ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 10 ಆಗಸ್ಟ್ 2020
ನಟ ಸುದೀಪ್ ಅವರ ಚಾರಿಟೆಬಲ್ ಟ್ರಸ್ಟ್ ಶಿವಮೊಗ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದೆ. ಈ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಯೆ ಟ್ರಸ್ಟ್‍ನ ಗುರಿಯಾಗಿದೆ.
ಯಾವೆಲ್ಲ ಶಾಲೆ ದತ್ತು ಪಡೆಯಲಾಗಿದೆ?
ಕಿಚ್ಚ ಸುದೀಪ ಚಾರಿಟಬಲ್ ಟ್ರಸ್ಟ್‍ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಪ್ರಕಟಿಸಲಾಗಿದೆ. ಸಾಗರ ತಾಲೂಕಿನ ಆವಿಗೆ ಹಳ್ಳಿ, ಹಾಳಸಸಿ, ಎಸ್.ಎನ್.ಬಡಾವಣೆ, ಎಂ.ಎಲ್.ಹಳ್ಳಿಯ ಸರ್ಕಾರಿ ಶಾಲೆಗಳನ್ನು ಟ್ರಸ್ಟ್ ದತ್ತು ಪಡೆದಿದೆ.
ಈ ಸಂಬಂಧ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‍ನ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನ ಪ್ರಕಟಿಸಲಾಗಿದೆ. ಕಾಡಿನ ಮಕ್ಕಳಿಗೆ ಅಕ್ಷರದ ಜೊತೆ ಕನ್ನಡದ ಕಂಪನ್ನು ಉಡುಗೊರೆಯಾಗಿ ಕೊಟ್ಟ ಕಿಚ್ಚ ಸುದೀಪ್ ಎಂದು ಬರೆದುಕೊಳ್ಳಲಾಗಿದೆ.
ಕಾಡಿನ ಮಕ್ಕಳಿಗೆ ಅಕ್ಷರದ ಜೊತೆ ಕನ್ನಡದ ಕಂಪನ್ನು ಉಡುಗೊರೆಯಾಗಿ ಕೊಟ್ಟ ಮೊದಲ ಮಾನವ #ಕಿಚ್ಚ_ಸುದೀಪ ಸರ್.
Full video uploaded in Instagram
link : https://t.co/5ieTPIBEpF#ಮೊದಲು_ಮಾನವನಾಗು#KichchaSudeepaCharitableSociety@KicchaSudeep @KSCS_Official
@RK08487718 @JagadishJaggi78 pic.twitter.com/ioWlMZsgWl— KITTY (@Kitty_R7) August 9, 2020
ಏನೆಲ್ಲ ಮಾಡಲಿದೆ ಟ್ರಸ್ಟ್?
ಇತ್ತೀಚೆಗಷ್ಟೆ ಚಿತ್ರದುರ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ದತ್ತು ಪಡೆದಿತ್ತು. ಈಗ ತಮ್ಮೂರು ಶಿವಮೊಗ್ಗ ಜಿಲ್ಲೆಯ ನಾಲ್ಕು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಮುಂದಿನ ಐದು ಶೈಕ್ಷಣಿಕ ವರ್ಷದ ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸಲಿದ್ದಾರೆ. ಶಿಕ್ಷಕರ ಸಂಬಳ ಮತ್ತು ವಿದ್ಯಾರ್ಥಿ ವೇತನ ಹೊರತು, ಕಟ್ಟಡ ನಿರ್ಮಾಣ, ಪೇಂಟಿಂಗ್, ಶೌಚಾಲಯ ನಿರ್ಮಾಣ ಸೇರಿದಂತೆ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ವಹಿಸಿಕೊಂಡಿದೆ.
ನಟ ಸುದೀಪ್ ಕಾರ್ಯಕ್ಕೆ ಶಿವಮೊಗ್ಗದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಚಾರಿಟಿಬಲ್ ಟ್ರಸ್ಟ್ ಕಾರ್ಯ ಮಾದರಿ ಎಂದು ಟ್ವಿಟರ್‍ನಲ್ಲಿ ಕಮೆಂಟುಗಳು ಬಂದಿವೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422