JUST MAHITI : ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ (Job) ನೇಮಕಾತಿ ವೇಳೆ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಹುದ್ದೆಗಳು ಮೀಸಲಿಡಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಈ ಸಂಬಂಧ ರಾಜ್ಯ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ತಂದಿದೆ.
ಏನೆಲ್ಲ ತಿದ್ದುಪಡಿ ತರಲಾಗಿದೆ?
![]() |
ರಾಜ್ಯ ಸರ್ಕಾರದ ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ವೇಳೆ ಅರ್ಜಿಯಲ್ಲಿ ಕ್ರೀಡಾಪಟುಗಳಿಗೆ ಪ್ರತ್ಯೇಕ ಕಾಲಂ ಮೀಸಲಿಡಬೇಕು. ಕರ್ನಾಟಕವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಗುಂಪು ಕ್ರೀಡೆಗಿಂತಲು ವೈಯಕ್ತಿಕ ಕ್ರೀಡೆಯಲ್ಲಿ ಗೆದ್ದವರಿಗೆ ಮೊದಲ ಆದ್ಯತೆ ಸಿಗಲಿದೆ ಎಂದು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ.
ಯಾವೆಲ್ಲ ಕ್ರೀಡೆಗೆ ಮೀಸಲು ಸಿಗಲಿದೆ?
ರಾಜ್ಯ ಸರ್ಕಾರ 33 ಕ್ರೀಡೆಗಳನ್ನು ಗುರುತಿಸಿದೆ. ಈ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಮೀಸಲು ಅನ್ವಯವಾಗಲಿದೆ. ಅಥ್ಲೆಟಿಕ್ಸ್, ಆರ್ಚರಿ, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ರೈಫಲ್ ಶೂಟಿಂಗ್, ವಾಲಿಬಾಲ್, ವೆಯ್ಟ್ ಲಿಫ್ಟಿಂಗ್, ನೆಟ್ ಬಾಲ್, ಪವರ್ ಲಿಫ್ಟಿಂಗ್, ಯೋಗ, ಬೇಸ್ ಬಾಲ್, ರೆಸಲಿಂಗ್, ಸ್ವಿಮ್ಮಿಂಗ್ (ಅಕ್ವಟಿಕ್), ಜೂಡೋ, ಕ್ರಿಕೆಟ್, ಖೋ-ಖೋ, ಟೇಬಲ್ ಟೆನ್ನಿಸ್, ಹ್ಯಾಂಡ್ ಬಾಲ್, ವಾಟರ್ ಸ್ಪೋರ್ಟ್ಸ್ ರೋಯಿಂಗ್, ವಾಟರ್ ಸ್ಪೋರ್ಟ್ಸ್ – ಕಯಾಕಿಂಗ್, ವಾಟರ್ ಸ್ಪೋರ್ಟ್ಸ್ – ಕೆನೊಯಿಂಗ್, ಲಾನ್ ಟೆನಿಸ್, ಬ್ಯಾಡ್ಮಿಂಟನ್, ಸೇಪಕ್ ಟಕ್ರಾ, ಟೇಕ್ವಾಂಡೋ, ಪ್ಯಾರಾ ಲಾನ್ ಬೌಲ್, ಪ್ಯಾರಾ ಟೆನ್‌ಪಿನ್ ಬೌಲಿಂಗ್ ಆಟಗಳಲ್ಲಿ ಭಾಗವಹಿಸಿದ ಪ್ರತಿಭಾವಂತರಿಗೆ ಮೀಸಲು ಸಿಗಲಿದೆ.
ಎಷ್ಟು ಗ್ರೇಡಿಂಗ್ ಅಥವಾ ಕೃಪಾಂಕ ಸಿಗಲಿದೆ?
ಇನ್ನು ಗ್ರೇಡಿಂಗ್ ಅಥವಾ ಕೃಪಾಂಕದ ಕುರಿತು ನಿಯಮಗಳಲ್ಲಿ ತಿಳಿಸಲಾಗಿದೆ. ವಿವಿಧ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದವರಿಗೆ ಕೃಪಾಂಕ ನಿಗದಿಪಡಿಸಲಾಗಿದೆ. 75 ರಿಂದ 46ರವರೆಗೆ ಗ್ರೇಡಿಂಗ್ ದೊರೆಯಲಿದೆ.
ಇದನ್ನೂ ಓದಿ » ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್‌ಗೆ ವಿಮಾನ, ಟೈಮಿಂಗ್ ಏನು? ಟಿಕೆಟ್ ಬುಕಿಂಗ್ ಹೇಗೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200