ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 21 ಮಾರ್ಚ್ 2020
ಕರೋನ ಮುನ್ನೆಚ್ಚರಿಕೆ ಹಿನ್ನೆಲೆ ಶಿವಮೊಗ್ಗದ ಹಲವು ಪ್ರಾರ್ಥನಾ ಮಂದಿರಗಳು ಬಂದ್ ಆಗಿವೆ. ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ.
ಯಾವ್ಯಾವ ದೇಗುಲ ಬಂದ್?
ಶಿವಮೊಗ್ಗ ಜಿಲ್ಲೆಯ ಹಲವು ದೇಗುಲಗಳು ಬಂದ್ ಆಗುತ್ತಿವೆ. ಪ್ರಮುಖವಾಗಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಸನ್ನಿಧಿ ಬಂದ್ ಮಾಡಲಾಗಿದೆ. ಹೆಚ್ಚು ಭಕ್ತರು ಮತ್ತು ಪ್ರವಾಸಿಗರು ಬರುವ ಧಾರ್ಮಿಕ ಕ್ಷೇತ್ರಗಳಲ್ಲಿ ಸಿಗಂದೂರು ಚೌಡೇಶ್ವರಿ ಸನ್ನಿಧಿಯು ಒಂದು. ಮಾರ್ಚ್ 31ರವರೆಗೆ ಚೌಡೇಶ್ವರಿ ಸನ್ನಿಧಿ ಬಂದ್ ಆಗಲಿದೆ.
ಶಿಕಾರಿಪುರ ತಾಲೂಕು ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ದೇವಾಲಯವನ್ನು ಬಂದ್ ಮಾಡಲಾಗುತ್ತಿದೆ. ಮಾರ್ಚ್ 24ರಂದು ನಡೆಯಬೇಕಿದ್ದ ಅಮಾವಾಸ್ಯೆ ದಾಸೋಹ ವಿಶೇಷ ಪೂಜೆಯನ್ನು ರದ್ದುಗೊಳಿಸಲಾಗಿದೆ. ನಿತ್ಯ ವಿಶೇಷ ಪೂಜೆ, ದಾಸೋಹವನ್ನು ಕೂಡ ರದ್ದುಗೊಳಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಪಿ.ಕವಿರಾಜ್ ತಿಳಿಸಿದ್ದಾರೆ.
ಸರ್ವಧರ್ಮ ಸಮನ್ವಯ ಧಾರ್ಮಿಕ ಶ್ರದ್ಧಾ ಕೇಂದ್ರ ಹಣಗೆರೆಯ ಚೌಡೇಶ್ವರಿ, ಭೂತರಾಯ ಮತ್ತು ಹಜರತ್ ಸೈಯದ್ ಸಾದತ್ ಅಲಿ ದರ್ಗಾ ದರ್ಶನಕ್ಕೆ ಬಾರದಂತೆ ತೀರ್ಥಹಳ್ಳಿ ತಹಶೀಲ್ದಾರ್ ಡಾ.ಎಸ್.ಬಿ.ಶ್ರೀಪಾದ ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಸಾಮೂಹಿಕ ಪ್ರಾರ್ಥನೆ ನಿಷೇಧ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ ಕ್ರೈಸ್ತರ ಧರ್ಮ ಕ್ಷೇತ್ರದ ಎಲ್ಲಾ ಚರ್ಚ್’ಗಳಲ್ಲಿನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಭಕ್ತರು ಪಾಲ್ಗೊಳ್ಳುವುದನ್ನು ನಿಷೇಧಿಸಿ ಧರ್ಮಾಧ್ಯಕ್ಷರಾದ ಫಾದರ್ ಡಾ.ಫ್ರಾನ್ಸಿಸ್ ಸೆರಾವೋ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
All major temples in Shimoga district, including Siganduru Chowdeshwari Temple has been shut due to corona.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422