SHIVAMOGGA LIVE NEWS | 21 JUNE 2024
RAINFALL NEWS : ಶಿವಮೊಗ್ಗದಲ್ಲಿ ಆರಿದ್ರಾ ಮಳೆ ಶುರುವಾಗಿದೆ. ನಗರದಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿದೆ. ಕಳೆದ ಕೆಲವು ದಿನದಿಂದ ಮಳೆ ಕಡಿಮೆಯಾಗಿದ್ದರಿಂದ ರೈತರು ಆತಂಕಕ್ಕೀಡಾಗಿದ್ದರು. ಜಿಲ್ಲೆಯ ವಿವಿಧೆಡೆಯು ಮಳೆಯಾಗುತ್ತಿದೆ. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಮಳೆ ಬರುತ್ತಿದೆ.
![]() |
ಶಿವಮೊಗ್ಗದ ಕೋಟೆಗಂಗೂರು, ಅಬ್ಬಲಗೆರೆ, ಸೂಗೂರು, ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಕೊನಗವಳ್ಳಿ, ಆಯನೂರು, ಕುಂಸಿಯಲ್ಲಿ ಮಳೆಯಾಗುತ್ತಿರುವ ವರದಿಯಾಗಿದೆ. ಭದ್ರಾವತಿಯ ಅರೆಬಿಳಚಿ, ಅರಕೆರೆ, ದಾಸರಕಲ್ಲಹಳ್ಳಿ, ಮೈದೊಳಲು, ಗುಡುಮಘಟ್ಟ, ಮಂಗೋಟೆ, ನಿಂಬೆಗೊಂದಿಯಲ್ಲಿ ಮಳೆಯಾಗುತ್ತಿದೆ.
ಶಿಕಾರಿಪುರದ ಕಲ್ಮನೆ, ಸಾಲೂರು, ಗಾಮ, ಅಮಟೆಕೊಪ್ಪ, ಮತ್ತಿಕೋಟೆ, ಚಿಕ್ಕಜಂಬೂರು, ಹಿರೆಜಂಬೂರು, ತಡಗಣಿ, ತಾಳಗುಂದ, ಬಿಳಕಿ, ಹಾರಿಗೆ. ಸೊರಬದ ಚಿತ್ತೂರು, ಇಂಡುವಳ್ಳಿ, ಶಿಗ್ಗಾ, ಮಾವಲಿ, ಹೆಗ್ಗೋಡು, ಹೊಸಬಾಳೆ, ಮಟುಗುಪ್ಪೆ, ಉದ್ರಿ, ತವನಂದಿ, ಬೆನ್ನೂರು, ಕುಬಟೂರು, ತಲ್ಲೂರು, ಬೆನ್ನೂರು. ಸಾಗರದ ಆಚಾಪುರ, ಹೊಸೂರು, ಹಿರೆಬಿಲಗುಂಜಿ, ತ್ಯಾಗರ್ತಿ, ಭೀಮನಕೋಣೆ, ಕಲ್ಮನೆ, ಕೋಳೂರು, ಕಾಂಡಿಕೆ, ಸಿರಿವಂತೆ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.
ಹೊಸನಗರದ ಕೋಡೂರು, ಮುಂಬಾರು, ಅಮೃತ, ಅರಸಾಳು, ಬಾಳೂರು, ಚಿಕ್ಕಜೇನಿ, ಮಾರುತಿಪುರದಲ್ಲಿ ಮಳೆಯಾಗಿದೆ.
ಇದನ್ನೂ ಓದಿ – ಮಣಿಪಾಲ್ ಆಸ್ಪತ್ರೆಯ ಆರೋಗ್ಯ ಕಾರ್ಡ್ ನೋಂದಣಿ ಆರಂಭ, ಪ್ರಯೋಜನವೇನು? ನೋಂದಣಿ ಹೇಗೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200