ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 29 ಮಾರ್ಚ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಐದೇ ತಿಂಗಳಲ್ಲಿ, ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಕುಟುಂಬದ ಆಸ್ತಿ ಮೌಲ್ಯ 12 ಕೋಟಿ ರೂ. ಏರಿಕೆಯಾಗಿದೆ.
2014ರ ವಿಧಾನಸಭೆ ಉಪ ಚುನಾವಣೆಗೆ ಹೋಲಿಕೆ ಮಾಡಿದರೆ ಅವರ ಆಸ್ತಿಯು ಮೂರು ಪಟ್ಟು ಹೆಚ್ಚಳವಾಗಿದೆ. 2014ರಲ್ಲಿ 18.34 ಕೋಟಿ ರೂ. ಚರ ಮತ್ತು 15.22 ಕೋಟಿ ರೂ. ಸ್ಥಿರಾಸ್ತಿ ಇತ್ತು. ಅಕ್ಟೋಬರ್’ನಲ್ಲಿ ನಡೆದ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ 32.09 ಕೋಟಿ ರೂ. ಚರ ಮತ್ತು 30.91ಕೋಟಿ ರೂ. ಸ್ಥಿರಾಸ್ತಿಗೆ ಏರಿಕೆಯಾಗಿತ್ತು. ಅಲ್ಲಿಂದ ಈಚೆಗೆ ಐದೇ ತಿಂಗಳಲ್ಲಿ ಅದು 32 ಕೋಟಿ ರೂ. ಚರ ಮತ್ತು 43 ಕೋಟಿ ರೂ. ಸ್ಥಿರಾಸ್ತಿಗೆ ಏರಿಕೆಯಾಗಿದೆ.
ಪತ್ನಿಗೆ ಸಾಲ ಕೊಟ್ಟ ರಾಘವೇಂದ್ರ
ನಾಮಪತ್ರ ಸಲ್ಲಿಕೆ ವೇಳೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಈ ಮಾಹಿತಿಗಳಿವೆ. ಸ್ವತಃ ರಾಘವೇಂದ್ರ ಅವರು 29.15 ಕೋಟಿ ರೂ. ಮೌಲ್ಯದ ನಗದು, ಆಭರಣ, ವಾಹನಗಳನ್ನು ಹೊಂದಿದ್ದರೆ. ಅವರ ಪತ್ನಿ ತೇಜಸ್ವಿನಿ ರಾಘವೇಂದ್ರ ಅವರು 2.93 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ರಾಘವೇಂದ್ರ ಅವರು 37.33 ಕೋಟಿ ರೂ. ನಿವೇಶನ, ತೋಟ, ಭೂಮಿ, ಮನೆಗಳನ್ನು ಹೊಂದಿದ್ದರೆ. ತೇಜಸ್ವಿನಿ ಅವರು 5.55 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ರಾಘವೇಂದ್ರ ಅವರು 70 ಲಕ್ಷ ರೂ. ಮತ್ತು ತೇಜಸ್ವಿನಿ ಅವರು 72 ಲಕ್ಷ ರೂ. ಸಾಲ ಹೊಂದಿದ್ದಾರೆ. ಇವರು ತಮ್ಮ ಕಿರಿಯ ಸಹೋದರ ಬಿ.ವೈ.ವಿಜಯೇಂದ್ರ ಅವರಿಗೆ 20 ಲಕ್ಷ ರೂ. ಮತ್ತು ಪತ್ನಿ ತೇಜಸ್ವಿನಿ ಅವರಿಗೆ 28.76 ಲಕ್ಷ ರೂ. ಸಾಲ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಎಲ್ಲೆಲ್ಲಿದೆ ರಾಘವೇಂದ್ರ ಆಸ್ತಿ?
- ಶಿಕಾರಿಪುರ ತಾಲೂಕು ಚನ್ನಹಳ್ಳಿಯಲ್ಲಿ 11 ಎಕರೆ, ಬಂಡಿ`ೆ`ರನಹಳ್ಳಿಯಲ್ಲಿ 6 ಎಕರೆ
- ಶಿವಮೊಗ್ಗ ನಗರ ಸಮೀಪದ ಪುರದಾಳಲ್ಲಿ 2 ಎಕರೆ ಕೃಷಿ ಭೂಮಿ ಇದೆ.
