ಡಿಸೆಂಬರ್‌ನಲ್ಲಿ ಯಾವೆಲ್ಲ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ? ಇಲ್ಲಿದೆ ಪಟ್ಟಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಸ್ಮಾರ್ಟ್‌ ಫೋನ್‌ ನ್ಯೂಸ್‌: 2025ರ ಕೊನೆಯ ತಿಂಗಳು ಭಾರತದ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಲ್ಲಿ ಮಹತ್ವದ ಅಪ್‌ಡೇಟ್‌ ಇರಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿವಿಧ ಕಂಪನಿಗಳ ಲ್ಯಾಂಡ್‌ ಮಾರ್ಕ್‌ ಅನಿಸುವ ಸ್ಮಾರ್ಟ್‌ ಫೋನುಗಳು ವರ್ಷದ ಕೊನೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಯಾವ್ಯಾವ ಫೋನ್‌ಗಳು ರಿಲೀಸ್‌ ಆಗ್ತಿವೆ?

ಫೋನ್‌ 1: ಸ್ಯಾಮ್‌ಸಂಗ್ ಗ್ಯಾಲಕ್ಸಿ Tri Fold

ಫೋಲ್ಡ್‌ ಮಾಡುವ ಫೋನ್‌ಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಸ್ಯಾಮ್‌ಸಂಗ್‌ ಸಂಸ್ಥೆ ಈಗ Tri Fold ಫೋನ್‌ ರಿಲೀಸ್‌ಗೆ ರೆಡಿಯಾಗಿದೆ. ಡಿಸೆಂಬರ್ 5 ರಂದು ಜಾಗತಿಕವಾಗಿ ಈ ಫೋನ್‌ ಅನಾವರಣಗೊಳಿಸುವ ಸಾಧ್ಯತೆ ಇದೆ. ಇದು ಅತ್ಯುನ್ನತ ಫೋಲ್ಡೇಬಲ್ ಅನುಭವ ನೀಡುವ ನಿರೀಕ್ಷೆಯಿದೆ.

ಫೋನ್‌ 2: ವಿವೋ ಎಕ್ಸ್300 ಸರಣಿ

ಫೋಟೋ, ಸೆಲ್ಫಿ ಪ್ರಿಯರಿಗೆ ಉತ್ತಮ ಎಕ್ಸ್‌ಪೀರಿಯನ್ಸ್‌ ನೀಡಲು ವಿವೋ ಕಂಪನಿಯು ಎಕ್ಸ್ 300 ಮತ್ತು ಎಕ್ಸ್ 300 ಪ್ರೊ ಮಾದರಿಗಳನ್ನು ಹೊರತರುತ್ತಿದೆ. ಡಿಸೆಂಬರ್‌ 2ರಂದು ಇವೆರಡು ಮಾದರಿಗಳು ಬಿಡುಗಡೆಯಾಗಲಿವೆ ಎಂದು ವಿವೋ ಸಂಸ್ಥೆ ಅಧಿಕೃತವಾತಿ ಪ್ರಕಟಿಸಿದೆ.

SMART-PHONE-NEWS.webp

ಫೋನ್‌ 3: ಒನ್‌ಪ್ಲಸ್ 15ಆರ್

ಗೇಮಿಂಗ್‌ ಪ್ರಿಯರಿಗಾಗಿ ಒನ್‌ ಪ್ಲಸ್‌ ತನ್ನ ಬಹುನಿರೀಕ್ಷಿತ 15ಆರ್‌ ಸ್ಮಾರ್ಟ್‌ ಫೋನ್‌ ರಿಲೀಸ್‌ ಮಾಡುತ್ತಿದೆ. ಡಿ.17ರಂದು ಈ ಫೋನ್‌ ಲಾಂಚ್‌ ಆಗಲಿದೆ. ಮೊಬೈಲ್‌ ಕಾರ್ಯಕ್ಷಮತೆ, ಉತ್ತಮ ಕ್ಯಾಮರಾ ಎಕ್ಸ್‌ಪೀರಿಯನ್ಸ್‌ ನೀಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಫೋನ್‌ 4: ಮೊಟೊರೊಲಾ ಎಡ್ಜ್ 70

ಮೊಟೊರೊಲಾ ಕಂಪನಿ ಎಡ್ಜ್‌ 70 ಮಾದರಿಯನ್ನು ಡಿಸೆಂಬರ್‌ನಲ್ಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಳೆದ ಅಕ್ಟೋಬರ್‌ನಿಂದ ಈ ಫೋನ್‌ ಕುರಿತು ಟೆಕ್‌ ಲೋಕದಲ್ಲಿ ಬಹಳ ಚರ್ಚೆಯಾಗುತ್ತಿದೆ. ಅತ್ಯಂತ ಸ್ಲಿಮ್‌ ಫೋನ್‌, ಅತ್ಯುತ್ತಮ ಸ್ಕ್ರೀನ್‌ ಎಕ್ಸ್‌ಪೀರಿಯನ್ಸ್‌ ನೀಡಲಿದೆ ಎಂದು ಗ್ಯಾಜೆಟ್‌ ರಿವ್ಯುವರ್‌ಗಳು ತಿಳಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದ ಪಿಇಎಸ್‌ ಸಂಸ್ಥೆಗೆ ನೂತನ ಕುಲಸಚಿವರ ನೇಮಕ

ಇನ್ನು, ಡಿಸೆಂಬರ್‌ ತಿಂಗಳಲ್ಲಿ ಮತ್ತಷ್ಟು ಫೋನ್‌ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ. ರೆಡ್‌ಮೀ ನೋಟ್‌ 15 ಪ್ರೋ, ರೆಡ್‌ಮೀ ನೋಟ್‌ 15 ಪ್ರೋ ಪ್ಲಸ್‌, ರಿಯಲ್‌ಮೀ ಪಿ4ಎಕ್ಸ್‌ ಫೋನುಗಳು ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment