ್ಲಿ ಪಾಲಿಕೆ ಹೆಸರಲ್ಲಿ ಫ್ಲೆಕ್ಸ್ ಅಳವಡಿಸಿದ್ದು ಪಾಲಿಕೆಗೇ ಗೊತ್ತಿಲ್ಲ, ತನಿಖೆ ಶುರು
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422