ಬೆಂಗಳೂರು : ಕರೋನ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಸೆಮಿ ಲಾಕ್‍ಡೌನ್ ಘೋಷಣೆ ಮಾಡಿದೆ. ಇವತ್ತು ರಾತ್ರಿ 9 ಗಂಟೆಯಿಂದಲೇ ನೂತನ ನಿಯಮ ಜಾರಿಯಾಗಲಿದೆ.
ಸರ್ಕಾರ ಸೆಮಿ ಲಾಕ್‍ಡೌನ್ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾವ ಸೇವೆ ಇರುತ್ತೆ, ಯಾವುದು ಇರುವುದಿಲ್ಲ ಎಂದು ಈ ಗೈಡ್‍ಲೈನ್‍ನಲ್ಲಿ ಪ್ರಕಟಿಸಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
![]() |
ಯಾವುದೆಲ್ಲ ಇರುತ್ತೆ?
ದಿನಸಿ, ತರಕಾರಿ, ಹಣ್ಣು, ಹಾಲು, ಬೇಕರಿ ಉತ್ಪನ್ನ, ಮಾಂಸ, ಮೀನು, ನ್ಯಾಯಬೆಲೆ ಅಂಗಡಿ , ಮದ್ಯ, ಪ್ರಾಣಿಗಳ ಮೇವಿನ ಅಂಗಡಿಗಳು ಓಪನ್. ಬೆಳಗ್ಗೆ 6 ರಿಂದ 10 ಗಂಟೆವೆರೆಗೆ ಮಾತ್ರ ಅವಕಾಶ.
ಬ್ಯಾಂಕ್, ಇನ್ಷುರೆನ್ಸ್ ಕಂಪನಿ, ಎಟಿಎಂ ಕೇಂದ್ರಗಳು ತೆರೆಯಲು ಅವಕಾಶವಿದೆ.
ಟೆಲಿಕಾಂ, ಇಂಟರ್‍ನೆಟ್, ಕೇಬಲ್ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿ ಮತ್ತು ಅವರ ವಾಹನಗಳ ಸಂಚಾರಕ್ಕೆ ಅವಕಾಶವಿದೆ.
ಇ – ಕಾಮರ್ಸ್, ಅಗತ್ಯ ಸರಕುಗಳ ಪೂರೈಕೆ, ಉತ್ಪಾದನೆ, ಗೋದಾಮುಗಳು ತೆಗೆಯಲು ಅವಕಾಶವಿದೆ.
ವಿದ್ಯುತ್ ಉತ್ಪಾದನೆ, ಸರಬರಾಜು ಸಂಬಂಧ ಚಟುವಟಿಕೆಗೆ ಅವಕಾಶ.
ಆರೋಗ್ಯ ಕ್ಷೇತ್ರ, ಮೆಡಿಕಲ್ ಸಿಬ್ಬಂದಿ, ಮೆಡಿಕಲ್ ಶಾಪ್‍ಗಳನ್ನು ತೆಗೆಯಬಹುದು. ಆಯುಷ್, ಪಶು ಆರೋಗ್ಯ ಕೇಂದ್ರ, ಲ್ಯಾಬ್, ಕ್ಲಿನಿಕ್, ಬ್ಲಡ್ ಬ್ಯಾಂಕ್ ಸೇರಿದಂತೆ ಆರೋಗ್ಯ ಸೇವೆ ಸಂಬಂಧ ಎಲ್ಲಾ ಚಟುವಟಿಕೆಗೆ ಅವಕಾಶ.
ಮುದ್ರಣ, ದೃಶ್ಯ ಮಾಧ್ಯಮಗಳ ಕಾರ್ಯಚಟುವಟಿಕೆ ನಿರ್ಬಂಧ ಅನ್ವಯವಾಗದು.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆ, ಅಂಗಡಿ , ಗೋದಾಮು ತೆಗೆಯಲು ಅವಕಾಶವಿದೆ. ನರೇಗಾ ಕೆಲಸಗಳು ಮುಂದುವರೆಸಬಹುದು.
ಅನಾಥಾಶ್ರಮ, ವೃದ್ಧಾಶ್ರಮ, ಆರೈಕೆ ಕೇಂದ್ರಗಳು, ಮೇಲ್ವಿಚಾರಣೆ ಕೇಂದ್ರಗಳ ಕಾರ್ಯಚಟುವಟಿಕೆಗೆ ನಿರ್ಬಂಧವಿಲ್ಲ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಲ್ ಟಿಕಟ್ ಪ್ರದರ್ಶಿಸಿ ಸಂಚರಿಸಬಹುದು. ಇವುಗಳನ್ನೆ ಪಾಸ್ ರೀತಿ ಉಪಯೋಗಿಸಬಹುದು. ಇಂತಹ ವಿದ್ಯಾರ್ಥಿಗಳ ಓಡಾಟಕ್ಕೆ ಆಟೋ, ಕ್ಯಾಬ್ ಬಳಸಬಹುದು.
ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿರುವ ಕಾರ್ಮಿಕರು ಆಯಾ ಕಂಪನಿ ಒದಗಿಸಿರುವ ಐಡಿ ಕಾರ್ಡ್ ಹೊಂದಿದ್ದು, ಓಡಾಡಬಹುದು.
