ರಿಪ್ಪನ್ ಪೇಟೆ: ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳುಗುಳಿ ಶಂಕರದ ಶಂಕರೇಶ್ವರ ದೇವಸ್ಥಾನದಲ್ಲಿ (Guluguli Shankara) ಮಹಾ ಶಿವರಾತ್ರಿ ಅಂಗವಾಗಿ ಫೆಬ್ರವರಿ 15, 16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಾಸಪ್ಪ ಕಾರ್ಯದರ್ಶಿ ಅವಡೆ ಶಿವಪ್ಪ ತಿಳಿಸಿದ್ದಾರೆ.
ಫೆ. 15ರಂದು ಬೆಳಿಗ್ಗೆ 10ಕ್ಕೆ ಶಿವಮೊಗ್ಗದ ಹಂದಲಸೆ ರಾಘವೇಂದ್ರ ಭಟ್ ನೇತೃತ್ವದಲ್ಲಿ ಶಂಕರೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಸಾಮೂಹಿಕ ರುದ್ರಹೋಮ, ಕುಂಭಾಭಿಷೇಕ ಹಾಗೂ ಮಹಾಪೂಜೆ ಜರುಗಲಿದೆ. ರಾತ್ರಿ 10ಕ್ಕೆ ಶಾಂತಪುರ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಹಾಗೂ ಅಹೋರಾತ್ರಿ ಜಾಗರಣೆ ಅಂಗವಾಗಿ ಶ್ರೀಕ್ಷೇತ್ರ ಹಾಲಾಡಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಪಂಜರ ಪಕ್ಷಿ ಹಾಗೂ ಮೀನಾಕ್ಷಿ ಕಲ್ಯಾಣ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ – ಏಲಕ್ಕಿ ಬಾಳೆಹಣ್ಣು ಕಳ್ಳತನ, ದಾಖಲಾಯ್ತು ಪ್ರಕರಣ, ಎಲ್ಲಿ? ಆಗಿದ್ದೇನು?







