ಮಂಗಳೂರಿನಲ್ಲಿ ಸಾಲು ಸಾಲು ಪ್ರಶಸ್ತಿ ಬಾಚಿಕೊಂಡ ಶಿವಮೊಗ್ಗದ ಕ್ರೀಡಾಪಟುಗಳು

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 4 OCTOBER 2023

SHIMOGA : ಜ್ಯೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ (Championship) ಶಿವಮೊಗ್ಗದ ಕ್ರೀಡಾಪಟುಗಳು ಹಲವು ಸಾಧನೆ ಮಾಡಿದ್ದಾರೆ. ಮಂಗಳೂರಿನಲ್ಲಿ ಸೆ.27ರಿಂದ 30ರವರೆಗೆ ಸ್ಟೇಟ್‌ ಜ್ಯೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ನಡೆದಿತ್ತು.

ಶಿವಮೊಗ್ಗದ ಕ್ರೀಡಾಪಟುಗಳ ಸಾಧನೆ

ಸಿರಿ ಕೆ.ಜೆ ಟ್ರೈಯಾತ್ಲೈನ್ ಕ್ರೀಡೆಯಲ್ಲಿ ಪ್ರಥಮ, ಅಮೂಲ್ಯ 3 ಕಿ.ಮೀ ನಡಿಗೆ ದ್ವಿತೀಯ, ಅಮೂಲ್ಯ ಉದ್ದ ಜಿಗಿತ ತೃತೀಯ, ಚೈತನ್ಯ ಎಂ ನಾಯ್ಕ ಜಾವಲಿನ್ ಎಸೆತ ತೃತೀಯ, ಭೂಮಿಕಾ ಕೆ ಎನ್ ಟ್ರಿಪಲ್ ಜಂಪ್ ಪ್ರಥಮ, ಗೌತಮಿ ಗೌಡ ಎತ್ತರ ಜಿಗಿತ ಪ್ರಥಮ, ಶರತ್ ಕೆ.ಜೆ ಕಿಡ್ಸ್ ಜಾವಲಿನ್ ಪ್ರಥಮ, ಸಂಜಯ್ ಎಸ್ 60 ಮೀ. ದ್ವಿತೀಯ, ನಿತಿನ್ ಸಿಂಗ್ ಉದ್ದಜಿಗಿತ, ಎಕ್ಸ್‍ಹೆತ್ಲೈನ್ ದ್ವಿತೀಯ ಹಾಗೂ ತೃತೀಯ, ಗೌತಮ್ 100 ಮೀ. ದ್ವಿತೀಯ, ಆಕಾಶ್‌ ಎಸ್ ಗೊಲ್ಲರ್ 400 ಮೀ ದ್ವಿತೀಯ, ಆರ್ಶಿತ್ 800 ಮೀ ದ್ವಿತೀಯ, ಸುದೀಪ್ ಎತ್ತರ ಜಿಗಿತ ಪ್ರಥಮ ಹಾಗೂ ದಿಲೀಪ್ ಟ್ರಿಪಲ್ ಜಂಪ್ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ- ಭದ್ರಾವತಿಯಲ್ಲಿ ಶಿಕ್ಷಕನ ಪರ ಬೀದಿಗಿಳಿಯಿತು ಇಡೀ ಊರು, ರಸ್ತೆ ತಡೆದು ರಾಜಕಾರಣಿಗಳಿಗೆ ಹಿಡಿಶಾಪ ಹಾಕಿದ ಗ್ರಾಮಸ್ಥರು

ಅಥ್ಲೆಟಿಕ್ಸ್ ತರಬೇತುದಾರ ಬಾಳಪ್ಪ ಮಾನೆಯವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ತಿಳಿಸಿದ್ದಾರೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment