ಶಿವಮೊಗ್ಗ: ಇದು ಶಿವಮೊಗ್ಗ ಸಿಟಿಯ ಡೇಂಜರಸ್ ತಿರುವು. ಇಲ್ಲಿ ಸ್ವಲ್ಪ ಮೈಮರೆತರೆ ಕೈ, ಕಾಲು ಮುರಿದುಕೊಳ್ಳುವುದು ಫಿಕ್ಸ್. (Potholes)
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗದ ಕೆ.ಇ.ಬಿ ಸರ್ಕಲ್‌ನಲ್ಲಿರುವ ಈ ತಿರುವಿನಲ್ಲಿ ರಸ್ತೆ ಬಾಯ್ತೆರೆದು ನೆತ್ತರು ಹೀರಿ ದಾಹ ನೀಗಿಸಿಕೊಳ್ಳಲು ಹೊಂಚು ಹಾಕುತ್ತಿದೆ. ತಿರುವಿನಲ್ಲಿ, ಕತ್ತಲಲ್ಲಿ ಅವಿತು ಕುಳಿತಂತಿರುವ ಈ ಗುಂಡಿಗಳು, ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ನಿತ್ಯ ಸಾವಿರಾರು ವಾಹನ ಸಂಚಾರ
ಕೆ.ಇ.ಬಿ ಸರ್ಕಲ್‌ನಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಗೆ ತೆರಳುವ ಮಾರ್ಗದಲ್ಲಿ ಈ ಗುಂಡಿಗಳಿವೆ. ರೈಲ್ವೆ ನಿಲ್ದಾಣದ ಕಡೆಯಿಂದ ಸಂಗೊಳ್ಳಿ ರಯಣ್ಣ ಸರ್ಕಲ್ ಕಡೆಗೆ ತೆರಳುವವರಿಗೆ ಮೊದಲು ಅದ್ಧೂರಿ ಸ್ವಾಗತ ಕೋರುವುದೇ ಈ ಗುಂಡಿಗಳು. ಬೆಳಗಿನ ಹೊತ್ತು ಗುಂಡಿಯ ಆಳ ಅಗಲ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ರಾತ್ರಿಯ ಪರಿಸ್ಥಿತಿ ಅತ್ಯಂತ ಭಯಾನಕ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಈ ರಸ್ತೆಯಲ್ಲಿ ಸಂಚರಿಸುವುದಷ್ಟೆ ಅಲ್ಲ ಅಕ್ಕಪಕ್ಕ ನಿಲ್ಲುವುದೂ ಡೇಂಜರ್, ಏನಿದು?
ತಿರುವಿನಲ್ಲಿ ಲೈಟ್ ಇಲ್ಲ. ಅನತಿ ದೂರದಲ್ಲಿರುವ ಬೀದಿ ದೀಪದ ಬೆಳಕು ಈ ಗುಂಡಿಗಳ ಸುಳಿಯುವುದಿಲ್ಲ. ಹಾಗಾಗಿ ಸಂಜೆ ನಂತರ ಇಲ್ಲಿ ಗುಂಡಿಗಳಿವೆ ಅನ್ನುವುದೇ ವಾಹನ ಚಾಲಕರಿಗೆ ಗೊತ್ತಾಗುವುದಿಲ್ಲ. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಹೀಗಿದ್ದು ಬೃಹತ್ ಗುಂಡಿಗಳಿಗೆ ಮುಕ್ತಿ ನೀಡುವತ್ತ ಅಧಿಕಾರಿಗಳು ಗಮನ ಹರಿಸಿಲ್ಲ.
ಮಳೆ ಬಳಿಕ ಪರಿಸ್ಥಿತಿ ಬದಲು
ಈ ಹಿಂದೆಯು ಇಲ್ಲಿ ದೊಡ್ಡ ಗಾತ್ರದ ಗುಂಡಿಗಳಾಗಿದ್ದವು. ಆಗ ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿತ್ತು. ಇದರ ಬಳಿಕ ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ಆದರೆ ಈಚೆಗೆ ಸುರಿದ ಮಳೆ ಮತ್ತೆ ರಸ್ತೆಯಲ್ಲಿ ಗುಂಡಿಗಳಾಗುವಂತೆ ಮಾಡಿದೆ. ಕೂಡಲೆ ಈ ಗುಂಡಿಗಳನ್ನು ಮುಚ್ಚಿ ಸಂಭಾವ್ಯ ಅಪಘಾತ ತಡೆಯಬೇಕಿದೆ.
Potholes at KEB Circle in Shimoga city
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





