ಶಿವಮೊಗ್ಗ: ಶಿವಮೊಗ್ಗ ಸಿಟಿಗೆ ಬರುವವರಿಗೆ ಇಲ್ಲಿ ಅದ್ಧೂರಿ ಸ್ವಾಗತ ನೀಡುತ್ತಿವೆ ಆಳ ಗುಂಡಿಗಳು (Pot Holes). ಈ ರಸ್ತೆಯಲ್ಲಿ ಓಡಾಡುವುದಷ್ಟೆ ಅಲ್ಲ ಅಕ್ಕಪಕ್ಕದಲ್ಲಿ ನಿಂತರು ಅಪಾಯ ನಿಶ್ಚಿತ. ಇಲ್ಲಿ ಬಿದ್ದವರು ಒಬ್ಬಿಬ್ಬರಲ್ಲ, ಕೈ ಕಾಲು ಮುರಿದುಕೊಂಡವರು ಲೆಕ್ಕಕ್ಕಿಲ್ಲ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಇದು ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಶಿವಮೊಗ್ಗ – ಹೊನ್ನಾಳಿ ರಸ್ತೆಯ ಫ್ಲೈ ಓವರ್ ಮತ್ತು ಅದರ ಸಂಪರ್ಕ ರಸ್ತೆಯಲ್ಲಿರುವ ಗುಂಡಿಗಳ ಕಿರು ಪರಿಚಯ.
ಗುಂಡಿ, ಗುಂಡಿ.. ಆಳ ಗುಂಡಿ..
ಹೊನ್ನಾಳಿ ರಸ್ತೆಯ ಫ್ಲೈ ಓವರ್‌ನ ಎರಡೂ ಬದಿಯಲ್ಲಿ ವಾಹನಗಳು ಮೇಲೇರುವಾಗ ಗಂಡಿಗಳನ್ನು ದಾಟಲೇಬೇಕು. ಮೇಲೇರಿದ ಮೇಲೂ ಇದೇ ದುಸ್ಥಿತಿ. ಹತ್ತಕ್ಕೂ ಹೆಚ್ಚು ಆಳ ಗುಂಡಿಗಳನ್ನು ದಾಟಿಕೊಂಡೆ ವಾಹನಗಳು ಸಾಗಬೇಕು. ಫ್ಲೈ ಓವರ್ ಮೇಲೆ ವಾಹನ ಚಾಲಕರು ಸ್ವಲ್ಪ ವೇಗ ಹೆಚ್ಚಿಸಿದರೆ ಅಥವಾ ಕ್ಷಣ ಕಾಲ ದೃಷ್ಟಿ ಬೇರೆಡೆ ಹಾಯಿಸಿದರೆ ಮುಗಿಯಿತು. ಅಪಘಾತ ನಿಶ್ಚಿತ, ಸವಾರರು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರುವುದು ಖಚಿತ.

ಇದನ್ನೂ ಓದಿ » ಜೀವ ವಿಮೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಐದು ವಿಧದ ಇನ್ಷುರೆನ್ಸ್‌ಗಳ ವಿವರ
ಪಾತಾಳ ಲೋಕವೇ ಕಾಣುತ್ತದೆ
ಇನ್ನು, ಫ್ಲೈವರ್‌ನಿಂದ ಕೆಳಗಿಳಿದರೆ ರಾಗಿಗುಡ್ಡದ ದಿಕ್ಕಿನ ರಸ್ತೆಯಲ್ಲಿ ಆಳ, ಅಗಲದ ಗುಂಡಿಗಳಿವೆ. ಫ್ಲೈವರ್ ಕೆಳಗಿರುವ ಚೌಡೇಶ್ವರಿ ದೇವಿ ದೇವಸ್ಥಾನದಿಂದ ಬಜಾಜ್ ಸರ್ವಿಸ್ ಸೆಂಟರ್‌ನ ಮುಂಭಾಗದವರೆಗೆ ಬರೀ ಗುಂಡಿಗಳೇ ಇದ್ದಾವೆ. ಈ ಗುಂಡಿಗಳು ಒಂದಕ್ಕಿಂತಲು ಒಂದು ಆಗಲ, ಒಂದಕ್ಕಿಂತಲು ಒಂದು ಆಳವಿದೆ. ಬಸ್ಸು ಲಾರಿಗಳಂತ ಭಾರೀ ವಾಹನಗಳೇ ಅತ್ತಿತ್ತ ವಾಲಾಡುತ್ತವೆ.

ರಸ್ತೆ ಪಕ್ಕದಲ್ಲಿ ನಿಲ್ಲುವುದೂ ಡೇಂಜರ್
ಗುಂಡಿಮಯ ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲುವುದೂ ಡೇಂಜರ್ ಅಂತಾರೆ ಇಲ್ಲಿನ ಸ್ಥಳೀಯರು. ಗುಂಡಿಯಿಂದ ಮೇಲೆದ್ದು ಬರುವ ಕಲ್ಲುಗಳು ವಾಹನಗಳ ಚಕ್ರದ ತುದಿಗೆ ಸಿಲುಕಿ ಅಕ್ಕಪಕ್ಕದಲ್ಲಿ ಹಾರುತ್ತವೆ. ಇವುಗಳು ತಗುಲಿ ಗಾಯಗೊಂಡವರು ಇದ್ದಾರೆ. ವಾಹನಗಳೂ ಹಾನಿಯಾಗಿವೆ.


ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಾಗಿಗುಡ್ಡ, ಶಾಂತಿನಗರ ಸೇರಿಂದಂತೆ ವಿವಿಧ ಬಡಾವಣೆಗಳಿಗೆ ಇದೇ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿನ ಗುಂಡಿಗಳನ್ನು ಬಂದ್ ಮಾಡಿದರೆ ಮತ್ತಷ್ಟು ಅನಾಹುತಗಳನ್ನು ತಪ್ಪಿಸಬಹುದಾಗಿದೆ.



Potholes at Shimoga Honnali road near railway station
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






