SHIVAMOGGA LIVE NEWS | 23 AUGUST 2023
SHIMOGA : ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ (Congress Party) ಖಚಿತಗೊಂಡಿದೆ. ಆ.24 ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಆ.24ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಾನು ಮತ್ತು ನನ್ನ ಸ್ನೇಹಿತರು ಪಕ್ಷ ಸೇರ್ಪಡೆಯಾಗಲಿದ್ದೇವೆ. ಶಿಕಾರಿಪುರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ನಾಗರಾಜಗೌಡ ಅವರು ನಮ್ಮೊಂದಿಗೆ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ ಹೊತ್ತಿನಲ್ಲೆ ಕಾಂಗ್ರೆಸ್ ಸೇರ್ಪಡೆಯ ಸಂದರ್ಭ ಎದುರಾಗಿತ್ತು. ಆಗ ಕಾರಣಾಂತರದಿಂದ ಜೆಡಿಎಸ್ ಸೇರಬೇಕಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೇಟಿಯಾಗಿ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆಯಾಗಿದೆ ಎಂದರು.
ಶಕ್ತಿ ಮೀರಿ ಸಮಯ ವಿನಿಯೋಗ
ಜಿಲ್ಲೆಯಲ್ಲಿ ಮುಂದಿನ ಜಿಲ್ಲಾ, ತಾಲೂಕು, ವಿಧಾನ ಪರಿಷತ್, ಲೋಕಸಭೆ ಚುನಾವಣೆಗೆ ನಾವೆಲ್ಲ ಶಕ್ತಿ ಮೀರಿ ಸಮಯ ವಿನಿಯೋಗ ಮಾಡುವ ನಿಲುವು ಹೊಂದಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಷರತ್ತು ರಹಿತವಾಗಿ ಸೇರಿದ್ದೇನೆ. ವಿಧಾನ ಪರಿಷತ್ ಚುನಾವಣೆಗೆ ಯಾರಿಗೆ ಟಿಕೆಟ್ ಕೊಟ್ಟರು ಗೆಲವು ಮುಖ್ಯ. ಜೆಡಿಎಸ್ ಪಕ್ಷ ತೊರೆಯಲು ಯಾವುದೆ ಕಾರಣವಿಲ್ಲ. ಆ ಪಕ್ಷದ ಬಗ್ಗೆ ಯಾವುದೆ ಬೇಸರವಿಲ್ಲ. ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಸ್ಥಳೀಯವಾಗಿ ಕೆಲವು ಕಾರಣಗಳಿಂದಾಗಿ ಕಾಂಗ್ರೆಸ್ ಸೇರ್ಪಡೆ ಆಗಬೇಕಾಗಿದೆ. ರಾಜಕೀಯವೇ ಅವಕಾಶ. ಅವಕಾಶವಾದಿಯಲ್ಲದ ನಾಲ್ಕು ರಾಜಕಾರಣಿಗಳನ್ನು ತೋರಿಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ – ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಯನೂರು ಮಂಜುನಾಥ್ ಭೇಟಿ, ಕುತೂಹಲ ಮೂಡಿಸಿದ ನಡೆ
ಪ್ರಸನ್ನ ಕುಮಾರ್ ಸೇರುತ್ತಾರ?
ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು ಕೆಲವರ ವರ್ತನೆಯಿಂದ ಪಕ್ಷ ತೊರೆದಿದ್ದೇನೆ ಎಂದು ತಮಗೆ ಹೇಳಿದ್ದರು. ಪರಿಸ್ಥಿತಿ ಬದಲಾದ ಮೇಲೆ ಅವರು ಕಾಂಗ್ರೆಸ್ ಸೇರಬಹುದು. ಈಗ ನಾನು ಪಕ್ಷ ಸೇರ್ಪಡೆ ಆಗುತ್ತಿರುವುದು ಸಹಜವಾಗಿ ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಿಲ್ಲ. ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ತಮ್ಮ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ ಎಂದು ತಿಳಿಸಿದರು.
ಯೋಗೇಶ್ ಆತಂಕಕ್ಕೆ ಒಳಗಾಗಿರಬೇಕು
ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್ ಅವರು ಆತಂಕಕ್ಕೀಡಾದಂತೆ ಕಂಡು ಬರುತ್ತಿದೆ. ಅವರಿಗಿನ್ನು ಸಣ್ಣ ವಯಸ್ಸು. ತಾಳ್ಮೆ ವಹಿಸಬೇಕು. ಗ್ಯಾರಂಟಿ ಯೋಜನೆ ಸೇರಿದಂತೆ ನಾನಾ ಕಾರಣಕ್ಕೆ ಅವರಿಗೆ ಗೆಲ್ಲುವ ಅವಕಾಶ ಇತ್ತು. ಇಂತಹ ವಾತಾವರಣವಿದ್ದರು ಗೆಲ್ಲಲಾಗದೆ ವಿಚಲಿತರಾದಂತೆ ಕಾಣುತ್ತಿದೆ. ಹಿಂದೆ ಪ್ರಸನ್ನ ಕುಮಾರ್ ಅವರು ಪಡೆದ ಮತಕ್ಕಿಂತಲು 8 ಸಾವಿರ ಮತಗಳನ್ನಷ್ಟೆ ಹೆಚ್ಚಿಗೆ ಪಡೆದಿದ್ದಾರೆ ಎಂದರು.
ಯೋಗೇಶ್ ಅವರ ತಂದೆ ಚಂದ್ರಶೇಖರಪ್ಪ ಅವರು ನಮ್ಮೊಂದಿಗೆ ಬಿಜೆಪಿಯಲ್ಲಿ ಇದ್ದಾಗ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದರು. ಅದರ ರೆಕಾರ್ಡುಗಳು ತೆಗೆಯಲಿ. ಯೋಗೇಶ್ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.
ಪ್ರಮುಖರಾದ ರಿಯಾಜ್ ಅಹಮದ್, ಐಡಿಯಲ್ ಗೋಪಿ, ಧೀರರಾಜ್ ಹೊನ್ನವಿಲೆ, ಶಿ.ಜು.ಪಾಶ, ಆಯನೂರು ಸಂತೋಷ್ ಸೇರಿದಂತೆ ಪ್ರಮುಖರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200