ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021
ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ಪುನರ್ ವಿಂಗಡಣೆ ಮಾಡಿ, ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧ ಆಕ್ಷೇಪಣೆಗಳು, ಸಲಹೆಗಳಿದ್ದರೆ ತಿಳಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೊರಬ, ಶಿರಾಳಕೊಪ್ಪ ಪುರಸಭೆ, ಹೊಳೆಹೊನ್ನೂರು, ಆನವಟ್ಟಿ ಪಟ್ಟಣ ಪಂಚಾಯಿತಿ ವಾರ್ಡುಗಳ ಪುನರ್ ವಿಂಗಡನೆ ಮಾಡಲಾಗಿದೆ. ಡಿಸೆಂಬರ್ 27ರಂದು ರಾಜ್ಯ ಪತ್ರದಲ್ಲಿ ಪುನರ್ ವಿಂಗಡಣೆಯ ಮಾಹಿತಿಯನ್ನು ಪ್ರಕಟಿಸಲಾಗಿದೆ.
ರಾಜ್ಯ ಪತ್ರದಲ್ಲಿ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಅಕ್ಷೇಪಣೆಗಳು, ಸಲಹೆಗಳನ್ನು ತಿಳಿಸಬಹುದಾಗಿದೆ. ಕಚೇರಿ ಸಮಯದಲ್ಲಿ, ಅಂದರೆ, ಬೆಳಗ್ಗೆ 10.30 ರಿಂದ ಸಂಜೆ 5.30ರ ಒಳಗೆ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ದಿ ಕೋಶಕ್ಕೆ ಲಿಖಿತವಾಗಿ ಪೂರಕ ಮಾಹಿತಿಯೊಂದಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.