ಅನುಮತಿ ಇರುವ ಸರ್ಕಾರಿ ಅಧಿಕಾರಿಗಳು ಸಂಚರಿಸಬಹುದು. ಅಗತ್ಯವಿದ್ದಾಗ ಐಡಿ ಕಾರ್ಡ್ ಪ್ರದರ್ಶಿಸಬಹುದು.
ರೋಗಿಗಳು, ಅವರ ಸಂಬಂಧಿಗಳು, ಆಸ್ಪತ್ರೆಗೆ ತೆರಳುವವರಿಗೆ ಯಾವುದೆ ನಿರ್ಬಂಧವಿಲ್ಲ.
ಕ್ರೀಡಾಂಗಣಗಳಲ್ಲಿ ಕ್ರೀಡಾ ತರಬೇತಿಗೆ ಅವಕಾಶ. ಕ್ರೀಡಾಪಟುಗಳು, ತರಬೇತುದಾರರು ಮಾತ್ರ ಇರಬೇಕು. ಪ್ರೇಕ್ಷಕರಿಗೆ ಅಕಾಶವಿಲ್ಲ. ಸ್ವಿಮ್ಮಿಂಗ್ ಫೆಡರೇಷನ್‍ನಿಂದ ಅನುಮತಿ ಪಡೆದ ಸ್ವಿಮ್ಮಿಂಗ್ ಪೂಲ್‍ಗಳಿಗೆ ಮಾತ್ರ ಅವಕಾಶ.
ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ಬಂಧೀಖಾನೆ, ಅಗ್ನಿಶಾಮಕ, ತರ್ತು ಸೇವೆಗೆಳಿಗೆ ಅವಕಾಶ. ಉಪ ನೋಂದಣಾಧಿಕಾರಿ, ಕಂದಾಯ ಇಲಾಖೆಗಳಿಗೆ ಮಾತ್ರಅವಕಾಶ.
ಅಗತ್ಯ ಸೇವೆಗಳನ್ನು ಒದಗಿಸುವ ವಿದ್ಯುತ್, ನೀರು, ನೈರ್ಮಲ್ಯ, ನಗರ ಸ್ಥಳೀಯ ಸಂಸ್ಥೆಗಳು, ಡಿಸಿ ಕಚೇರಿ, ಕೆಳ ಹಂತದ ಕೆಲವು ಕಚೇರಿಗಳು, ಖಜಾನೆ ಕಚೇರಿ, ಅರಣ್ಯ ಇಲಾಖೆ ಘೋಷಿಸಿದ ಇಲಾಖೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.
ಹೈಕೋಟ್ ಸೂಚನೆ ಮೇರೆಗೆ ಕೋರ್ಟು ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಕಚೇರಿಗಳು ಕರ್ತವ್ಯ ನಿರ್ವಹಿಸಬಹುದು.
ಏನೆಲ್ಲ ಇರುವುದಿಲ್ಲ?
ರೈಲು, ವಿಮಾನ ಸೇವೆ ಹೊರತು ಬಸ್ಸು, ಆಟೋ, ಕ್ಯಾಬ್ ಸೇರಿದಂತೆ ಖಾಸಗಿ ವಾಹನಗಳ ಸಂಚಾರ ನಿರ್ಬಂಧ. ತುರ್ತು ಸಂದರ್ಭ ಮಾತ್ರ ವಾಹನಗಳು ರಸ್ತೆಗಿಳಿಯಬಹುದು.
ಶಾಲೆ, ಕಾಲೇಜಗಳು ಇಲ್ಲ. ಆನ್‍ಲೈನ್ ಕ್ಲಾಸ್ ನಡೆಸಲು ಅವಕಾಶ. ನಿಗದಿಯಾಗಿರುವ ಪರೀಕ್ಷೆಗಳನ್ನು ಕೋವಿಡ್ ನಿಯಮಾನುಸಾರ ನಡೆಸಬಹುದು.
ಚಿತ್ರಮಂದಿರ, ಜಿಮ್, ಸ್ಪಾ, ಶಾಪಿಂಗ್ ಮಾಲ್, ಯೋಗ ಕೇಂದ್ರ, ಮನರಂಜನಾ ತಾಣ, ಅಮ್ಯೂಸ್‍ಮೆಂಟ್ ಪಾರ್ಕ್, ಕ್ಲಬ್, ಬಾರ್, ಆಡಿಟೋರಿಯಂಗಳು ಬಂದ್.
ಸಾಮಾಜಿಕ, ರಾಜಕೀಯ, ಕ್ರೀಡೆ, ಸಾಂಸ್ಕೃತಿಕ, ಮನರಂಜನೆ, ಶಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.
ದೇವಸ್ಥಾನ, ಚರ್ಚು, ಮಸೀದಿ ಸೇರಿ ಸರ್ವಧರ್ಮ ಕ್ಷೇತ್ರಗಳು ಬಂದ್. ಪೂಜೆ ಸಲ್ಲಿಸಲು ಅರ್ಚಕರಿಗೆ ಮಾತ್ರ ಅವಕಾಶ.
ಹೆಚ್ಚು ಜನರು ಸೇರುವ ಹಿನ್ನೆಲೆ ಗಾರ್ಮೆಂಟ್ಸ್‍ಗಳಿಗೂ ನಿರ್ಬಂಧ ವಿಧಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200