ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 APRIL 2023
SHIMOGA : ವನ್ಯಜೀವಿ ವಿಭಾಗದ ವೈದ್ಯ (Doctor) ಡಾ.ವಿನಯ್ ಅವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಆಪರೇಷನ್ ಕಾಡಾನೆ ವೇಳೆ ಚನ್ನಗಿರಿಯ ಜೇನಹಳ್ಳಿ ಬಳಿ ಘಟನೆ ಸಂಭವಿಸಿದೆ.
ಚನ್ನಗಿರಿ ತಾಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಬಾಲಕಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಹಿನ್ನಲೆ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಶಿವಮೊಗ್ಗ ವನ್ಯಜೀವಿ ವಿಭಾಗದ ವೈದ್ಯ (Doctor) ಡಾ.ವಿನಯ್ ಅವರ ಮೇಲೆ ದಾಳಿ ನಡೆಸಿದೆ.
ದಾಳಿಯಾಗಿದ್ದು ಹೇಗೆ?
ಶೋಧ ಕಾರ್ಯದ ವೇಳೆ ಆನೆ ಪತ್ತೆಯಾಗಿತ್ತು. ಕೂಡಲೆ ಅರವಳಿಕೆ ಚುಚ್ಚುಮದ್ದನ್ನು ಆನೆಗೆ ಫೈರ್ ಮಾಡಲಾಗಿತ್ತು. ಅನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕೆಳಗೆ ಬಿದ್ದಿದೆ. ಆ ಬಳಿಕ ಅಧಿಕಾರಿಗಳು ಕಾಡಾನೆ ಸಮೀಪಕ್ಕೆ ಹೋಗಿದ್ದಾರೆ. ಈ ವೇಳೆ ದಿಢೀರ್ ಎಚ್ಚರಗೊಂಡ ಆನೆ, ಅರಣ್ಯಾಧಿಕಾರಿಗಳ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ಓಡಲು ಮುಂದಾಗಿದ್ದ ಡಾ.ವಿನಯ್ ಅವರು ಎಡವಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆಗ ಆನೆ ದಾಳಿ ನಡೆಸಿದ್ದು, ಡಾ.ವಿನಯ್ ಅವರು ಗಂಭೀರ ಗಾಯಗೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಾಡಹಗಲೆ ಗನ್ ತೋರಿಸಿ ಬೆದರಿಸದ್ದವನು ಅರೆಸ್ಟ್, ಆತನ ಬಳಿ ಏನೇನೆಲ್ಲ ಸಿಕ್ತು?
ಡಾ. ವಿನಯ್ ಅವರನ್ನು ಕೂಡಲೆ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾರು ಈ ಡಾ. ವಿನಯ್?
ಡಾ. ವಿನಯ್ ಅವರು ಶಿವಮೊಗ್ಗ ವನ್ಯಜೀವಿ ವಿಭಾಗದ ನುರಿತ ವೈದ್ಯರು. ರಾಜ್ಯದ ವಿವಿಧೆಡೆ ಆನೆ ಹಿಡಿಯುವ ಮತ್ತು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಕ್ರೆಬೈಲು ಬಿಡಾರದಲ್ಲಿರುವ ಆನೆಗಳಿಗೂ ಇವರೆ ವೈದ್ಯರು. ವಿವಿಧೆಡೆ ಇತರೆ ವನ್ಯಜೀವಿಗಳ ಕಾರ್ಯಾಚರಣೆಯಲ್ಲಿಯು ಡಾ.ವಿನಯ್ ಭಾಗವಹಿಸಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422