‘ಬಡವರಿಗೆ ಹಂಚುವ ಮನೆಗಳಲ್ಲೂ ಮುಸ್ಲಿಮರಿಗೆ ಮೀಸಲಾತಿ’, ಕಾಂಗ್ರೆಸ್‌ ವಿರುದ್ಧ MLA ಸಿಡಿಮಿಡಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಸ್ವಾತಂತ್ರ್ಯಕ್ಕು ಮೊದಲು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದರು. ಇಷ್ಟಾದರು ಕಾಂಗ್ರೆಸ್‌ ಪಕ್ಷ ಮುಸ್ಲಿಮರ ತುಷ್ಠೀಕರಣ ನೀತಿ ಬಿಟ್ಟಿಲ್ಲ. ಬಡವರಿಗೆ ಹಂಚುವ ಮನೆಗಳಲ್ಲಿಯು ಶೇ.15ರಷ್ಟು ಮೀಸಲಾತಿ (Reservation) ನೀಡಲಾಗಿದೆ. ಇದು ಅತ್ಯಂತ ಘೋರ ಎಂದು ಶಾಸಕ ಎಸ್‌.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಎನ್.ಚನ್ನಬಸಪ್ಪ, ಮುಸ್ಲಿಮರಿಗೆ ವಸತಿ ನೀಡಬಾರದು ಎಂದು ನಾವು ಹೇಳುತ್ತಿಲ್ಲ. ಎಲ್ಲಾ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ವಸತಿ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಇದರಲ್ಲಿಯು ಮುಸ್ಲಿಮರಿಗೆ ಶೇ.15ರಷ್ಟು ಮೀಸಲಾತಿ (Reservation) ನಿಗದಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು.

ಕಾಂಗ್ರೆಸ್‌ ಸರ್ಕಾರ ಈ ಮೊದಲು ಯೋಜನೆಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು. ಈಗ ವಸತಿ ಯೋಜನೆಗಳಲ್ಲಿ ಮೀಸಲು ನಿಗದಿಪಡಿಸಿದೆ. ಕಾಂಗ್ರೆಸ್‌ ಪಕ್ಷ ತುಷ್ಠೀಕರಣ ಬಿಡಬೇಕು. ಡೋಂಗಿ ಜಾತ್ಯತೀತವನ್ನು ಕೈ ಬಿಡಬೇಕು.ಎಸ್‌.ಎನ್.ಚನ್ನಬಸಪ್ಪ, ಶಾಸಕ

‘ಯಡಿಯೂರಪ್ಪ ಹೋರಾಟದಿಂದಲೆ ಸಚಿವರಾಗಿದ್ದೀರಿ’

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಟೀಕಿಸಿದ್ದಾರೆ. ಯಡಿಯೂರಪ್ಪ ಅವರು ಕೂಲಿ ಕಾರ್ಮಿಕರು, ಶ್ರಮಿಕರು, ರೈತ ಪರ ಹೋರಾಟ ಮಾಡಿ ಜೈಲಿಗೆ ಹೋಗಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ಬಿಜೆಪಿ ನಾಯಕರು ಮತ್ತು ಯಡಿಯೂರಪ್ಪ ಹೋರಾಟ ಮಾಡಿ ಜೈಲಿಗೆ ಹೋಗಿದ್ದರು‌. ಇದರಿಂದಾಗಿಯೇ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಅದೇ ಕಾರಣಕ್ಕೆ ಮಧು ಬಂಗಾರಪ್ಪ ಇವತ್ತು ಸಚಿವರಾಗಿದ್ದಾರೆ.

