ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 26 JUNE 2023
HUBBALLI : ನೈಋತ್ಯ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಯ 15 ರೈಲುಗಳ ಸಮಯದಲ್ಲಿ (railway timing) ಕೆಲವು ಪ್ರಮುಖ ಬದಲಾವಣೆ ಮಾಡಿದೆ. ಈ ಪೈಕಿ ಶಿವಮೊಗ್ಗದ ಮೂರು ರೈಲುಗಳು ಇದ್ದಾವೆ. ಯಾವ್ಯಾವ ರೈಲಿನ ಸಮಯದಲ್ಲಿ ಬದಲಾವಣೆಯಾಗಿದೆ ಅನ್ನುವುದರ ಕಂಪ್ಲೀಟ್ ವಿವರ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರೈಲು ಸಂಖ್ಯೆ 16580 : ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್
ಶಿವಮೊಗ್ಗದಿಂದ ಈ ಮೊದಲು ಮಧ್ಯಾಹ್ನ 3.30ಕ್ಕೆ ಹೊರಡುತ್ತಿದ್ದ ರೈಲು ಇನ್ಮುಂದೆ 3.45ಕ್ಕೆ ಹೊರಡಲಿದೆ. ಜೂ.28ರಿಂದ ಹೊಸ ಸಮಯ (railway timing) ಜಾರಿಗೆ ಬರಲಿದೆ.
ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
ಶಿವಮೊಗ್ಗ ಟೌನ್ | ಮಧ್ಯಾಹ್ನ 3.30ಕ್ಕೆ ಹೊರಡುತ್ತಿತ್ತು | ಮಧ್ಯಾಹ್ನ 3.45ಕ್ಕೆ ಹೊರಡಲಿದೆ |
ಭದ್ರಾವತಿ | ಮಧ್ಯಾಹ್ನ 3.48ಕ್ಕೆ ತಲುಪಿ – 3.50ಕ್ಕೆ ಹೊರಡುತ್ತಿತ್ತು | ಸಂಜೆ 4.03ಕ್ಕೆ ತಲುಪಿ – 4.05ಕ್ಕೆ ಹೊರಡಲಿದೆ |
ತರೀಕೆರೆ | ಸಂಜೆ 4:08ಕ್ಕೆ ತಲುಪಿ – 4:09ಕ್ಕೆ ಹೊರಡುತ್ತಿತ್ತು | ಸಂಜೆ 4.22ಕ್ಕೆ ತಲುಪಿ – 4.24ಕ್ಕೆ ಹೊರಡಲಿದೆ |
ಬೀರೂರು | ಸಂಜೆ 4:35 – 4:37 | ಸಂಜೆ 4.52- 4.54 |
ಕಡೂರು | ಸಂಜೆ 4:46 – 4:48 | ಸಂಜೆ 5.03 – 5.05 |
ಅರಸೀಕೆರೆ | ಸಂಜೆ 5:18 – 5:23 | ಸಂಜೆ 5.35 – 5.40 |
ತಿಪಟೂರು | ಸಂಜೆ 5:43 – 5:45 | ಸಂಜೆ 6.00 – 6.02 |
ತುಮಕೂರು | ಸಂಜೆ 6:30 – 6:32 | ಸಂಜೆ 6.40 – 6.42 |
ಯಶವಂತಪುರ | ರಾತ್ರಿ 8:30 | ರಾತ್ರಿ 8.30 |
ರೈಲು ಸಂಖ್ಯೆ 16228 : ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್
ಈ ಎಕ್ಸ್‌ಪ್ರೆಸ್ ರೈಲು ಎಂದಿನಂತೆ ರಾತ್ರಿ 9 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. ರಾತ್ರಿ ತುಮಕೂರು, ಯಶವಂತಪುರ, ಬೆಂಗಳೂರು ನಿಲ್ದಾಣಗಳನ್ನು ತಲುಪುವುದು ಮತ್ತು ಅಲ್ಲಿಂದ ಹೊರಡುವ ಸಮಯದಲ್ಲಿ ಬದಲಾವಣೆಯಾಗಿದೆ. ಜೂ. 28ರಿಂದಲೆ ಹೊಸ ಸಮಯ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈವರೆಗೂ ರಾತ್ರಿ 3.28ಕ್ಕೆ ತುಮಕೂರು ತಲುಪಿ 3.30ಕ್ಕೆ ಹೊರಡುತ್ತಿತ್ತು. ಇನ್ಮುಂದೆ ರಾತ್ರಿ 2.18ಕ್ಕೆ ತುಮಕೂರು ತಲುಪಿ 2.20ಕ್ಕೆ ಹೊರಡಲಿದೆ.
ಇದನ್ನೂ ಓದಿ – ಕಾಶಿಪುರ ರೈಲ್ವೆ ಮೇಲ್ಸೇತುವೆ ಕೆಲಸ ಬಿರುಸು | ಹೆಂಚು ತೆಗೆದು ಚಿನ್ನ ಕದ್ದವನು ಅರೆಸ್ಟ್ | ಪುರಲೆ ನಿವಾಸಿಗಳು ಗರಂ
ಬೆಳಗಿನ ಜಾವ 4.40ಕ್ಕೆ ಯಶವಂತಪುರ ನಿಲ್ದಾಣ ತಲುಪಿ 4.42ಕ್ಕೆ ಹೊರಡುತ್ತಿತ್ತು. ಇನ್ಮುಂದೆ 4.28ಕ್ಕೆ ತಲುಪಿ, 4.30ಕ್ಕೆ ಹೊರಡಲಿದೆ.
ಬೆಳಗಿನ ಜಾವ 5ಕ್ಕೆ ಬೆಂಗಳೂರು ನಿಲ್ದಾಣ ತಲುಪಿ 5.05ಕ್ಕೆ ಹೊರಡುತ್ತಿತ್ತು. ಇನ್ಮುಂದೆ ಬೆಳಗಿನ ಜಾವ 4.50ಕ್ಕೆ ಬೆಂಗಳೂರು ತಲುಪಿ 5.05ಕ್ಕೆ ಹೊರಡಲಿದೆ. ಉಳಿದಂತೆ ಯಾವುದೆ ಸಮಯದಲ್ಲಿ ಬದಲಾವಣೆಯ ಇಲ್ಲ.
ಇದನ್ನೂ ಓದಿ – ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಹೇಗಾಗಿದೆ ಕೆಲಸ? ಮೇಲ್ಭಾಗದಲ್ಲಿ ಹೇಗೆ ಕಾಣುತ್ತೆ? ಇಲ್ಲಿದೆ ಸೇತುವೆಯ 8 ವಿಶೇಷತೆ
ರೈಲು ಸಂಖ್ಯೆ 16225 : ಮೈಸೂರು – ಶಿವಮೊಗ್ಗ ಅನ್ ರಿಸರ್ವಡ್ ಎಕ್ಸ್‌ಪ್ರೆಸ್
ಈ ರೈಲು ಈವರೆಗೂ ಸಂಜೆ 4.25ಕ್ಕೆ ಶಿವಮೊಗ್ಗ ನಿಲ್ದಾಣದ ತಲುಪುತ್ತಿತ್ತು. ಇನ್ಮುಂದೆ ಸಂಜೆ 4.40ಕ್ಕೆ ಶಿವಮೊಗ್ಗ ತಲುಪಲಿದೆ. ಜೂ.28ರಿಂದ ಹೊಸ ಸಮಯ ಜಾರಿಗೆ ಬರಲಿದೆ.