SHIVAMOGGA LIVE NEWS | 17 JUNE 2024
SHIMOGA : ಪೆಟ್ರೋಲ್, ಡಿಸೇಲ್ ಮೇಲೆ ರಾಜ್ಯ ಸರ್ಕಾರ ತೆರಿಗೆ ಹೆಚ್ಚಳ ಮಾಡಿದೆ. ಇದರ ವಿರುದ್ಧ ಶಿವಮೊಗ್ಗದಲ್ಲಿ ಬಿಜೆಪಿ ವತಿಯಿಂದ ಗೋಪಿ ಸರ್ಕಲ್‌ನಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನಪ್ರಕಾಶ್ ಭಾಷಣ (Speech) ಎಲ್ಲರ ಗಮನ ಸೆಳೆದಿತ್ತು. ಇದೇ ಪ್ರತಿಭಟನೆ ಮುಗಿಸಿ ಹೊರಡುವ ಹೊತ್ತಿಗೆ ಭಾನುಪ್ರಕಾಶ್ ಅವರಿಗೆ ಹೃದಯಾಘಾತ ಸಂಭವಿಸಿ, ನಿಧನರಾಗಿದ್ದಾರೆ.
![]() |
ಭಾಷಣದಲ್ಲಿ ಭಾನುಪ್ರಕಾಶ್ ಏನೆಲ್ಲ ಹೇಳಿದರು?
‘ಇವತ್ತು ಬೆಳಗ್ಗೆ ಮೋಹನ್ ರೆಡ್ಡಿ ಅವರು ಕರೆ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಅಣಕು ಶವಯಾತ್ರೆ ಇದೆ ಬನ್ನಿ ಎಂದರು. ಅಲ್ಲಪ್ಪ, ಕಾಂಗ್ರೆಸ್ ಪಕ್ಷವನ್ನು ಉಳಿಸೋಕೆ ಏನು ಪ್ರಯತ್ನ ಮಾಡಲಿಲ್ಲವೆ ಎಂದು ಕೇಳಿದೆ. ವೈದ್ಯರು ಬಹಳ ಪ್ರಯತ್ನಪಟ್ಟರು ಅಗಲಿಲ್ಲ ಎಂದರು. ಸಂಬಂಧಿಕರಿಗೆ ವಿಷಯ ತಿಳಿಸಿದಿರಾ ಎಂದು ಕೇಳಿದೆ. ಸಂಬಂಧಿಕರ ಪೈಕಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದೇವೆ ಎಂದರು. ಅಲ್ಲಿ ನೋಡಿ ಅವರಿಬ್ಬರು ಇದ್ದಾರೆ.’ (ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮುಖವಾಡ ಧರಿಸಿದ್ದವರತ್ತ ತೋರಿಸಿ).
ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ
‘ನಮಗೆ ಅವಕಾಶ ಕೊಟ್ಟರೆ ಬದಲಾವಣೆ ಮಾಡುತ್ತೇವೆ ಅಂದಿದ್ದರು. ಆದರೆ ಈತನಕ ಏನು ಮಾಡಿದ್ದಾರೆ? 1459 ಕೋಟಿ ರೂ. ಎಲ್ಲಿ ಹೋಯ್ತು. ಇದಕ್ಕಾಗಿ ಶಿವಮೊಗ್ಗದಲ್ಲಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವತ್ತಿನ ಹೋರಾಟ ಕಾಂಗ್ರೆಸ್‌ನ ಮತದಾರರನ್ನು ಎಚ್ಚರಿಸುವ ಪ್ರಯತ್ನ. ಡಿಸೇಲ್, ಪೆಟ್ರೋಲ್ ದರ ಎರಿಕೆಯಿಂದಾಗಿ ಎಲ್ಲದರ ಬೆಲೆಯೂ ಏರಿಸಿದಂತಾಗಿದೆ. ತುಘಲಕ್ ದರ್ಬಾರ್ ಮಾಡುತ್ತಿರುವ ಸರ್ಕಾರವನ್ನು ಬಡಿದೆಚ್ಚರಿಸಬೇಕಿದೆ. ಅದಕ್ಕಾಗಿ ಈ ಹೋರಾಟʼ ಎಂದು ಭಾನುಪ್ರಕಾಶ್ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದರು.
ಇದನ್ನೂ ಓದಿ – ಬಂಗಾರಪ್ಪಗೆ ಎದುರಾಳಿಯಾಗಿದ್ದರು, ಗಾಜನೂರಿನಿಂದ ಗೆದ್ದಿದ್ದರು, ಭಾನುಪ್ರಕಾಶ್ ಕುರಿತು ಇಲ್ಲಿದೆ 5 ಪ್ರಮುಖಾಂಶ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200