- ಶಿವಮೊಗ್ಗ ತಾಲೂಕು ಮಾಚೇನಹಳ್ಳಿಯಲ್ಲಿ 4.23, ಹರಕೆರೆಯಲ್ಲಿ 1 ಲಕ್ಷ ಚದರ ಅಡಿ ಮತ್ತು ಇದೇ ಗ್ರಾಮದಲ್ಲಿ 8 ಎಕರೆ, ಗಾಡಿಕೊಪ್ಪದಲ್ಲಿ 11 ಸಾವಿರ ಚ.ಅಡಿ, ಊರುಗಡೂರು ಬಳಿ 63 ಸಾವಿರ ಚ.ಅಡಿ, ಕಾಶಿಪುರ ಬಡಾವಣೆಯಲ್ಲಿ 31ಸಾವಿರ ಚ.ಅಡಿ, ಗೋಪಾಳದಲ್ಲಿ 3 ಎಕರೆ.
- ಶಿಕಾರಿಪುರ ತಾಲೂಕು ಚನ್ನಹಳ್ಳಿಯಲ್ಲಿ 2 ಎಕರೆ, ನಂದಿಹಳ್ಳಿಯಲ್ಲಿ 13 ಎಕರೆ ಭೂಮಿ ಇದೆ.
- ಶಿಕಾರಿಪುರದ ಸ್ವಾಮಿ ವಿವೇಕಾನಂದ ನಗರದಲ್ಲಿ 2,400 ಚ.ಅಡಿ, ಮಾಳೇರಕೇರಿಯಲ್ಲಿ 2,100 ಚ.ಅಡಿ ಕೃಷಿಯೇತರ ಭೂಮಿ ಇದೆ.
- ರಾಘವೇಂದ್ರ ಅವರು ದಳವಗಿರಿ, ಸಹ್ಯಾದ್ರಿ ಹೆಲ್ತ್ ಕೇರ್ ಆ್ಯಂಡ್ ಡಯಾಗ್ನಾಸ್ಟಿಕ್, ಫ್ಲ್ಯುಡ್ ಪವರ್ ಟೆಕ್ನಾಲಜೀಸ್, ಭದ್ರಾ ಕಾಂಕ್ರೀಟ್, ಭಗತ್ ಮೋಟಾರ್ಸ್, ಮೈತ್ರಿ ಮೋಟಾರ್ಸ್, ಮೈತ್ರಿ ಹಾಸ್ಟೆಲ್ಸ್, ಭದ್ರಾ ಫ್ಯೂಲ್ ಸ್ಟೇಷನ್, ಭಗತ್ ಹೋಮ್ಸ್’ನಲ್ಲಿ ಷೇರ್ ಹೊಂದಿದ್ದಾರೆ.
ತೇಜಸ್ವಿನಿ ಅವರು ಭಗತ್ ಹೋಮ್ಸ್, ಆದಿತ್ಯ ಕಾಂಕ್ರೀಟ್, ಇಂದೀವರ್ ಕುಠೀರ್, ಸುಕಲ್ ಟ್ರೇಡರ್ಸ್’ನಲ್ಲಿ ಷೇರುಗಳನ್ನು ಹೊಂದಿದ್ದಾರೆ. ಇವರ ಬಳಿ ಟೊಯೋಟ, ಸ್ಕೋಡಾ, ಫಾರ್ಚೂನರ್ ಸೇರಿದಂತೆ ನಾಲ್ಕು ಕಾರುಗಳು, ಎರಡು ದ್ವಿಚಕ್ರವಾಹನ ಮತ್ತು ಒಂದು ಟ್ರಾಕ್ಟರ್ ಇವೆ. ದಂಪತಿ ಬಳಿ 1.49 ಕೋಟಿ ರೂ. ಮೌಲ್ಯದ ಎರಡು ಕೆ.ಜಿ.ಚಿನ್ನ, 200 ಕ್ಯಾರಟ್ ಡೈಮಂಡ್, 13 ಕೆ.ಜಿ. ಬೆಳ್ಳಿ ಆಭರಣಗಳಿವೆ.
ಬಿ.ವೈ.ರಾಘವೇಂದ್ರ ಅವರು ಒಂದು ಪ್ರಕರಣವನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ದಾಖಲಾದ ಪ್ರಕರಣವು ನಂತರ ರಾಜ್ಯ ಹೈಕೋರ್ಟ್’ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತೀರ್ಪು ಕಾಯ್ದಿರಿಸಿದ್ದು ಇದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಐಟಿ ಇಲಾಖೆ ಆಯುಕ್ತರ ಎದುರು ರಾಘವೇಂದ್ರ ಅವರ ಹಣಕಾಸು ವ್ಯವಹಾರಕ್ಕೆ ಸಂಬಂಸಿದ ಎರಡು ಪ್ರಕರಣದಲ್ಲಿ ಮೇಲ್ಮನವಿ ವಿಚಾರಣೆಯಲ್ಲಿದೆ. ಇದರ ಒಟ್ಟು ಮೊತ್ತ 25,56,333 ರೂ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]