SHIVAMOGGA LIVE NEWS | 13 FEBRUARY 2024
SHIMOGA : ಕೆಲ ವರ್ಷಗಳ ಹಿಂದೆ ಬಿಜೆಪಿಯಲ್ಲಿ ನಾಯಕರು ಇದ್ದರು. ಈಗ ಇರುವುದು ಕೇವಲ ಕಾಂಗರುಗಳು. ಅವರಿಗೆ ತಮ್ಮ ಮಕ್ಕಳಿಗೆ ಸುರಕ್ಷಿತವಾದ ವ್ಯವಸ್ಥೆ ಮಾಡುವುದಷ್ಟೇ ಚಿಂತೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಎಲ್ಲ ನಾಯಕರ ಮಕ್ಕಳಿಗೂ ಅಧಿಕಾರ ಸಿಕ್ಕಿದೆ. ಆದರೆ ನನ್ನ ಮಗನಿಗೆ ಏನೂ ಸಿಕ್ಕಿಲ್ಲ ಎಂಬ ಚಿಂತೆ ಆ ಪಕ್ಷದ ನಾಯಕರೊಬ್ಬರಲ್ಲಿದೆ. ಅವರಿಗೆ ರಾಜಕೀಯದಲ್ಲಿ ಕಳೆದುಹೋಗುತ್ತೇನೆಂಬ ಆತಂಕವಿದೆ. ಹೀಗಾಗಿ ದಿಢೀರ್ ರಾಷ್ಟ್ರಭಕ್ತಿ ಜಾಗೃತವಾಗಿದೆ. ದೇವರು, ದೇಶದ ಹೆಸರಿನಲ್ಲಿ ಅಮಲನ್ನು ಹಚ್ಚಿ ನಿಮಗೆ ದೇಶ ಪ್ರೇಮಿ ಎಂದು ಕರೆಸಿಕೊಳ್ಳು ಹಕ್ಕು ಏನಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ವಿರುದ್ಧ ದೂರು ಕೊಟ್ಟವರಾರು
ಇತಿಹಾಸವನ್ನು ಅವರು ಒಮ್ಮೆ ಅವಲೋಕಿಸಲಿ. ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ಕೊಟ್ಟವರು ಯಾರು? ರಾಜ್ಯಪಾಲರನ್ನು ಭೇಟಿ ಮಾಡಿದವರು ಯಾರು? ನೋಟು ಎಣಿಸುವ ಯಂತ್ರ ಇಟ್ಟುಕೊಂಡವರು ಯಾರು? ಡಿ.ಕೆ.ಶಿವಕುಮಾರ್ಗೆ ಪದೇ ಪದೇ ಜೈಲಿಗೆ ಹೋದವರು ಎಂದು ಹೇಳಲು ಕಾರಣವೇನು ಎಂದು ಟೀಕಿಸಿದರು.
ಬಾಯಿ ತಪ್ಪಿ ಆ ವಾಕ್ಯ ಹೇಳಿರಬಹುದು
ಸಂಸದ ಡಿ.ಕೆ.ಸುರೇಶ್ ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಬೇಕು ಎಂದು ಹೇಳಿರುವ ನೋವಿನ ಹಿಂದಿನ ಭಾವನೆ ಅರ್ಥ ಮಾಡಿಕೊಳ್ಳಬೇಕು. ಮೇಕೆದಾಟು, ಕಾವೇರಿ, ಮಹದಾಯಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನೆರೆ, ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರ ನಮ್ಮ ರಾಜ್ಯವನ್ನು ಕಡೆಗಣಿಸಿದೆ. ಹೀಗಾಗಿ ಸುರೇಶ್ ಹತಾಶೆಯಿಂದ ಮಾತನಾಡುವ ಭರದಲ್ಲಿ ಬಾಯಿತಪ್ಪಿ ಆ ವಾಕ್ಯ ಹೇಳಿರಬಹುದು ಎಂದು ಆಯನೂರು ಹೇಳಿದರು.
ಜಿಲ್ಲೆಗೂ ಕೇಂದ್ರದಿಂದ ಅನ್ಯಾಯ
ರಾಜ್ಯಕ್ಕೆ ಮಾತ್ರವಲ್ಲ ಜಿಲ್ಲೆಗೂ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಮಾಡುವುದಾಗಿ ಹೇಳಿದ್ದ ಅಮಿತ್ ಶಾ ಇದುವರೆಗೂ ಅದನ್ನು ಮಾಡಿಲ್ಲ. ತುಮಕೂರು– ಶಿವಮೊಗ್ಗ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಭದ್ರಾವತಿಯ ವಿಐಎಸ್ಎಲ್ಗೆ ನೆರವು ಕೊಡುವುದಾಗಿ ಹೇಳಿದ್ದರು. ಕೊನೆಗೂ ಕೊಡಲಿಲ್ಲ ಎಂದರು.
ಇದನ್ನೂ ಓದಿ – ಭದ್ರಾವತಿ ಆಹಾರ ಇಲಾಖೆ ಗೋದಾಮಿನ ಗೋಡೆಗೆ ಭಿತ್ತಿ ಪತ್ರ ಅಂಟಿಸಿ, ಪ್ರತಿಭಟನೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200