ಒಣಗುತ್ತಿವೆ ಬೆಳೆ, ಚಿಂತೆಗೀಡಾದ ರೈತ
ರಣ ಬಿಸಿಲು ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ. ಭತ್ತ, ಜೋಳದ ಬೆಳೆಗೆ ಹೆಚ್ಚು ನೀರು ಬೇಕು. ವಿಪರೀತ ಬಿಸಿಲಿನಿಂದಾಗಿ ನೀರಿಲ್ಲದೆ ರೈತರು ಬೇಸಿಗೆ ಬೆಳೆಯ ಯೋಚನೆ ಕೈಬಿಟ್ಟಿದ್ದಾರೆ. ಪಂಪ್ ಸೆಟ್, ಬಾವಿಗಳ ನಿರೀಕ್ಷೆಯಲ್ಲಿ ಬೆಳೆ ಬೆಳೆದವರು ಈಗ ನೀರಿನ ಅಭಾವದಿಂದ ಪರಿತಪಿಸುತ್ತಿದ್ದಾರೆ. ಅಡಿಕೆ ತೋಟಗಳು ಕೂಡ ಒಣಗುತ್ತಿದ್ದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಮರಗಳನ್ನೆಲ್ಲ ಕಡಿದು ಈಗ ನೆರಳಿಗೆ ಹುಡುಕಾಟ
ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ನಗರದ ವಿವಿಧೆಡೆ ಮರಗಳ ಕಡಿತಲೆ ಮಾಡಲಾಗಿದೆ. ಈಗ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಬೆರಳೆಣಿಕೆ ಮರಗಳ ನೆರಳು ಅರಸುತ್ತಿದ್ದಾರೆ. ಮರದ ನೆರಳು ಇರುವೆಡೆ ವಾಹನಗಳ ಪಾರ್ಕಿಂಗ್‌ಗೆ ನೂಕುನುಗ್ಗಲು ಉಂಟಾಗುತ್ತಿದೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮರಗಳ ಕೆಳಗೆ, ಬಸ್ಸು, ಲಾರಿಗಳ ನೆರಳಿನಲ್ಲಿ ವಾಹನಗಳನ್ನು ನಿಲ್ಲಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಮುಂದಿನ ಐದು ದಿನ ಹೇಗಿರುತ್ತೆ ಹವಾಮಾನ? ಬೂತ್ ಕಾರ್ಯಕರ್ತರಿಗೆ ತಲೆನೋವಾದ ಬಿಸಿಲ ಝಳ, ಹೇಗದು – ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200