MLA-SN-Channabasappa-Press-Meet-at-Shimoga-BJP-Office

ಯಡಿಯೂರಪ್ಪ ಅವರನ್ನು ಮಟ್ಟ ಹಾಕಲು ಅವರ ವಿರುದ್ಧ ಈಚೆಗೆ ಪ್ರಕರಣ ದಾಖಲು ಮಾಡಲಾಗಿತ್ತು. ನ್ಯಾಯಾಲಯ ಕ್ಲೀನ್ ಚಿಟ್ ನೀಡಿದ ಮೇಲೂ ಆರೋಪ ಮಾಡುವುದು ಸರಿಯಲ್ಲ. ಶಿಕ್ಷಣ ಸಚಿವರು ಸುಳ್ಳು ಹೇಳುವುದನ್ನು ಬಿಡಬೇಕು.ಎಸ್‌.ಎನ್.ಚನ್ನಬಸಪ್ಪ, ಶಾಸಕ

https://chat.whatsapp.com/JPJ0lTQsTKf365Fqu6Q7cd

ಸರ್ಕಾರ ಭ್ರಷ್ಟಾಚಾರದ ಕೂಪ

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ ಎಂಬುದನ್ನು ಅವರ ಶಾಸಕರೆ ಬಹಿರಂಗಪಡಿಸುತ್ತಿದ್ದಾರೆ. ಬಡವರಿಗೆ ಸೂರು ನೀಡುವ ವಸತಿ ನಿಗಮಗಳು ಮತ್ತು ವಸತಿ ಯೋಜನೆಯಲ್ಲಿನ ಭ್ರಷ್ಟಾಚಾರ ಕುರಿತು ಶಾಸಕ ಬಿ.ಆರ್.ಪಾಟೀಲ್ ನೋವು ಹಂಚಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನಿಖೆಯ ಯೋಚನೆ ಮಾಡದಿರುವುದು ದುರದೃಷ್ಟ ಎಂದು ಬೇಸರ ವ್ಯಕ್ತಪಡಿಸಿದರು.

MLA-SN-Channabasappa-Press-Meet-at-Shimoga-BJP-Office

ವಸತಿ ಸಚಿವ ಜಮೀರ್ ಅಹಮದ್ ಅವರ ಮೂಗಿನ ಅಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅವರಿಗೇ ಗೊತ್ತಿಲ್ಲದಿರುವುದು ಹೇಗೆ. ಮೊದಲು ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು. ಆ ಬಳಿಕ ವಸತಿ ಯೋಜನೆಯಲ್ಲಿನ ಭ್ರಷ್ಟಾಚಾರದ ಕುರಿತು ತನಿಖೆ ನಡೆಯಬೇಕು.ಎಸ್‌.ಎನ್.ಚನ್ನಬಸಪ್ಪ, ಶಾಸಕ

MLA-SN-Channabasappa-Press-Meet-at-Shimoga-BJP-Office

ಅನೇಕ ಇಲಾಖೆಯಲ್ಲಿ ಇದೇ ಮಾದರಿ ಭ್ರಷ್ಟಾಚಾರ ನಡೆಯುತ್ತಿದೆ. ಗುತ್ತಿಗೆದಾರರು ಹೋದರೆ ಯೋಜನೆಗೆ ಅನುಮತಿ ನೀಡಲಾಗುತ್ತದೆ. ಶಾಸಕರು ಹೋದರೆ ಅನುಮತಿ ನಿರಾಕರಿಸಲಾಗುತ್ತಿದೆ. ಇದರ ಬಗ್ಗೆ ಅನೇಕರು ಆರೋಪಿಸಿದ್ದಾರೆ. ಈ ಕುರಿತು ತನಿಖೆಯಾಗಬೇಕು. ಮುಸ್ಲಿಂ ತುಷ್ಠೀಕರಣದ ವಿರುದ್ಧ, ಹಿಂದೂಗಳ ಮೇಲಿನ ದಬ್ಬಾಳಿಕೆ ನಿಲ್ಲಿಸುವಂತೆ ವಿಧಾನಸಭೆ ಅಧಿವೇಶನದ ಒಳಗೆ, ಹೊರಗೆ ಬೃಹತ್ ಹೋರಾಟವನ್ನು ಮಾಡಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್‌.ಕೆ.ಜಗದೀಶ್‌, ನಗರ ಅಧ್ಯಕ್ಷ ಮೋಹನ್‌ ರೆಡ್ಡಿ ಸೇರಿ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಇದನ್ನೂ ಓದಿ » ಗಾಜನೂರಿನ ತುಂಗಾ ಜಲಾಶಯದ ಒಳ, ಹೊರ ಇರುವು ಇಳಿಕೆ, ಇವತ್ತು ಎಷ್ಟಿದೆ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment