SHIMOGA, 27 JULY 2024 : ಭಾರಿ ಗಾಳಿ, ಮಳೆಗೆ ಹಳಿ (Track) ಮೇಲೆ ಮರ ಬಿದ್ದ ಪರಿಣಾಮ ಶಿವಮೊಗ್ಗದ ಪ್ರಮುಖ ರೈಲುಗಳು ಸಂಚಾರದಲ್ಲಿ ವ್ಯತ್ಯಯವಾಯಿತು. ಶಿವಮೊಗ್ಗ ತಾಲೂಕು ಸೂಡೂರು ಬಳಿ ರೈಲ್ವೆ ಹಳಿ ಮೇಲೆ ಮರ ಬಿದ್ದಿತ್ತು. ರೈಲ್ವೆ ವಿದ್ಯುತ್ ಲೈನ್ ಕೂಡ ತುಂಡಾಗಿತ್ತು. ಸಿಬ್ಬಂದಿ ತಡರಾತ್ರಿವರೆಗು ಕಾರ್ಯಾಚರಣೆ ನಡೆಸಿ, ಮರ ತೆರವು ಮಾಡಿ, ವಿದ್ಯುತ್ ಲೈನ್ ಸರಿಪಡಿಸಿದರು.
ಇನ್ನೂ ಬೆಂಗಳೂರು ತಲುಪದ ರೈಲು
ಮರ ಬಿದ್ದ ಹಿನ್ನೆಲೆ ರೈಲುಗಳು ತಡವಾಗಿ ಸಂಚರಿಸಿದರು. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ಇಂಟರ್ಸಿಟಿ ರೈಲು ಸೂಡೂರು ಬಳಿ ಮರ ಬಿದ್ದ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ 10 ಗಂಟೆಗೆ ತಾಳಗುಪ್ಪ ತಲುಪಬೇಕಿದ್ದ ರೈಲು ಮಧ್ಯರಾತ್ರಿ 1.10ಕ್ಕೆ ತಲುಪಿದೆ.
![]() |
ಇನ್ನು, ತಾಳಗುಪ್ಪದಿಂದ ರಾತ್ರಿ ಹೊರಡುವ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ರೈಲು ರಾತ್ರಿ 9.50ಕ್ಕೆ ಆನಂದಪುರ ನಿಲ್ದಾಣಕ್ಕೆ ತಲುಪಿತ್ತು. ಮರ ತೆರವು ಕಾರ್ಯಾಚರಣೆ ಮುಗಿದ ಮೇಲೆ ರಾತ್ರಿ 2.19ಕ್ಕೆ ಆನಂದಪುರದಿಂದ ಹೊರಟಿದೆ. ರಾತ್ರಿ 11 ಗಂಟೆಗೆ ಶಿವಮೊಗ್ಗಿದಂದ ಹೊರಡಬೇಕಿದ್ದ ರೈಲು ರಾತ್ರಿ 3.45ಕ್ಕೆ ಹೊರಟಿದೆ. ಈ ರೈಲು ಬೆಳಗ್ಗೆ 9 ಗಂಟೆ ಹೊತ್ತಿಗೆ ಬೆಂಗಳೂರು ತಲುಪುವ ಸಾಧ್ಯತೆ ಇದೆ.
ರೈಲು ಸಂಚಾರ ವ್ಯತ್ಯಯದಿಂದಾಗಿ ಪ್ರಯಾಣಿಕರು ಪರದಾಡಿದರು. ಜೋರು ಮಳೆ, ಚಳಿ, ಬಸ್ಸುಗಳು ಸಿಗದ ಸಮಯ. ಊರು ತಲುಪಲಾಗದೆ ರೈಲಿನಲ್ಲೇ ಕಾಯುತ್ತ ಕೂರಲಾಗದೆ ಸಂಕಷ್ಟಕ್ಕೀಡಾಗಿದ್ದರು.
ಇದನ್ನೂ ಓದಿ ⇓
ಸೂಡೂರು ಬಳಿ ಹಳಿ ಮೇಲೆ ಬಿದ್ದ ಮರ, ನಡು ಹಾದಿಯಲ್ಲೇ ನಿಂತ ಇಂಟರ್ಸಿಟಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200