SHIVAMOGGA LIVE NEWS | 30 MAY 2024
SHIMOGA : ಮೇಲ್ಮನೆಗೆ ಆಯ್ಕೆಯಾಗುವವರು ತಮ್ಮ ಚಿಂತನೆಗಳ ಮೂಲಕ ಮತದಾರರನ್ನು (Voters) ಸೆಳೆಯಬೇಕಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತದಾರರನ್ನು ದುಶ್ಚಟಗಳ ದಾಸರನ್ನಾಗಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಬಿಜೆಪಿ ಪಾರ್ಟಿ, ಡಾ.ಸರ್ಜಿಯ ಗುಂಡು ಪಾರ್ಟಿ ಆಗಿದೆ. ಬಿಜೆಪಿ ಕಾರ್ಯಕರ್ತನಾದಾಗಿನಿಂದ ಈವರೆಗೆ ಹಲವು ಚುನಾವಣೆ ಎದುರಿಸಿ, ಗೆಲುವು ಸಾಧಿಸಿದ್ದೇವೆ. ಆದರೆ ದುರಾಭ್ಯಾಸಕ್ಕೆ ಮತದಾರರನ್ನು ತಳ್ಳಲಿಲ್ಲ. ಪಾರ್ಟಿ ಕೊಡಿಸಲಿಲ್ಲ. ಡಾ. ಸರ್ಜಿ ಸುಸಂಸ್ಕೃತ ಮನೆತನದಿಂದ ಬಂದವರು. ಅವರು ಇಂತಹ ಕೆಲಸ ಮಾಡಬಾರದಿತ್ತು ಎಂದರು.
ಹರ್ಷನ ಕೊಲೆಯಾದಾಗ ಪ್ರಗತಿಪರರ ಜತೆ ಡಾ.ಸರ್ಜಿ ಸೇರಿಕೊಂಡರು. ಆಗ ಅವರಿಗೆ ಹಿಂದುತ್ವ ನೆನಪಿಗೆ ಬರಲಿಲ್ಲವೆ. ಈಗ ಹಿಂದುತ್ವದ ಪರ ಮಾತನಾಡುತ್ತಿದ್ದಾರೆ. ಈವರೆಗೆ ಪದವೀಧರರು ಹಿಂದುತ್ವವನ್ನು ಎಂದೂ ಕೈಬಿಟ್ಟಿಲ್ಲ. ಈ ಬಾರಿಯೂ ಅವರು ಹಿಂದುತ್ವದ ಪರ ಇರುವ ರಘುಪತಿ ಭಟ್ ಅವರ ಕೈ ಹಿಡಿಯಲಿದ್ದಾರೆ ಎಂದರು.
ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಮಾತನಾಡಿ, ಉಡುಪಿ ಮಾತ್ರವಲ್ಲದೆ ಕ್ಷೇತ್ರದ ಇತರೆ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದುತ್ವಕ್ಕೆ ಕೈ ಜೋಡಿಸುವ ಎಲ್ಲರೂ ಜತೆಗೆ ರಾಷ್ಟ್ರಭಕ್ತರ ಬಳಗ ಸಹ ಬೆಂಬಲ ನೀಡಿದೆ. ಈ ಚುನಾವಣೆ ಮೂಲಕ ಬಲಿಷ್ಠರನ್ನು ಎದುರಿಸುವ ಅವಕಾಶ ಸಿಕ್ಕಿದೆ ಎಂದರು. ಈಶ್ವರಪ್ಪ ಅವರ ಮುಂದಿನ ಎಲ್ಲ ನಡೆಗಳಲ್ಲೂ ನಾನು ಜೊತೆಯಾಗಿರುತ್ತೇನೆ. ಚುನಾವಣೆಯಲ್ಲಿ ಸೋತರೆ ಅದು ನನ್ನ ವೈಯಕ್ತಿಕ ಸೋಲು. ಗೆದ್ದರೆ ಅದು ಹಿಂದುತ್ವದ ಗೆಲುವು ಎಂದರು.
ಲಕ್ಷ್ಮೀ ಶಂಕರ್ ನಾಯಕ್, ಎಂ. ಶಂಕರ್, ವಾಗೀಶ್ ಸೇರಿ ಹಲವರು ಇದ್ದರು.
ಆದಿಚುಂಚನಗಿರಿಗೆ ರಘಪತಿ ಭಟ್
ಶಿವಮೊಗ್ಗದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಭೇಟಿ ನೀಡಿದ್ದರು. ಪದವೀಧರರಲ್ಲಿ ಮತಯಾಚನೆ ಮಾಡಿದರು. ಎಂ.ಶಂಕರ್, ಅಮಪ್ರಕಾಶ್, ಸುವರ್ಣ ಶಂಕರ್, ಲಕ್ಷ್ಮೀಕಾಂತ್, ಸುಬ್ಬಣ್ಣ ಉಪಸ್ಥಿತರಿದ್ದರು. ಶಿವಮೊಗ್ಗ ನಗರ ಮತ್ತು ಭದ್ರಾವತಿಯ ವಿವಿಧೆಡೆ ರಘುಪತಿ ಭಟ್ ಪ್ರಚಾರ ಮಾಡಿದರು.
ಇದನ್ನೂ ಓದಿ – ಸ್ಮಾರ್ಟ್ ಹೆಲ್ಮೆಟ್ ಸಿದ್ಧಪಡಿಸಿದ ಶಿವಮೊಗ್ಗದ ವಿದ್ಯಾರ್ಥಿಗಳು, ಹೇಗೆ ಕೆಲಸ ಮಾಡುತ್ತೆ? ಪ್ರಯೋಜನವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200